Mysore
19
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಪಟ್ಟಣ ಪಂಚಾಯಿತಿಯಿಂದ ಸಿಗದ ಸಮರ್ಪಕ ಅನುದಾನ : ಜೆಡಿಎಸ್ ಸದಸ್ಯರ ಪ್ರತಿಭಟನೆ

ಹನೂರು: ಜೆಡಿಎಸ್ ಸದಸ್ಯರುಗಳ ವಾರ್ಡ್ ಗಳಿಗೆ ಪಟ್ಟಣ ಪಂಚಾಯಿತಿಯ ಯಾವುದೇ ಅನುದಾನವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಕಳೆದ 2 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ವಾರ್ಡ್ ಗಳಿಗೆ ಲಕ್ಷ ಲಕ್ಷ ಅನುದಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಸದಸ್ಯರು ಎಂಬ ಕಾರಣಕ್ಕೆ ನಮಗೆ ಅನುದಾನ ನೀಡದೇ ಇರುವುದರಿಂದ ವಾರ್ಡ್ ಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಾವು ವಿಫಲರಾಗಿದ್ದೇವೆ. ವಾರ್ಡಗಳಲ್ಲಿ ತಿರುಗಾಡಲು ಸಾಧ್ಯವಾಗದೆ ತಪ್ಪಿಸಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ.ಎಂದು 13 ನೇ ವಾರ್ಡ್ ನ ಸದಸ್ಯ ಮಹೇಶ್ ಆರೋಪಿಸಿದರು.
ಎಂಟನೇ ವಾರ್ಡ್ ನ ಸದಸ್ಯ ಆನಂದ್ ಕುಮಾರ್ ಮಾತನಾಡಿ ನಾನು ಸದಸ್ಯನಾಗಿ ಆಯ್ಕೆಯಾದ ದಿನದಿಂದ ಇದುವರೆಗೆ ನನ್ನ ವಾರ್ಡ್ ಗೆ ಒಂದೇ ಒಂದು ರೂ ಅನುದಾನ ನೀಡಿಲ್ಲ ಇದು ಎಷ್ಟರ ಮಟ್ಟಿಗೆ ಸರಿ? ನನ್ನ ವಾರ್ಡ್ ನಲ್ಲಿ ಯಾವುದೇ ಸಮಸ್ಯೆಗಳಿಲ್ಲವೇ ಚರಂಡಿಗಳಲ್ಲಿ ಕಸ ಕಡ್ಡಿ ತುಂಬಿಕೊಂಡು ಗಬ್ಬು ನಾರುತ್ತಿದೆ,ಸಮರ್ಪಕ ನೀರಿನ ಪೂರೈಕೆಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನವನ್ನು ಎಲ್ಲಾ ವಾರ್ಡ್ ಗಳಿಗೆ ಸಮನಾಗಿ ಹಂಚಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಎಲ್ಲಾ ಸದಸ್ಯರು ಸಹಕರಿಸಿ ಎಂದು ಮನವಿ ಮಾಡಿದರು.

ಇದೇ ವೇಳೆ ಸದಸ್ಯರುಗಳಾದ ಹರೀಶ್ ಕುಮಾರ್, ಸುದೇಶ್, ಮಂಜುಳಾ, ಮಹೇಶ್ ನಾಯ್ಕ, ಮುಮ್ತಾಜ್ ಬಾನು, ಪವಿತ್ರ,ರೂಪ, ನಾಮ ನಿರ್ದೇಶಿತ ಸದಸ್ಯ ಪುಟ್ಟರಾಜು ಮುಖ್ಯಾಧಿಕಾರಿ ಪರಶಿವಯ್ಯ,ಸಿಬ್ಬಂದಿಗಳಾದ ಬಾಲಸುಬ್ರಮಣ್ಯ, ದ್ವಿತೀಯ ದರ್ಜೆ ಸಹಾಯಕ ಮಾದೇಶ್,ಪರಶಿವಮೂರ್ತಿ ಜೂನಿಯರ್ ಪ್ರೋಗ್ರಾಮರ್ ನಾಗೇಂದ್ರ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!