Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಮಂಡ್ಯ – ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ಪರಿಹಾರ ವಿತರಿಸಿದ ಜಮೀರ್ ಅಹ್ಮದ್ ಖಾನ್

ಮಂಡ್ಯ : ಕಳೆದ ವಾರದಂದು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ಇಂದು ಜಮೀರ್‌ ಅಹಮ್ಮದ್‌ ಅವರು ಭೇಟಿ ನೀಡಿ, ಕೊಲೆಯಾದ ಬಾಲಕಿಯ ತಂದೆ ತಾಯಿಗಳಿಗೆ ಸಾಂತ್ಬನ ಹೇಳಿದರು.
ನಳಿಕ ಮಾನವೀಯ ಹಿನ್ನೆಲೆ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗು ಉದ್ದೇಶದಿಂದ 5 ಲಕ್ಷ ರೂಪಾಯಿಗಳ ಪರಿಹಾರವನ್ನು ವಿತರಿಸಿ,ಬಾಲಕಿಯ ತಂದೆ ತಾಯಿಗೆ ಧೈರ್ಯತುಂಬಿದ್ದಾರೆ.

ಮನೆಪಾಠಕ್ಕೆoದು ತೆರಳಿ ಕೊಲೆಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಹೀಗಾಗಿ ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಜತೆಗೆ, ಆರೋಪಿಯನ್ನು ಗುರುವಾರ ರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಾಯಿತು.

ಪಟ್ಟಣದ ೧೦ ವರ್ಷದ ಬಾಲಕಿಯನ್ನು ಟ್ಯೂಷನ್ ಸಂಸ್ಥೆ ಮಾಲೀಕ, ಮಳವಳ್ಳಿ ತಾಲೂಕು ನೆಲಮಾಕನಹಳ್ಳಿ ನಿವಾಸಿ ಕಾಂತರಾಜು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದನು. ಬಳಿಕ ಬಾಲಕಿಯ ಶವವನ್ನು ಟ್ಯೂಷನ್ ನಡೆಯುತ್ತಿದ್ದ ಕಟ್ಟಡದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ನೀರಿನ ಸಂಪ್‌ನೊಳಗೆ ಹಾಕಿದ್ದರು.
ಮನೆಗೆ ಬಾರದ ಬಾಲಕಿಗಾಗಿ ಪೋಷಕರು ಹುಡುಕಾಟ ನಡೆಸಿದಾಗ, ಕಾಂತರಾಜು ಕೂಡ ಅವರೊಂದಿಗೆ ಸೇರಿ ಬಾಲಕಿಯನ್ನು ಹುಡುಕುವ ನಾಟಕವಾಡಿದ್ದನು. ಶವ ಪತ್ತೆಯಾದ ಬಳಿಕ ಕಾಂತರಾಜು ಮೇಲೆ ಅನುಮಾನ ವ್ಯಕ್ತಪಡಿಸಿ, ಆತನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಜತೆಗೆ, ಪೋಷಕರು ನೀಡಿದ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ ೩೦೨ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಗುರುವಾರ ಬಂದ ವೈದ್ಯಕೀಯ ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ ೩೦೨ ಜತೆಗೆ, ೨೦೧, ೩೭೬(ಎ), ೩೭೬(ಎಬಿ), ಕಲಂ ೫(ಐ) ೫(ಎಂ) ೪ ಮತ್ತು ೬ ಹಾಗೂ ಪೋಕ್ಸೋ ಕಾಯಿದೆ-೨೦೧೨ನ್ನು ಸೇರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!