Mysore
27
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಹೆಗಲಿಗೆ ಗೋಣಿಚೀಲ ಹಾಕಿಕೊಂಡು ವಾಟಾಳ್ ಪ್ರತಿಭಟನೆ

ಚಾಮರಾಜನಗರ: ರಾಜ್ಯ ಸರ್ಕಾರ ಜಿಲ್ಲೆಗೆ ಮಳೆ ಹಾನಿ ಪರಿಹಾರ ಹಾಗೂ ಅನುದಾನ ನೀಡಿಲ್ಲ ಎಂದು ಆರೋಪಿಸಿ ಮಾಜಿ ಶಾಸಕರಾದ ವಾಟಾಳ್ ನಾಗರಾಜ್ ಅವರು ಹೆಗಲಿಗೆ ಗೋಣಿಚೀಲ ಹಾಕಿಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಮುಂಭಾಗ ತಮ್ಮ ಬೆಂಬಲಿಗರೊಂದಿಗೆ ಜಮಾಯಿಸಿದ ಅವರು, ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಫಸಲು, ಆಸ್ತಿ, ಮನೆ ಹಾನಿಯಾಗಿದೆ. ಸೂಕ್ತ ಪರಿಹಾರ ನೀಡಿಲ್ಲ ಎಂದು ದೂರಿದರು.
ಕೊರೊನಾ ಸಂದರ್ಭದಲ್ಲಿ ಸುಮಾರು ೨೭ ಜನರು ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರೂ ಸಂಸದರು, ಸಚಿವರು, ಶಾಸಕರು, ಮುಖ್ಯಮಂತ್ರಿ ಕಾಳಜಿ ತೋರಲಿಲ್ಲ. ಮೃತರ ಕುಟುಂಬದವರು ತಬ್ಬಲಿಯಾದರು ಅವರಿಗೆ ನ್ಯಾಯಯುತ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳೇ ಈ ಜಿಲ್ಲೆಗೆ ಎಷ್ಟು ಹಾಗೂ ಬೇರೆ ಜಿಲ್ಲೆಗಳಿಗೆ ಎಷ್ಟೇಷ್ಟು ಅನುದಾನ ಕೊಟ್ಟಿದ್ದೀರಿ ಎಂಬುದರ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ. ಹಿಂದುಳಿದ ಈ ಗಡಿ ಜಿಲ್ಲೆಯನ್ನು ಕಡೆಗಣಿಸಲು ಏನು ಕಾರಣ. ಇದು ಒಳ್ಳೆಯದಲ್ಲ. ಇದೇ ರೀತಿ ಮುಂದುವರೆಸಿದರೆ ನಗರಕ್ಕೆ ಮಂತ್ರಿಗಳು ನಗರಕ್ಕೆ ಆಗಮಿಸದಂತೆ ತಡೆಯುವುದಾಗಿ ಎಚ್ಚರಿಸಿದರು.
ರಾಜೀನಾಮೆ ನೀಡಲಿ: ಸಚಿವರಾಗಿ ಮಹಿಳೆಗೆ ಹೊಡೆಯುವುದು ಖಂಡನೀಯ. ಇಷ್ಟೋತಿಗಾಗಲೇ ಮುಖ್ಯಮಂತ್ರಿ ತಮ್ಮ ಸರ್ಕಾರದ ನಿಲುವನ್ನು ಪ್ರಕಟಿ ಮಾಡಬೇಕಿತ್ತು. ವಿ.ಸೋಮಣ್ಣ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ರಾಜೀನಾಮೆಯನ್ನು ಇಷ್ಟೋತ್ತಿಗೆ ಕೊಟ್ಟಿದ್ರೆ ಅವರಿಗೆ ಗೌರವ ಬರುತ್ತಿತ್ತು. ಮಹಿಳೆಯ ಕಪಾಲಕ್ಕೆ ಮಂತ್ರಿ ಹೊಡೆಯುವುದು ಅನಾಗರೀಕ ವರ್ತನೆಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಅಜಯ್, ಹುಂಡಿಬಸವಣ್ಣ, ವಡ್ರಹಳ್ಳಿ ಮಹೇಶ್, ಶಿವಲಿಂಗಮೂರ್ತಿ, ಗೋಪಾಲನಾಯಕ, ಪಾರ್ಥಸಾರಥಿ, ಚಾ.ರಾ.ಕುಮಾರ್, ಕೊ.ನ.ನಾಗರಾಜು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!