ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯಲ್ಲಿ ಹುಲಿಯ ನಾಲ್ಕು ಉಗುರುಗಳನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಸಿಐಡಿ ಘಟಕದ ಅಧಿಕಾರಿಗಳು ಗುರುವಾರ ಸಂಜೆ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮದ ಮಹೇಂದ್ರ (26)ಬಂಧಿತ ಆರೋಪಿ.ಖಚಿತ ಮಾಹಿತಿ ಮೇರೆಗೆ ಸಂಜೆ 5ಗಂಟೆಯಲ್ಲಿ ದಾಳಿ ಮಾಡಿ ಶೋಧ ನಡೆಸಿದಾಗ ಮನೆಯಲ್ಲಿ ಉಗುರುಗಳು ಪತ್ತೆಯಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಪೆಟ್ರೋಲ್ ಬಂಕ್ ವೊಂದರಲ್ಲಿ ಆರೋಪಿ
ಕೆಲಸ ಮಾಡುತ್ತಿದ್ದು ತಾಳವಾಡಿ ಭಾಗದಿಂದ ಹುಲಿ ಉಗುರುಗಳು ತಲುಪಿರುವ ಸುಳಿವು ಆಧರಿಸಿ ದಾಳಿ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.
ಪಿ ಎಸ್ಸೈ ಗಿರೀಶ್, ಮುಖ್ಯಪೇದೆಗಳಾದ ಹೆಚ್ .ಡಿ. ಸ್ವಾಮಿ ,ವೀರಭದ್ರಪ್ಪ,ಶಿವಪ್ರಸಾದ್ , ಪೇದೆಗಳಾದ
ಮಾದೇಶ್ ಕುಮಾರ್, ನವೀನ,ರಾಜು,ಗೋವಿಂದ ನಾಯ್ಕ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.