ಹಾಡು ಪಾಡು

ಎದೆಯಲ್ಲೇ ಉಳಿದ ಗೆಳೆಯನ ಮಾತುಗಳು…

ಮೆಳೇಕಲ್ಲಳ್ಳಿ ಉದಯ

ನಾನೂ ಗಣೇಶ್ ಇದ್ದದ್ದು ಮಹಾರಾಜ ಹಾಸ್ಟೆಲಿನ ೧೦೧ನೇ ರೂಮಿನಲ್ಲಿ. ಪ್ರಾರಂಭದಲ್ಲಿ ನಾವು ಚೆನ್ನಾಗಿಯೆ ಸಿಳ್ಳೆ ಹೊಡೆದುಕೊಂಡು ಓಡಾಡುತಿದ್ವಿ.

ತೂಕದಲ್ಲಿ ನಾವಿಬ್ಬರೂ ನಲವತ್ತು ಕೇಜಿ ಒಳಗೆ ಇದ್ದುದರಿಂದಲೂ ಹಾಗೂ ಸಿಳ್ಳೆ ಹೊಡೆದುಕೊಂಡು ಓಡಾಡುತ್ತಿದ್ದು ದರಿಂದಲೂ ನಮ್ಮನ್ನು ನಾವೇ ಸಿಳ್ಳೆಕ್ಯಾತರೆಂದು ಕರೆದುಕೊಂಡಿದ್ದೆವು. ಬರುಬರುತ್ತಾ ಹಾಸ್ಟೆಲಿನಲ್ಲಿ ನಮಗೆ ಊಟ ನಿಲ್ಲಿಸುತ್ತಿದ್ದರು. ಕಾರಣ ನಮಗೆ ಸ್ಕಾಲರ್‌ಶಿಪ್ ಬರಲು ತಡವಾಗುತ್ತಿದ್ದುದು ಹಾಗೂ ಹಾಸ್ಟೆಲ್ಲಿನ ಊಟದ ಬಿಲ್ಲು ನಮ್ಮ ಸ್ಕಾಲರ್‌ಶಿಪ್‌ಗಿಂತ ಹೆಚ್ಚಾಗಿ ಬರುತ್ತಿದ್ದುದು.

ಮನೆಯಲ್ಲಿ ನಮಗೆ ಹಣ ಕಳುಹಿಸುತ್ತಿದ್ದುದು ತಡವಾದ ಕಾರಣ ತಿಂಗಳಲ್ಲಿ ಐದಾರು ದಿನ ಊಟಕ್ಕೆ ತೊಂದರೆಯಾಗುತ್ತಿತ್ತು. ಆ ದಿನಗಳಲ್ಲಿ ನಾವಿಬ್ಬರೂ ಹಸಿದೇ ಇರುತ್ತಿದ್ದೆವು. ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಟೀ ಮತ್ತು ಬ್ರೆಡ್ಡು ಮಾರುತ್ತಿದ್ದ ಜಾಗದಲ್ಲಿ ನಾವಿಬ್ಬರೂ ಚೋಟಾ ಟೀ ಮತ್ತು ನಾಕಾಣೆ ಬ್ರೆಡ್ಡು ತಿನ್ನುತ್ತಿದ್ದೆವು.

ರಾತ್ರಿ ನಾವಿಬ್ಬರೂ ಮಲಗಿದಾಗ ಗಣೇಶ್ ಹೇಳುತ್ತಿದ್ದ ಮಾತು ಇನ್ನೂ ನೆನಪಿನಲ್ಲಿದೆ, ‘ನಾವು ಎರಡು ದಿನ ಕಕ್ಕಸ್ಸಿಗೆ ಹೋಗಬಾರದು ಕಣೋ, ತಿಂದ ಟೀ ಬ್ರೆಡ್ಡು ಹೊಟ್ಟೆಯಲ್ಲೆ ಉಳಿದಿ ರಲಿ’. ಅಂತಾ ಗೆಳೆಯ ದೂರ ಹೋದ… ಆದರೂ ಆ ಮಾತುಗಳು ಇನ್ನೂ ಎದೆಯಲ್ಲೇ ಉಳಿದಿವೆ.

(ಲೇಖಕರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಮೊಗಳ್ಳಿಯವರ ಸಹಪಾಠಿ)

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

22 mins ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

1 hour ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

1 hour ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

2 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

2 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

6 hours ago