Mysore
23
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ವೀರಭದ್ರೇಶ್ವರ ನೂತನ ರಥ ನಿರ್ಮಾಣಕ್ಕೆ ಕ್ರಮ ; ಸೋಮಣ್ಣ ಭರವಸೆ

ಚಾಮರಾಜನಗರ: ತಾಲ್ಲೂಕಿನ ಚೆನ್ನಪ್ಪನಪುರ ಬಳಿಯ ವೀರಭದ್ರೇಶ್ವರ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿ ರಥ ಮುರಿದು ಬಿದ್ದ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.

ಬುಧವಾರ ಮಧ್ಯಾಹ್ನ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ರಮೇಶ್, ಜಿಪಂ ಸಿಇಒ ಗಾಯತ್ರಿ ಅವರೊಡನೆ ದೇವಾಲಯಕ್ಕೆ ತೆರಳಿ ಮುರಿದ ರಥ ಭಾಗಗಳನ್ನು ವೀಕ್ಷಿಸಿದರು.

ರಥ ಮುರಿದು ಬಿದ್ದ ಸ್ಥಳ ವೀಕ್ಷಿಸಿ ದೇವಾಲಯದ ಕೋಮುವಾರುಗಳ ಮುಖ್ಯಸ್ಥರು, ತಹಸೀಲ್ದಾರ್, ಚೆನ್ನಪ್ಪನಪುರ ಮತ್ತು ಅಮಚವಾಡಿಯ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ನಂತರ ವೀರಭದ್ರೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿ, ಈ ಘಟನೆ ನಡೆಯಬಾರದಿತ್ತು. ಸದ್ಯ ಯಾವುದೇ ಅಪಾಯವಾಗಿಲ್ಲ . ಹೊಸ ರಥ ನಿರ್ಮಾಣಕ್ಕೆ ಕ್ರಮ. ವಹಿಸಲಾಗುವುದು. ಈ ಸಂಬಂಧ 15 ದಿನಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!