Andolana originals

ಓದುಗರ ಪತ್ರ: ಬಾಪುವನ್ನು ಹುಡುಕುತ್ತಾ…

ಮಸೂರ ಬದಲಿಸಿ ಬಾಪುವ ಹುಡುಕಿದೆ

ಅಂದಗೆಟ್ಟ ವುಡ್ಲ್ಯಾಂಡ್ ಶೂ,

ಹರಿದ ಜೀನ್ಸ್, ಮಾಸಿದ ಟಿ-ಶರ್ಟಿನಲಿ

ಕಸ ಆಯುತಿದ್ದನವನು ತಿರುವಿನಲಿ.

ರಚ್ಚೆ ಹಿಡಿದು ಅಳುತ್ತಿದ್ದ ಮನೆಯಂಗಳದಲಿ

ಹಕ್ಕಿಗಾಗಿ ಬೊಜ್ಜು ಬಾಯಿಯ ಕಂದನಾಗಿ!

ಕಡಲೆ ಮಾರುವ ಸ್ವಾವಲಂಬಿ ವೃದ್ಧೆಯಲ್ಲಿ,

ಸ್ವಾಭಿಮಾನವ ಬೆನ್ನಟ್ಟಿದ ಬಡ ರೈತನಲಿ,

ಕರ್ಮ ನೆಚ್ಚಿ ಗೂಡು ನೇಯುವ ಹಕ್ಕಿಗಳಲ್ಲಿ,

ಸಿಡಿದೆದ್ದ ಜೆನ್‌ಝೀಜೇನುಗಳ ಝೇಂಕಾರದಲ್ಲಿ

ಗಾಂಧಿಯನ್ನು ಕಂಡ ಸಡಗರವೆನ್ನದಾಯಿತು.

ಜನುಮದಿನದ ಶುಭಾಶಯಗಳು, ಬಾಪು!

ನಿನ್ನ ಹೆಸರು ಹೇಳುತ್ತಾ ಗೆದ್ದವರವರು,

ನಿನ್ನ ದಾರಿಯನ್ನಗಲಿ ಸೋತವರು ನಾವು.

ಸತ್ಯಕ್ಕೆ ನಿನ್ನ ಹೆಸರನೇ ಇಟ್ಟರೂ,

ಸುಳ್ಳಿಗೇ ಪಟ್ಟಾಭಿಷೇಕ ಮಾಡಿದರು.

ಅಳುತ್ತಿರಬಹುದೇನೋ ನಿನ್ನಾತ್ಮವಿಂದು,

‘ನಾ ಕಂಡ ಕನಸು ಇದುವೇ?’ ಎಂದು.

ಪತ್ರಿಕೆ, ದಿನದರ್ಶಿಕೆಗಳಲ್ಲಿ,

ನೋಟು, ಪಠ್ಯ, ಬರಹ, ಚಿತ್ರಗಳಲ್ಲಿ,

ಮೈಕಾಸುರರ ಭಾಷಣಗಳಲ್ಲಿ,

ವೃತ್ತ, ಬೀದಿ, ಪ್ರತಿಮೆಗಳ ನಾಮಗಳಲ್ಲಿ –

ನೀನಿದ್ದೂ ಇಲ್ಲದಂತಿರುವೆ ಅಲ್ಲೂ,

ನಿನ್ನೆದೆಗೆ ಗುಂಡಿಟ್ಟ ಗೋಡ್ಸೆಗಳೇ ಎಲ್ಲೂ!

ಬಾಪು, ನಿನ್ನ ಚರಕವು ನೂತಿದ್ದು ನೂಲನ್ನಲ್ಲ

ಜನತಾತ್ಮಾಭಿಮಾನ, ಸ್ವಾವಲಂಬನೆಯನ್ನ.

ಅದರಾತ್ಮವಿಂದು ನೇಯ್ಗೆ ತಪ್ಪಿ ಹರಿದು ಹೋಗಿದೆ,

ಮರು ಜೋಡಿಸಲು ನಿನ್ನಂತ ನೇಕಾರನಿಲ್ಲದೆ,

ನೀ ಬಯಸದ ಹಾರ ತುರಾಯಿಗಳ ಮಜ ಮಾತ್ರ

ಜಮಾ ಆಗುತ್ತಿದೆ ನಿನ್ನ ಖಾತೆಗೆ ನಿನ್ನ ಈ ಮಣ್ಣಿನಲ್ಲಿ.

ನಿನ್ನೊಡನೆ ನಡೆದ ಚಪ್ಪಲಿ ಮತ್ತು ಆ ಊರುಗೋಲು

ಅಗೋ ಇಂದಿಗೂ ಇವೆ ಗಾಜಿನ ಕೋಣೆಯಲಿ

ನಡೆದ ಹಾದಿ ಮಾತ್ರ ಕಳೆ ತುಂಬಿ ಕಾಣೆಯಾಗಿದೆ

ನೆಚ್ಚಿದ್ದ ಖಾದಿಯೂ ಟೋಪಿಯೂ ಪರವಶವಾಗಿದೆ

ನೀ ರೂಪಿಸಿದ ದೀವಟಿಗೆಯ ಬೆಳದಿಂಗಳಲ್ಲಿ

ವಿಶ್ವವೇ ಪ್ರಕಾಶಿಸುತ್ತಿದೆ ನಮ್ಮ ಬಿಟ್ಟು!

ಮಗುವೊಂದು ನಿರ್ಭಯವಾಗಿ ನುಡಿಯುವ ಬೆಳಗು,

ನೀರೆ ನಡೆದಲ್ಲಿ ನಲುಗಿಸದ ನಡು ಇರುಳು

ಬಯಸಿದ್ದೆ ನೀನು ಈ ತೆರದಿ ಬಂಧಮುಕ್ತಿ

ನನ್ನ ಹುಡುಕಾಟವಿದೆ ಮೋಹನದಾಸನಿಗಾಗಿ.

ಕೀರ್ತಿ ಸಾರುವ ಕಲ್ಲುಗಳ ಸ್ಥಾವರಗಳಲ್ಲಲ್ಲ,

ಜಂಗುಳಿಯಲಿ ಹರಿಯುವ ಜಂಗಮತೆಯಲ್ಲಿ

– ಒಡನಾಡಿ ಸ್ಟ್ಯಾನ್ಲಿ

 

 

ಆಂದೋಲನ ಡೆಸ್ಕ್

Recent Posts

ರಷ್ಯಾದಲ್ಲಿ ಪ್ಲೇಗ್ ಪತ್ತೆಯಾಗಿಲ್ಲ: WHO ಸ್ಪಷ್ಟನೆ!

ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…

4 hours ago

ರಾಜ್ಯದಲ್ಲಿ ಇನ್ಮುಂದೆ ಹಾಫ್ ಹೆಲ್ಮೆಟ್ ಬ್ಯಾನ್!

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…

5 hours ago

ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂ: ಮಾಜಿ ಸಚಿವ ಎನ್.ಮಹೇಶ್ ಭೇಟಿ, ಸಾಂತ್ವನ

ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…

5 hours ago

ಮೈಸೂರು ದಸರಾ: ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ನಗರ…

5 hours ago

ಓದುಗರ ಪತ್ರ: ‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ

‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…

5 hours ago

ಓದುಗರ ಪತ್ರ: ನೀಲಿಯೆಂದರೇನು?!

ನೀಲಿಯೆಂದರೇನು?! ನೀಲಿಯೆಂದರೇನು ಬರಿಯ ಬಣ್ಣವೇನು ? ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ| ಬುದ್ಧ ಬಸವ…

5 hours ago