ಹಾಡು ಪಾಡು

ರಾಗಿ ಒಕ್ಕಣೆ ಮತ್ತು ಬರ್ಲು ಪೂಜೆ

• ಚೇತನ್ ಎಸ್.ಪೊನ್ನಾಚಿ

ರಾಗಿ ಒಕ್ಕಣೆಯ ಕಾಲ ಬಂತೆಂದರೆ ಸಾಕು ನಮಗೆ ಎಲ್ಲಿಲ್ಲದ ಸಂಭ್ರಮ. ಮನೆಯವರೆಲ್ಲ ಒಕ್ಕಣೆ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರಿಂದ ಶಾಲೆಗೆ ಹೋಗುತ್ತಿದ್ದುದ್ದು… ತಪ್ಪಿಸಿಕೊಳ್ಳುತ್ತಿದ್ದರ ಕಡೆಗಿನ ಗಮನ ಸ್ವಲ್ಪ ಕಡಿಮೆ ಇರೋದು. ನನಗೋ ಎಲ್ಲಿಲ್ಲದ ಸಂಭ್ರಮ… ಸಡಗರ… ಶಾಲೆ ತಪ್ಪಿಸಿಕೊಳ್ಳುವುದಕ್ಕೆ ಏನಾದರೂ ಮಾಡಬೇಕಲ್ಲ ಅಂದುಕೊಂಡು ಆ ದಿನ ರಾತ್ರಿಯಿಂದಲೇ ಜ್ವರ ಬಂದವನಂತೆ ಹೋಗಿ ಒಲೆ ಮುಂದೆ ಸಪ್ಪಗೆ ಕುಳಿತುಕೊಳ್ಳುವುದು… ಮಲಗುವುದು… ಮುಲುಗುವುದು… ಮಾಡುತ್ತಿದ್ದೆ.

ಬೆಳಿಗ್ಗೆ ನಮ್ಮ ಅವ್ವ ಬಂದವಳೆ ಜ್ವರ ಏನಾದರೂ ಬಂದಿರಬಹುದೆನೋ ಅಂತ ಕುತ್ತಿಗೆ ಹಣೆಯನ್ನೆಲ್ಲ ಮುಟ್ಟಿ ನೋಡಿದಳಾದರೂ ವ್ಯತ್ಯಾಸ ಕಾಣಿಸಲಿಲ್ಲ.
ಮೈ ಬಿಸಿ ಇಲ್ಲ ಆದರೂ ಸಪ್ಪಗಿದ್ದಾನಲ್ಲ ಏಕೆ..? “ಏನನ್ನಾದರೂ ನೋಡಿ ಅಂಜಿಕೊಂಡೇನೋ’ ಅಂತ ಕೇಳಿದರು,
‘ಇಲ್ಲ’ ಅಂದೆ.
ಎಲ್ಲಾದರೂ ಬಿದ್ದ ಅಂತ ಕೇಳಿದರು,
‘ಇಲ್ಲ’ ಅಂದೆ.
ಯಾಕೋ..? ಏನೋ..? ಅನ್ನುವ
ಗೊಂದಲದಲ್ಲಿಯೇ ಒಂದು ಕಬ್ಬಿಣದ ಗುಳವನ್ನು ಒಲೆಗೆ ಹಾಕಿ ಅದು ಚೆನ್ನಾಗಿ ಕಾಯುತ್ತಿದ್ದಂತೆ ತೆಗೆದುಕೊಂಡು ಬಂದು ನನಗೆ ದೃಷ್ಟಿ ತೆಗೆದು ಅದನ್ನು ತಟ್ಟೆಯಲ್ಲಿಟ್ಟು ನೀರಾಕುತ್ತಿದ್ದಂತೆ ಅದು ಜೋರಾಗಿ ಸೊ‌.. ಸೊರ್.. ಅಂತ ಸದ್ದಾಗುತ್ತಿರುವುದನ್ನು ಕಂಡು ಯಾರದ್ದೋ ಕಣ್ಣಿನ ದೃಷ್ಟಿ ಆಗಿದೆ ನನ್ನ ಮಗಿಗೆ ಅಂತೇಳಿ ಆ ಗುಳ ಕಾಯಿಸಿದ ನೀರನ್ನು ಕುಡಿಸಿ ಇವತ್ತು ಇಸ್ಮಲ್ಲಿಗೆ ಹೋಗುವುದು ಬೇಡ, ಕಣಕ್ಕೆ ಬಂದು ಪಾಕೆಯಲ್ಲಿ ಮಲಗಿರು ಅಂದಳು.

ನನಗೋ ನಮ್ಮವ್ವನ ಮಾತು ಕೇಳಿ ಸಾಕ್ಷಾತ್ ಕಬ್ಬಾಳಮ್ಮನೇ ಎದುರು ನಿಂತಿರುವಂತೆ ಭಾಸವಾಗುತ್ತಿತ್ತು.

ಇವೆಲ್ಲ ದೃಶ್ಯ ವೈಭವವನ್ನು ನೋಡುತ್ತಾ… ಕೇಳುತ್ತಾ… ಕೋಣೆಯಲ್ಲಿ ಶಿವಪೂಜೆ ಮಾಡಿಕೊಂಡು ಕುಳಿತಿದ್ದ ತಾತಯ್ಯ;

ಅವನಿಗೆ ಏನಾಗಿದೆ ಅಂತ ನನಗೆ ಸೆಂದಾಗಿ ಗೊತ್ತು, ಅವನು ಎಲ್ಲಿಗೂ ಬರುವುದು ಬೇಡ ಅವನಿಗೆ ಹಿಡಿದಿರುವ ಗಾಳಿಯನ್ನು ಬಿಡಿಸ್ತೀನಿ ಇರಮ್ಮಿ ಅಂತೇಳಿ ಎಮ್ಮೆ ಕೊಟ್ಟಿಗೆಗೆ ಹೋಗಿ ಒಂದು ಬರ್ಲು ತಂದವರೆ…

ನಮಗಂತು ಓದು-ಬರಹ ಇಲ್ಲ. ನಿಮ್ಮಪ್ಪ ಓದಲಿ ಅಂದುಕೊಂಡರೆ ಅವನೂ ಒಂದೆರಡು ವರ್ಷಕ್ಕೆಲ್ಲ ಶಾಲೆಗೆ ಬೆನ್ನು ತೋರಿಸಿಬಿಟ್ಟ. ಈಗ ನೀನೂ ಅದೇ ದಾರಿಯಲ್ಲಿದ್ದೀಯಲ್ಲ. ನೀನು ಮಾಡುತ್ತಿರೋ ನಾಟಕ ಇದು ಅಂತ ನನಗೆ ಗೊತ್ತಾಗುವುದಿಲ್ಲ ಅಂದುಕೊಂಡ್ಯ’ ಅನ್ನುತ್ತಾ ರಸ್ತೆಯುದ್ದಕ್ಕೂ ಬಡಿಯುತ್ತಾ ಶಾಲೆಗಟ್ಟಿ ಬಂದಿದ್ದರು.
Chetanponnachi@gmail.com

andolanait

Recent Posts

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

7 mins ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

13 mins ago

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

13 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

14 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

16 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

18 hours ago