ಅಂಕಣಗಳು

ಉಚಿತ ಮಾರ್ಗದರ್ಶನ ನೀಡಿ ಯುಪಿಎಸ್‌ಸಿ ಪಾಸು ಮಾಡಿಸುವ ಡಿಜಿಪಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಕರ್ತವ್ಯದ ಜತೆ ಜತೆಗೇ ಅಭ್ಯರ್ಥಿಗಳಿಗೆ ಸ್ಪಂದನೆ 

ಮಹಾರಾಷ್ಟ್ರದ ಅಹ್ಮದ್‌ನಗರ್ ಜಿಲ್ಲೆಯ ಪತ್ರಾಡಿ ಎಂಬ ಗ್ರಾಮದಲ್ಲಿ ಹುಟ್ಟಿದ ಮಹೇಶ್ ಭಾಗವತ್ ಹತ್ತನೇ ತರಗತಿ ತನಕ ತಮ್ಮ ಗ್ರಾಮದಲ್ಲಿ ಕಲಿತು, ಮುಂದಿನ ಉನ್ನತ ಶಿಕ್ಷಣವನ್ನು ಪುಣೆಯಲ್ಲಿ ಮುಗಿಸಿದರು. ನಂತರ ಅವರು ಯುಪಿಎಸ್‌ಸಿಗೆ ಕುಳಿತುಕೊಳ್ಳಲು ನಿರ್ಧರಿಸಿ ಅದಕ್ಕಾಗಿ ತಯಾರಿ ಮಾಡತೊಡಗಿದರು. ಗ್ರಾಮೀಣ ಪರಿಸರದಿಂದ ಬಂದ ಅವರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಿರಲಿಲ್ಲ. ಆ ಬಗ್ಗೆ ಅವರಿಗೆ ಬಹಳ ಕೀಳರಿಮೆ ಇದ್ದು, ಅದೊಂದು ದೊಡ್ಡ ಸವಾಲಾಗಿತ್ತು. ಆದರೆ, ಅವರ ಒಬ್ಬ ಕಾಲೇಜು ಹಿರಿಯ ಸಹಪಾಠಿ ಮರಾಠಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾದುದು, ಮತ್ತು ಮುಂಬೈಯ ಮಾಜಿ ಮುನಿಸಿಪಾಲಿಟಿ ಕಮಿಷನರ್ ಭೂಷಣ್ ಗಗ್ರಾಣಿ ಮರಾಠಿಯಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಆಲ್ ಇಂಡಿಯಾ ಮೂರನೇ ರ‍್ಯಾಂಕನ್ನು ಗಳಿಸಿ ಪಾಸಾದುದು ಅವರಿಗೆ ಮಾರ್ಗದರ್ಶನವಾಯಿತು.

ಅದರಂತೆಯೇ ಮಹೇಶ್ ಭಾಗವತ್ ಮರಾಠಿಯಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು, ಪಾಸಾಗಿ, ೧೯೯೫ರ ಐಪಿಎಸ್ ಬ್ಯಾಚಿಗೆ ಸೇರಿ, ಮಣಿಪುರದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ, ೧೯೯೯ರಲ್ಲಿ ಹೈದರಾಬಾದಿಗೆ ಬಂದರು.

ನಿತೀಶ್ ಪಾತೋಡೆ ಅಹ್ಮದಾಬಾದಿನ ಈಗಿನ ಡೆಪ್ಯುಟಿ ಕಮಿಶನರ್ ಆಫ್‌ ಕಸ್ಟಮ್ಸ್. ಅವರೂ ಮರಾಠಿ ಭಾಷಿಕರು. ಮಹಾರಾಷ್ಟ್ರದ ಚಂದ್ರಾಪುರದ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ದೆಹಲಿಗೆ ಬಂದಿದ್ದಾಗ, ಅವರಂತೆಯೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮಹಾರಾಷ್ಟ್ರದಿಂದ ದೆಹಲಿಗೆ ಬಂದಿದ್ದ ನೂರಾರು ಅಭ್ಯರ್ಥಿಗಳು ಪರೀಕ್ಷೆಯ ಅಂತಿಮ ಹಾಗೂ ಅತ್ಯಂತ ಕಠಿಣ ಹಂತವಾದ ‘ಪರ್ಸನಾಲಿಟಿ ಟೆಸ್ಟ್’ ಸಂದರ್ಶನಕ್ಕೆ ಹೇಗೆ ತಯಾರಾಗಬೇಕೆಂಬುದರ ಬಗ್ಗೆ ಮಾರ್ಗದರ್ಶನ ಮಾಡಲು ಯಾರೂ ಇಲ್ಲದೆ ಕಷ್ಟ ಪಡುವುದನ್ನು ಅವರು ನೋಡಿದ್ದರು.

