ಹಾಡು ಪಾಡು

ಕೆಂಡಗಣ್ಣಿನ ಮೇಷ್ಟರ ತಾಯಿ ಕರುಳು

ಭಾಗ್ಯಜ್ಯೋತಿ ಹಿರೇಮಠ್

ಕನ್ನಡದ ಅನನ್ಯ ಕಥೆಗಾರ ಮೊಗಳ್ಳಿ ಸರ್ ಇಲ್ಲದ ಈ ಸಂದರ್ಭದಲ್ಲಿ ಅನೇಕರು ಮೌನ ಮುರಿದಿದ್ದಾರೆ. ಕೆಲವರು ವ್ರತನಿಷ್ಠರಿದ್ದಾರೆ, ಮತ್ತೂ ಕೆಲವರು ಅಸಹಾಯಕರಾಗಿದ್ದಾರೆ. ಮೇಷ್ಟ್ರನ್ನು ಹತ್ತಿರದಿಂದ ಬಲ್ಲ ನನಗೆ ಅವರೊಳಗಿನ ಸಂಕಟ, ನೋವು, ವಿಷಾದ, ತಾಳ್ಮೆ, ಅವೆಲ್ಲವನ್ನೂ ನಲಿವು ಮಾಡಿಕೊಳ್ಳುವ ಹಾದಿ ಮತ್ತು ಅವರ ಕೆಂಡಗಣ್ಣಿನ ಪರಿಚಯವೂ ಇದೆ. ಯಾವುದೇ ವಿಷಯವಿರಲಿ, ಅದರ ಜೀವದ್ರವ್ಯ ಅರಗಿಸಿಕೊಂಡು ಅರಳುತ್ತಿದ್ದ ಅವರ ಬೆರಗುಗಣ್ಣಿನ ಪರಿಚಯವೂ ಇದೆ. ಸಾಹಿತ್ಯದ ಭಿನ್ನ ನೆಲೆ- ಕಲೆಗಳ ಕುರಿತು ಅವರ ವಿಚಾರಗಳು ವಿದ್ಯಾರ್ಥಿಗಳಾದ ನಮಗೆಲ್ಲ ಅದರ ಅರಿವಿನ ಹರಿವನ್ನು ಹೆಚ್ಚಿಸುವಂತೇ ಇದ್ದವು. ಅವರ ಲೇಖನಿಯ ಹರಿತ, ಮಾತಿನ ಮೃದುತ್ವ ಹಾಗೂ ತಾಯಿಯ ಅಂತಃಕರಣ ಅವರನ್ನು ಬಲ್ಲವರಿಗೆ ಅಪರಿಚಿತವೇನಲ್ಲ.

ಮೇಷ್ಟ್ರ ಬಗೆಗಿನ ಆಡುವ ಮಾತುಗಳು ಎದೆಯಲ್ಲಿ ಹೆಪ್ಪುಗಟ್ಟಿವೆ. ಅವರ ಎದೆಯ ದನಿಯೆ ಲ್ಲವೂ ಬಯಲು ಬಯಲನೇ ಬಿತ್ತಿದಂತೆ ಕಾಣುತ್ತದೆ. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಮೇಷ್ಟ್ರು ಅವರವರ ಮಟ್ಟಕ್ಕೆ ನಿಲುಕುವಂತೆ ವಿಷಯವನ್ನು ಮನದಟ್ಟು ಮಾಡುತ್ತಿದ್ದರು. ಅಷ್ಟು ಸುಲಭವಲ್ಲ ಅವರ ಸಹವಾಸ ಆದರೆ ವಿಶ್ವಾಸ ಬಂದರೆ ವಿದ್ಯಾರ್ಥಿಗಳನ್ನು ದಡ ಸೇರಿಸುವ ತನಕ ತಾವೇ ಜವಾಬ್ದಾರಿ ತೆಗೆದುಕೊಂಡು ಯಾವ ನಿರೀಕ್ಷೆಯಿಲ್ಲದೆ ಆ ಕೆಲಸದಲ್ಲಿ ಮುಳುಗುತ್ತಿದ್ದರು. (ಉದಾಹರಣೆಗೆ ಸಂಶೋಧನೆ) ಎಷ್ಟೋ ಸಲ ಇವರೇ ಒತ್ತಡ ಮಾಡಿಕೊಳ್ಳುತ್ತಿದ್ದರು.

ನಾನು ಸಂಶೋಧನಾ ಅಭ್ಯಾಸ ಮಾಡಲು ಕನ್ನಡ ವಿಶ್ವವಿದ್ಯಾಲಯ ಸೇರಿದಾಗ ಕೋರ್ಸ್‌ವರ್ಕ್ ಅಂಥ ತರಗತಿಗಳು ಆರಂಭವಾದ ಸಂದರ್ಭದಲ್ಲಿ ಬೇರೆ ಬೇರೆ ವಿಭಾಗಗಳಿಂದ ಅಧ್ಯಾಪಕರು ಬಂದು ಪಾಠ ಮಾಡಿ ಹೋಗ್ತಿದ್ರು, ಆದರೆ ಮೊಗಳ್ಳಿ ಸರ್ ಕ್ಲಾಸ್ ಇರಲಿಲ್ಲ. ಅಷ್ಟೇ ಯಾಕೆ ಎಷ್ಟೋ ವಿದ್ಯಾರ್ಥಿಗಳಿಗೆ ಅವರು ಇಲ್ಲಿ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ. ನಾನು ಮೇಷ್ಟ್ರನ್ನು ಒಮ್ಮೆ ಕೇಳಿದೆ, ‘ಸರ್, ನೀವು ನಮಗೆ ಕ್ಲಾಸ್ ತಗೋಬೇಕಿತ್ತು’ ಎಂದಾಗ ನಕ್ಕು, ‘ಜನಪದ ವಿದ್ಯಾರ್ಥಿಗಳಿಗೆ ಕ್ಲಾಸ್ ಇರುತ್ತಿದ್ದವು, ಬೇರೆ ವಿದ್ಯಾರ್ಥಿಗಳಿಗೆ ಸಿದ್ಧವಾದ ಜನರಲ್ ವೇಳಾಪಟ್ಟಿಯಲ್ಲಿ ನನ್ನ ವೃತ್ತಿ ಬದುಕಿನ ಒಂದು ತರಗತಿ ಬರದ ಹಾಗೆ ವೇಳಾಪಟ್ಟಿ ಸಿದ್ಧವಾಗುತ್ತಿತ್ತು’ ಎಂದರು.

