Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಹೂಡಿಕೆ ಹೆಸರಲ್ಲಿ ಮೋಸ ಹೋಗಿದ್ದೀರಾ ? ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ

ಮೈಸೂರು: ಹಿಮಾಲಯ ಕಾಮೋಡಿಟೀಸ್, ಗುಡ್ವಿಲ್ ವೆಲ್ತ್ ಮ್ಯಾನೇಜ್ಮೆಂಟ್, ಗುಡ್ವಿಲ್ ಕಾಂ ಟ್ರೇಡ್ಸ್ ಎಂಬ ಹೆಸರಿನ ಕಂಪೆನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವವರು ಸೂಕ್ತ ದಾಖಲಾತಿಗಳೊಂದಿಗೆ ನಗರದ ಸೆನ್ ಕ್ರೈಂ ಪೊಲೀಸರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಟ್ಟಗಳ್ಳಿಯ ಸೋಮನಾಥನಗರದ ವಿಶ್ವಮಾನವ ಜೋಡಿರಸ್ತೆಯ ಆದಿತ್ಯ ಸರ್ಕಲ್ ಬಳಿ ಇರುವ ಜಿ.ಎನ್.ಕೃಷ್ಣಮೂರ್ತಿ ಹಾಗೂ ಆತನ ಪತ್ನಿ ಡಯಾನ ಎಂಬವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶವನ್ನು ನೀಡುವುದಾಗಿ ತಿಳಿಸಿ ೨೦೧೪ರಿಂದ ೨೦೨೧ರವರೆಗೆ ಜನರಿಂದ ಒಟ್ಟು ೨,೧೪,೮೪,೫೦೦ ರೂ. ಹೂಡಿಕೆ ಮಾಡಿಸಿ, ಲಾಂಭಾಂಶವನ್ನು ನೀಡದೆ, ಹೂಡಿಕೆ ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿರುವ ಬಗ್ಗೆ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಜಿ.ಎನ್.ಕೃಷ್ಣಮೂರ್ತಿ ಅವರನ್ನು ಅ.೧೩ರಂದು ಬಂಧಿಸಿ ವಿಚಾರಣೆ ಮಾಡಲಾಗಿ ಈತ ಇತರೆ ಆರೋಪಿಗಳಾದ ಲಕ್ಷ್ಮೀಶ ಹಾಗೂ ರಘುಕುಮಾರ್ ಎಂಬವರ ಜತೆ ಸೇರಿಕೊಂಡು ಹಿಮಾಲಯ ಕಮೋಡಿಟೀಸ್, ಗುಡ್ವಿಲ್ ವೆಲ್ತ್ ಮ್ಯಾನೇಜ್ಮೆಂಟ್, ಗುಡ್ವಿಲ್ ಕಾಂ ಟ್ರೇಡ್ಸ್ ಎಂಬ ಕಂಪೆನಿಗಳನ್ನು ವಿವಿಧ ಸ್ಥಳಗಳಲ್ಲಿ ತೆರೆದು ಈ ಕಂಪೆನಿಗಳ ಮೂಲಕ ಸಾರ್ವಜನಿಕರಿಂದ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವುದು ತಿಳಿದು ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ವ್ಯಕ್ತಿಗಳು ಮತ್ತು ಕಂಪೆನಿಗಳ ಮೇಲೆ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಸಾರ್ವಜನಿಕರು ಅವಶ್ಯ ದಾಖಲಾತಿಗಳೊಂದಿಗೆ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರನ್ನು ಸಂಪರ್ಕಿಸಲು ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!