ಹಾಡು ಪಾಡು

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ

ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ ಹೇಳಿದಾಗ ಸಮಯ ಸಂಜೆಯ ೫ ಗಂಟೆ. ಅಲ್ಲಿಂದ ವ್ಯಾಲಿ ಆಫ್ ಮಾನ್ಯು ಮೆಂಟ್ಸ್‌ಗೆ ೩೦೦ ಕಿಮೀ ಎಂದು ತೋರಿಸಿತು. ಮೂರು ಗಂಟೆಗಳ ಪ್ರಯಾಣ. ಹೇಗೂ ಸೂರ್ಯಾಸ್ತ ೯ಕ್ಕೆ. ೮ಕ್ಕೆ ಸೇರಿದರೆ ಸರಿಯಾಯ್ತಲ್ಲ… ಹೀಗೆ ಲೆಕ್ಕ ಹಾಕಿ ಹೊರಟೇಬಿಟ್ಟೆವು. ಬೆಳಿಗ್ಗೆ ತಿಂಡಿ ತಿಂದಿದ್ದು. ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ದಾರಿಯಲ್ಲಿ ಏನೋ ತಿಂದರಾಯಿತು ಎಂದು ಹೊರಟೆವು.

ನಮ್ಮ ದುರದೃಷ್ಟಕ್ಕೆ ದಾರಿಯಲ್ಲಿ ಯಾವುದೇ ರೆಸ್ಟೋರೆಂಟ್ ಸಿಗಲಿಲ್ಲ. ಸಿಕ್ಕರೂ ಗಮನಿಸದಷ್ಟು ಆತಂಕದಲ್ಲಿ ಇದ್ದೆವೆನ್ನಿ. ನಮ್ಮ ಗುರಿ ಸೂರ್ಯಾಸ್ತದ ವೇಳೆಗೆ ವ್ಯಾಲಿಯನ್ನು ತಲುಪುವುದಾಗಿತ್ತು. ಆಗ ಸಮಯ ೭.೩೦. Forrest Gump ಸಿನಿಮಾ ಚಿತ್ರಣಗೊಂಡಿದ್ದ ರಸ್ತೆಯಲ್ಲಿದ್ದೆವು! ದೂರದಲ್ಲಿ ಅದ್ಭುತವಾದ ಬೃಹದಾಕಾರದ ಕಲ್ಲು ಕಾಣಿಸಲಾರಂಭಿಸಿತು! ಎಡಭಾಗದಲ್ಲಿ ಸೂರ್ಯ ಮುಳುಗುತ್ತಿರುವ ಕೆಂಪು ಆಗಸ, ನಡುವೆ ರಸ್ತೆಯಲ್ಲಿ ನಾವು… ‘ಇನ್ನೊಂದು ಅರ್ಧ ಗಂಟೆಯ ಪ್ರಯಾಣ ಮಾಡಿ ತಲುಪಿ, ನಂತರ ಅಲ್ಲಿ ಒಂದು ಗಂಟೆ ಓಡಾಡುವುದರಲ್ಲಿ ಸೂರ್ಯಾಸ್ತವಾಗುತ್ತದೆ. ಆಹ್! Perfect plan’ ಎಂದುಕೊಳ್ಳುತ್ತಿರುವಾಗಲೇ ಸೂರ್ಯ ಮುಳುಗುವ ವಾತಾವರಣ. ಇದೇನಿದು ಹೀಗೆ ಕತ್ತಲು ಆವರಿಸುತ್ತಿದೆಯಲ್ಲ ಅಂತ ಗಾಬರಿಯಾಗಿ ಸಮಯ ನೋಡಿದರೆ ಅದಾಗಲೇ ೮.೪೦ ಅಂತ ತೋರಿಸುತ್ತಿದೆ! ಈಗ ತಾನೇ ೭.೩೦ ಆಗಿತ್ತಲ್ಲ ಅಂತ ಚೆಕ್ ಮಾಡಿದರೆ ವ್ಯಾಲಿ ಆಫ್ ಮಾನ್ಯುಮೆಂಟ್ ಯೂಟಾ ಮತ್ತು ಅರಿಜ಼ೋನಾ ಸ್ಟೇಟ್‌ಗಳ ನಡುವಿನ ಬಾರ್ಡರ್‌ನಲ್ಲಿ ಇರುವುದರಿಂದ ಅಲ್ಲಿ ಸಮಯ ಒಂದು ಗಂಟೆ ಮುಂದಿದೆ! ಗ್ರಾಂಡ್ ಕ್ಯಾನ್ಯನ್ ಯೂಟಾದಲ್ಲಿ ಇರುವುದರಿಂದ ನಾವು ಅಲ್ಲಿನ ಸಮಯ ನೋಡಿ ತಪ್ಪು ಲೆಕ್ಕ ಹಾಕಿ ಹೊರಟಿದ್ದೆವು! ಬಾರ್ಡರ್ ಹತ್ತಿರವಾದ ಕೂಡಲೇ ಗಡಿಯಾರ ಒಂದು ಗಂಟೆ ಮುಂದೆ ಜಿಗಿದಿತ್ತು. ಒಂದೇ ದೇಶದಲ್ಲಿ ೯ ಟೈಮ್ ಜ಼ೋನ್ ಇದ್ದರೆ ಇದೇ ಹಣೆಬರಹ.

