Mysore
22
overcast clouds

Social Media

ಮಂಗಳವಾರ, 06 ಜನವರಿ 2026
Light
Dark

ಅತ್ಯಾಚಾರ ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹ

ಪ್ರವರ್ಗ-1ರ ಜಾತಿಗಳ ಒಕ್ಕೂಟದ ಮುಖಂಡರಿಂದ ಪ್ರತಿಭಟನೆ

ಚಾಮರಾಜನಗರ: ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಚಾಚಾರ ಎಸಗಿದ ಶಿಕ್ಷಕ ಕಾಂತರಾಜು ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಪ್ರವರ್ಗ-೧ರ ಜಾತಿಗಳ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತ, ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಾಗಳಿರೇವಣ್ಣ ಮಾತನಾಡಿ, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ದಿವ್ಯಾ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದು, ನೀರಿನ ಸಂಪ್‌ನಲ್ಲಿ ಬಿಸಾಕಿರುವ ಶಿಕ್ಷಕ ಕಾಂತರಾಜು ಅವರಿಗೆ ಮರಣ ದಂಡನೆ ವಿಧಿಸ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಚುಂಗಡಿಪುರ ಮಹೇಶ್, ಕೋಟಂಬಳ್ಳಿ ಕುಮಾರ್, ಬೋರ್‌ವೆಲ್ ರಾಜುಗೌಡ, ಶಾಂತರಾಜು, ನಾಗರಾಜು, ಕೆ.ಕೆ.ಹುಂಡಿರಾಜು, ಕುದೇರು ಸುರೇಶ್, ಇರಸವಾಡಿ ಮಹದೇವಶೆಟ್ಟರು, ಬೂದಿತಿಟ್ಟು ಮಹದೇವು, ಸಿದ್ದಮುಳ್ಳೂರು, ವೆಂಕಟೇಶ್, ನಿರಂಜನ್, ಮಂಗಲಕುಮಾರ್, ಸಿದ್ದರಾಜು ಇತರರು ಪಾಲ್ಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!