Mysore
24
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಮೈಸೂರು: ಮಾದಕ ವಸ್ತು ಹೊಂದಿದ್ದ ಮೂವರ ಬಂಧನ

1.20 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ವಾದಕ ವಸ್ತು, 2 ದ್ವಿಚಕ್ರ ವಾಹನ, 2 ಲ್ಯಾಪ್‌ಟ್ಯಾಪ್, 5 ಮೊಬೈಲ್ ಫೋನ್ ವಶ

ಮೈಸೂರು: ಮಾದಕ ವಸ್ತುಗಳನ್ನು ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಗಳಿಂದ 1.20 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಮಾದಕ ವಸ್ತು, 2 ದ್ವಿಚಕ್ರ ವಾಹನ, 2 ಲ್ಯಾಪ್‌ಟ್ಯಾಪ್ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಪೊಲೀಸರು ಮತ್ತು ಸೆನ್ ಕ್ರೈಂ ಪೊಲೀಸರು ಭಾನುವಾರ ಜಂಟಿಯಾಗಿ ನಗರದ ಬೋಗಾದಿ ಬಳಿಯ ಎಸ್.ಎಂ.ಬಡಾವಣೆ ಬಳಿ ಇರುವ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ತಂದು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ವಾಡುತ್ತಿದ್ದರು ಎಂದು ತಿಳಿದರು ಬಂದಿದೆ.

ಸಿಸಿಬಿ ಘಟಕದ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಶೇಖರ್, ಸಿಬ್ಬಂದಿಗಳಾದ ಸಲೀಂಖಾನ್, ಪಿ.ಎನ್.ಲಕ್ಷ್ಕೀಕಾಂತ, ಪ್ರಕಾಶ್, ಸೆನ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುವಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!