Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಾಂಗ್ಲಾ ವಿರುದ್ಧ ಭಾರತಕ್ಕೆ ಐದು ರನ್ ಗಳ ರೋಚಕ ಜಯ

ಅಡಿಲೇಡ್: ಟಿ 20 ವಿಶ್ವಕಪ್ ಸೂಪರ್ 12ರ ಪಂದ್ಯದಲ್ಲಿ ಭಾರತ ಬುಧವಾರ ಬಾಂಗ್ಲಾದೇಶ ವಿರುದ್ಧ ಐದು ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಅಡಿಲೆಡ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದಂತೆ ಬಾಂಗ್ಲಾದೇಶಕ್ಕೆ 16 ಓವರ್ಗಳಿಗೆ 151 ರನ್ ಗಳ  ಗುರಿಯನ್ನು ನೀಡಲಾಯಿತು. 6 ವಿಕೆಟ್ ನಷ್ಟಕ್ಕೆ 145 ರನ್‌ ಗಳ ನ್ನಷ್ಟೇ ಗಳಿಸಲು ಬಾಂಗ್ಲಾ ಶಕ್ತವಾಯಿತು.

ಮಳೆಗೂ ಮುನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಅರ್ಧ ಶತಕ ಬಾರಿಸಿದ್ದ ಲಿಟನ್ ದಾಸ್ ರನ್ ಔಟ್ ಆಗಿದ್ದು ಬಾಂಗ್ಲಾ ಗೆಲುವಿನ ಆಸೆಗೆ ಮುಳ್ಳಾಯಿತು. 8ನೇ ಓವರ್‌ ನಲ್ಲಿ  ರನ್ ಗಾಗಿ ಓಡುತ್ತಿದ್ದ ವೇಳೆ ಕೆ.ಎಲ್. ರಾಹುಲ್ ಎಸೆದ ಚೆಂಡು ನೇರವಾಗಿ ವಿಕೆಟಿಗೆ  ಬಿದ್ದಿದ್ದರಿಂದ ಬಾಂಗ್ಲಾದ ಗೆಲುವಿನ ಕನಸು ಕಮರಿತು. ಲಿಟನ್ ಕೇವಲ 27 ಎಸೆತಗಳಲ್ಲಿ 3 ಸಿಕ್ಸರ್ ಒಳಗೊಂಡ 60 ರನ್ ಪೇರಿಸಿದರು.

ನೂರುಲ್ ಹಸನ್ ಮತ್ತು ತಸ್ಕಿನ್ ಅಹಮದ್ ಕೊನೆಯ ಎಸೆತದವರೆಗೆ ಬಾಂಗ್ಲಾದ ಗೆಲುವಿನ ಕನಸನ್ನು ಕಾಪಾಡಿಕೊಂಡು ಬಂದರು. ಕೊನೆಯ ಓವರ್‌ ನಲ್ಲಿ ಬಾಂಗ್ಲಾಕ್ಕೆ 20 ರನ್ ಗಳ ಸವಾಲು ಎದುರಾಗಿತ್ತು. ಆದರೆ 15 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಆರ್ಷದೀಪ್ ಸಿಂಗ್ ಎಸೆತವನ್ನು ಸಿಕ್ಸರ್ ಆಗಿ ಪರಿವರ್ತಿಸುವಲ್ಲಿ ವಿಫಲವಾಗುವುದರೊಂದಿಗೆ ಬಾಂಗ್ಲಾ ವೀರೋಚಿತ ಸೋಲು ಕಂಡಿತು. ಅಂತಿಮವಾ ಗಿ ಭಾರತ 5 ರನ್ ಗಳ ಜಯ ಸಾಧಿಸಿತು.

ಬಾಂಗ್ಲಾ ಪರ ನಜ್ಮುಲ್ ಹೊಸೈನ್ ಶಾಂತೋ 21, ನಾಯಕ ಶಕೀಬ್ ಅಲ್ ಹಸನ್ 13 , ನೂರುಲ್ ಹಸನ್ 25 ಮತ್ತು ತಸ್ಕಿನ್ ಅಹ್ಮದ್ 12 ರನ್ ಗಳಿಸಿದರು. .ಇದಕ್ಕೂ ಮುನ್ನ ಟಾಸ್ ಗೆದ್ದು ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾ ಡಿಕೊಂಡಿತು. ಭಾರತ ತಂಡ ಕೆ.ಎಲ್.ರಾಹುಲ್ ಅವರ 50 , ಕೊಹ್ಲಿ ಅವರ ಅಜೇಯ 64 ರನ್ , ಸೂರ್ಯ ಕುಮಾರ್ ಯಾದವ್ ಅವರ 30 ರನ್‌ ಗಳ ಕೊಡುಗೆಯಿಂದ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ನಾಯಕ ರೋಹಿತ್ ಶರ್ಮ 2 ರನ್ ಗೆ ಔಟಾಗಿ ನಿರಾಶೆ ಅನುಭವಿಸಿದರು.

ಹಾರ್ದಿಕ್‌ ಪಾಂಡ್ಯ, ದಿನೇಶ್ ಕಾರ್ತಿಕ್ ಮತ್ತು ಅಕ್ಷರ್‌ ಪಟೇಲ್‌ ಒಂದಂಕಿ ದಾಟಲಿಲ್ಲ. ಆದರೆ ಅಶ್ವಿನ್ ಅಜೇಯ 13 ರನ್ ಗಳಿಸಿ ಕೊಹ್ಲಿ ಅವರಿಗೆ ಸಾಥ್‌ ನೀಡಿದ್ದಲ್ಲದೇ  ಮೊತ್ತವನ್ನು 180ರ ಗಡಿ ದಾಟಿಸಲು ನೆರವಾದರು.

ಮಳೆ ಪಂದ್ಯಕ್ಕೆ ಅಡ್ಡಿ ಮಾಡಿದಾಗ ಬಾಂಗ್ಲಾ ತಂಡ ಡಿಎಲ್ ಎಸ್ ನಿಯಮದಂತೆ 17 ರನ್ ಮುನ್ನಡೆ ಹೊಂದಿತ್ತು. ಪಂದ್ಯ ರದ್ದಾಗಿದ್ದರೆ ಭಾರತ ಸೋಲುವ ಸ್ಥಿತಿ ನಿರ್ಮಾಣವಾಗಿತ್ತು. ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಶಮಿ 1 ವಿಕೆಟ್ ಪಡೆದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