ಕ್ಷಣಕ್ಷಣಕ್ಕೂ ಟೈಮ್ ನೋಡುತ್ತಿರುವಾಗಲೇ ತಲುಪಲು ಇನ್ನೇನು ೧೩ ನಿಮಿಷ ಪ್ರಯಾಣ ಬಾಕಿ ಇದೆ ಅನ್ನುವಾಗ ಸೂರ್ಯ ಮುಳುಗಿಯೇಬಿಟ್ಟ. ೩ ಗಂಟೆಗಳ ಪ್ರಯಾಣ ವ್ಯರ್ಥವಾದಂತೆನಿಸಿ ನಿರಾಸೆಯ ಮೌನ ಹರಡಿತು. ಸಮಯ ಕಳೆಯಿತು. ಇದ್ದಕ್ಕಿದ್ದಂತೆ ಸಂದೀಪ್ ‘ಅಯ್ಯೋ’ ಎಂದು ಜೋರಾಗಿ ಕಿರುಚಿದ. ಏನಾದರೂ ಪ್ರಾಣಿ ಎದುರಾಯಿತಾ ಅಂತ ಗಾಬರಿಯಾದೆವು. ಅವನು ‘ಅಲ್ಲಲ್ಲ, ಇಲ್ಲಿ ಇಲ್ಲಿ’ ಅಂತ ಕಿರುಚುತ್ತಿದ್ದಾನೆ. ಎಲ್ಲಿ ಅಂತ ನೋಡಿದರೆ ಬಲಕ್ಕೆ ಆಗಸದಲ್ಲಿ ಹೆಚ್ಚುಕಡಿಮೆ ನಮ್ಮದೇ ಕಣ್ಣಿನ ಎತ್ತರದಲ್ಲಿ ಹುಣ್ಣಿಮೆಯ ಚಂದ್ರ ಎತ್ತರದ ಕೋಡುಗಲ್ಲೊಂದರ ಪಕ್ಕದಲ್ಲಿ ಹೊಳೆಯುತ್ತಿದ್ದಾನೆ! ಕಾರನ್ನು ಅಲ್ಲಿಯೇ ನಿಲ್ಲಿಸಿ ಚಂದ್ರನನ್ನು ನೋಡುತ್ತಾ ನಿಂತುಬಿಟ್ಟೆವು. ಮಾಮೂಲಿಗಿಂತ ಎರಡರಷ್ಟು ದೊಡ್ಡ ಗಾತ್ರ… ನಮಗಿಂತ ಸ್ವಲ್ಪವೇ ದೂರದಲ್ಲಿ… ಕೈಗೆ ಎಟಕುವಂತೆ! ನಸುಗತ್ತಲು, ನಿರ್ಜನ ಪ್ರದೇಶ, ತಂಗಾಳಿ ಮತ್ತು ಹೊಳೆವ ಚಂದ್ರ! ಅಂಥ ಸುಂದರವಾದ ಹುಣ್ಣಿಮೆ ಬದುಕಿನಲ್ಲಿ ಈವರೆಗೆ ಕಂಡಿರಲಿಲ್ಲ! ನಾವು ಸೂರ್ಯಾಸ್ತ ನೋಡಲು ಹೊರಟಿದ್ದೆವು ಅನ್ನುವುದನ್ನೇ ಮರೆಸಿತ್ತು ಈ ಚಂದ್ರೋದಯ!

” ಒಂದು ನಿರಾಶೆಯಲ್ಲಿ ನಾವು ಮುಳುಗೇಳುತ್ತಿರುವಾಗಲೇ ದೇವರು ನಮಗಾಗಿ ಇನ್ನೊಂದು ಅದ್ಭುತವಾದುದನ್ನು ನೀಡುವ ತಯಾರಿ ನಡೆಸಿದ್ದ..!”

 

 

ಆಂದೋಲನ ಡೆಸ್ಕ್

Recent Posts

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

59 mins ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

8 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

8 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

8 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

8 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

8 hours ago