ಬೆಂಕಿಯುಂಡೆಯನ್ನು ಉಂಡ ಜೀವ ಬೆಂಕಿಯೂ- ಬೆಳಕೂ ಆಗಿತ್ತು. ಯಾವುದನ್ನೂ, ಯಾರನ್ನೂ ಸುಲಭವಾಗಿ ಒಪ್ಪದ ಅವರು ಹೆಂಗರುಳಿನ ಹೆಮ್ಮರವೂ ಆಗಿದ್ದರು. ಅವರ ಹಾಸ್ಯ ಪ್ರಜ್ಞೆಯೂ ಅಷ್ಟೇ ವಿಶೇಷವಾಗಿತ್ತು. ಸದಾ ಹಸಿರಂತೆ ಉಸಿರಾಡುತಿದ್ದ ಅವ್ವನ ನೆನಪು, ಅಪ್ಪನ ಮೇಲಿನ ಕೋಪ, ಅವರ ಊರು, ನೆಂಟರು, ಬಾಲ್ಯ, ಭಯ, ಅವಮಾನ, ಬದುಕುವ ತಹತಹಿಕೆ, ಮೈಸೂರಿನ ದಿನಗಳು, ಮಾನಸ ಗಂಗೋತ್ರಿ, ಗೆಳೆಯ – ಗೆಳತಿಯರು, ಮೇಲುಕೋಟೆ, ನಿರುದ್ಯೋಗ, ಕಥೆಗಾರ, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ, ಅವರ ಅಕ್ಕ, ಅಕ್ಕನ ಮಗಳು (ಎಂದರೆ ಮೇಷ್ಟ್ರ ಮಡದಿ), ಮಕ್ಕಳಾದ ಚಂದನ, ವಂದನ, ಸಿರಿ, ವಿದ್ಯಾರ್ಥಿಗಳು ಎಲ್ಲವನ್ನು, ಎಲ್ಲರನ್ನೂ ಕೊನೆಕ್ಷಣದ ತನಕ ಜೀವಿಸಿದ ಜೀವ.

ತಾವು ಮೈಸೂರಿಗೆ ಹೋಗಿ ಅಲ್ಲಿಯೇ ನೆಲೆ ನಿಲ್ಲಬೇಕು ಎಂಬುದು ಅವರ ಆಸೆಯಾಗಿತ್ತು. ಸಾಹಿತ್ಯದ ಬೇರೆ ಬೇರೆನೆಲೆಯಲ್ಲಿ ಸೃಜನಶೀಲ ವಾಗಿ ತೊಡಗಿಸಿಕೊಂಡ ಅವರಿಗೆ ಕಾವ್ಯವೇ ಪ್ರಿಯವಾಗಿತ್ತು. ಮೌನವಾ ದಾಗ ಸಂಗೀತ ಸಾಂತ್ವನ ನೀಡುತ್ತಿತ್ತು. ಸಿನಿಮಾ, ರಂಗಭೂಮಿಯ ಕುರಿತ ಅವರ ಅಧ್ಯಯನವೂ ವಿಶೇಷವಾಗಿತ್ತು. ಸೃಜನಶೀಲ ಸಂವೇದನೆ ಹೊಂದಿದ ಮೊಗಳ್ಳಿ ಸರ್‌ಗೆ ಈ ಜಾತಿವಾದ, ಜನಾಂಗವಾದ ಹಾಗೂ ಮನುಷ್ಯ ಮನುಷ್ಯರ ದ್ವೇಷಾಸೂಯೆ ಬಗ್ಗೆ ಉಗ್ರ ಕೋಪವಿತ್ತು. ಆ ಕೆಂಡಗಣ್ಣಿನಲ್ಲಿ ತಣ್ಣನೆಯ ಬುದ್ಧ ಬೆಳಗುತ್ತಿದ್ದ. ಅವರ ತತ್ವ, ಅಧ್ಯಾತ್ಮ, ಲೋಕದೃಷ್ಟಿ ಅರಿಯಲು ಅರಿವಿನ ಕಣ್ಣು ತೆರೆಯಬೇಕು

” ಅವರ ಲೇಖನಿಯ ಹರಿತ, ಮಾತಿನ ಮೃದುತ್ವ ಹಾಗೂ ತಾಯಿಯ ಅಂತಃಕರಣ ಅವರನ್ನು ಬಲ್ಲವರಿಗೆ ಅಪರಿಚಿತ ವೇನಲ್ಲ.”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

8 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

21 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

21 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

21 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

22 hours ago