Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್. ನರೇಂದ್ರ ಚಾಲನೆ

ಹನೂರು: ನಮ್ಮ ಕ್ಷೇತ್ರಕ್ಕೆ ಟಿಬೆಟಿಯನ್ ನಿರಾಶ್ರಿತರ ಬಂದು ನಲವತ್ತು ವರ್ಷಗಳು ಕಳೆದಿದೆ.ಇದುವರೆಗೆ ಯಾವುದೇ ವಿಚಾರಕ್ಕೂ ಒಂದು ಸಣ್ಣ ಗಲಭೆ ನಡೆಯದಿರುವುದು ಸಂತಸದ ವಿಚಾರ ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.

ತಾಲ್ಲೂಕಿನ ಕೊಳ್ಳೇಗಾಲ ಹಾಸನೂರು ರಸ್ತೆಯಿಂದ ಟಿಬೆಟ್ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಟಿಬೆಟಿಯನ್ ಕಾಲೋನಿಯಲ್ಲಿನ ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆ.ಇವರು ನಮ್ಮ ಭಾಗದ ರೈತರಿಗೆ ಮಾದರಿಯಾಗಿದ್ದಾರೆ. ಕಾಲೋನಿಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಲೇಜ್ ಗಳಿದ್ದು .ಈ ವಿಲೇಜ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಸರಿಯಾದ ರಸ್ತೆಯಿರಲಿಲ್ಲ . ಈ ಹಿನ್ನೆಲೆ ಕಳೆದ 5 ತಿಂಗಳ ಹಿಂದೆ 5ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಪೂರ್ಣಗೊಂಡಿದೆ. ಇದೀಗ ಬಾಕಿ ಉಳಿದಿದ್ದ 3 ವಿಲೇಜ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 6ಕೋಟಿ ಅನುದಾನ ನೀಡಿರುವುದರಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಇಪ್ಪತ್ತು ವರ್ಷಗಳು ಬಾಳಿಕೆ ಬರುವಂತೆ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಟಿಬೆಟಿಯನ್ ಹನೂರು ಪ್ರಾಂತ್ಯದ ಅಧ್ಯಕ್ಷ ಗೇಲಿಕ್ ಜೋನಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ,ಲೋಕೋಪಯೋಗಿ ಎಇಇರಾಜೇಶ್ ಮುನ್ಸಿ,ಎಇ ಚಿನ್ನಣ್ಣ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್ ‘ಮುಖಂಡರುಗಳಾದ ಪುಟ್ಟ ವೀರ ನಾಯ್ಕ, ಜಗದೀಶ್, ಸತೀಶ್ ,ಪಿಡಿಒ ರಾಜು, ಗುತ್ತಿಗೆದಾರ ಅಮೃತೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