ಬೆಂಗಳೂರು ; ಕೆಜಿಎಫ್’ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈಗ ‘ಕಾಂತಾರ’ ಮೂಲಕ ಮತ್ತೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ‘ಕಾಂತಾರ’ ಸಿನಿಮಾವನ್ನು ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಇದೀಗ ಕನ್ನಡದ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಚಿತ್ರವನ್ನು ನೋಡಿ ಹೊಗಳಿದ್ದಾರೆ.
ನಿರ್ದೇಶಕ ರಿಷಬ್ ಶೆಟ್ಟಿ ‘ಕಾಂತಾರ’ ಮೂಲಕ ಹೊಸದೊಂದು ದಾಖಲೆ ಬರೆಯುತ್ತಿದ್ದಾರೆ. ‘ಕಾಂತಾರ’ ಸಿನಿಮಾದಿಂದ ನಟನಾಗಿ, ನಿರ್ದೇಶಕನಾಗಿ ದೊಡ್ಡ ಬ್ರೇಕ್ ಪಡೆದುಕೊಂಡಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ಅಂತೂ ಸದ್ಯಕ್ಕೆ ತಗ್ಗುವ ಲಕ್ಷಣಗಳಿಲ್ಲ. ದಿನದಿಂದ ಕಲೆಕ್ಷನ್‌ನಲ್ಲಿ ಏರಿಕೆಯೇ ಕಂಡುಬರುತ್ತಿದೆ. ಈ ನಡುವೆ ಸಿನಿಮಾಗಳನ್ನು ಮೆಚ್ಚಿಕೊಳ್ಳುತ್ತಿರುವ ಸೆಲೆಬ್ರಿಟಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕನ್ನಡದ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರು ಕೂಡ ‘ಕಾಂತಾರ’ಗೆ ಮನತುಂಬಿ ಹಾರೈಸಿದ್ದಾರೆ. ‘ನಾಡು ತಿರುಗಿ ನೋಡುವಂತೆ ಮಾಡಿದ ‘ಕಾಂತಾರ’ ಸಾಧನೆಗೆ ಶರಣು ಶರಣಾರ್ಥಿ’ ಎಂದು ಯೋಗರಾಜ್ ಭಟ್ ಹೇಳಿದ್ದಾರೆ