ನಿತೀಶ್ ಪಾತೋಡೆ ಮುಂದೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವ ಮಹಾರಾಷ್ಟ್ರದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂದು ‘ಮಹಾರಾಷ್ಟ್ರ ಸಿವಿಲ್ ಸರ್ವಿಸಸ್ ಮೆಂಟರ್‌ಶಿಪ್’ ಎಂಬ ಹೆಸರಲ್ಲಿ ಒಂದು ವಾಟ್ಸಾಪ್ ಗ್ರೂಪನ್ನು ಪ್ರಾರಂಭಿಸಿದರು. ಅವರು ಆ ವಾಟ್ಸಾಪ್ ಗ್ರೂಪಿಗೆ ಇತರ ಹಲವರೊಂದಿಗೆ ಮಹೇಶ್ ಭಾಗವತರನ್ನೂ ಒಬ್ಬ ಮೆಂಟರ್ ಆಗಿ ಸೇರಿಸಿದರು. ಆ ವಾಟ್ಸಾಪ್ ಗ್ರೂಪ್ ಈಗ ಬಹು ದೊಡ್ಡದಾಗಿ ಬೆಳೆದಿದೆ. ಪ್ರತೀವರ್ಷ ಮಹಾರಾಷ್ಟ್ರದಿಂದ ಸುಮಾರು ೩,೦೦೦ ಅಭ್ಯರ್ಥಿಗಳು ಯುಪಿಎಸ್‌ಸಿ ಸಂದರ್ಶನ ಹಂತವನ್ನು ತಲುಪಿ, ಅದರಲ್ಲಿ ಸುಮಾರು ೧೦೦ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ೧೦೦ ಯಶಸ್ವೀ ಅಭ್ಯರ್ಥಿಗಳಲ್ಲಿ ಸುಮಾರು ೮೦% ಅಭ್ಯರ್ಥಿಗಳು ನಿತೀಶ್ ಪಾತೋಡೆಯವರ ವಾಟ್ಸಾಪ್ ಗ್ರೂಪಿನ ಪ್ರಯೋಜನ ಪಡೆದವರು.

ನಿತೀಶ್ ಪಾತೋಡೆಯವರ ಸೇವಾ ಮನೋಭಾವದಿಂದ ಸೂರ್ತಿ ಪಡೆದ ಮಹೇಶ್ ಭಾಗವತ್ ೨೦೧೫ರಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಯುಪಿಎಸ್‌ಸಿ ಸೇವಾಕಾಂಕ್ಷಿಗಳಿಗಾಗಿ ಅದೇ ಮಾದರಿಯ ತಮ್ಮದೇ ಒಂದು ವಾಟ್ಸಾಪ್ ಗ್ರೂಪನ್ನು ಪ್ರಾರಂಭಿಸಿದರು. ಮುಂದೆ ಅದನ್ನು ಇಡೀ ದೇಶದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ವಿಸ್ತರಿಸಿದರು.

ಭಾರತದ ಯುಪಿಎಸ್‌ಸಿ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಪ್ರತೀವರ್ಷ ಸುಮಾರು ಐದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ಅದರಲ್ಲಿ ಸುಮಾರು ೧೩-೧೫ ಸಾವಿರ ಅಭ್ಯರ್ಥಿಗಳು ‘ಮೆಯ್ನ್ಸ್’ನಲ್ಲಿ ಪಾಸಾಗುತ್ತಾರೆ. ಇವರಲ್ಲಿ ಪರೀಕ್ಷೆಯ ಕೊನೆಯ ಹಂತವಾದ ‘ಪರ್ಸನಾಲಿಟಿ ಟೆಸ್ಟ್’ ಎಂಬ ಸಂದರ್ಶನದಲ್ಲಿ ಪಾಸಾಗಿ, ಸೇವೆಗೆ ಆಯ್ಕೆಯಾಗುವವರು ಕೇವಲ ೯೦೦-೧೦೦೦ ಜನ ಮಾತ್ರ. ಯುಪಿಎಸ್‌ಸಿ ಪರೀಕ್ಷೆಯ ‘ಮೆಯ್ನ್ಸ್’ ೧,೭೫೦ ಅಂಕಗಳನ್ನು ಹೊಂದಿದ್ದರೆ, ‘ಪರ್ಸನಾಲಿಟಿ ಟೆಸ್ಟ್’ ೨೭೫ ಅಂಕಗಳದ್ದು. ಇದು ಅತ್ಯಂತ ಕಷ್ಟದ ಹಂತವಾಗಿರುವುದರಿಂದ, ಮೆಯ್ನ್ಸ್‌ನಲ್ಲಿ ಉತ್ತಮ ಅಂಕಗಳನ್ನು ಪಡೆದ ಅಭ್ಯರ್ಥಿಗಳಲ್ಲಿ ಆನೇಕರು ಈ ಹಂತದಲ್ಲಿ ಕೇವಲ ಒಂದೆರಡು ಅಂಕಗಳಿಂದ ಅನುತ್ತೀರ್ಣರಾಗುವುದು ಸಾಮಾನ್ಯ.

ಮಹೇಶ್ ಭಾಗವತ್ ವಾಟ್ಸಾಪ್ ಮೂಲಕ ತಮ್ಮನ್ನು ಸಂಪರ್ಕಿಸುವ ಪ್ರತಿಯೊಬ್ಬ ಮೆಯ್ನ್ಸ್ ಪಾಸಾದ ಅಭ್ಯರ್ಥಿಯ ‘ಡಿಎಎಫ್ (ಡಿಟೈಲ್ಡ್ ಎಪ್ಲಿಕೇಶನ್ ಫಾರ್ಮ್)’ ನ್ನು ಒಂದಕ್ಷರ ಬಿಡದೆ ಓದುತ್ತಾರೆ. ಏಕೆಂದರೆ, ಅಭ್ಯರ್ಥಿಯ ಹೆಸರು, ಆತನ/ಆಕೆಯ ಊರು, ಹೆತ್ತವರ ಉದ್ಯೋಗ ಮೊದಲಾಗಿ ಅಭ್ಯರ್ಥಿಯ ಸಂಪೂರ್ಣ ಜತಕ ಹೊಂದಿರುವ ಅದು ‘ಪರ್ಸನಾಲಿಟಿ ಟೆಸ್ಟ್’ನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಓದಿದ ನಂತರ, ಮಹೇಶ್ ಭಾಗವತ್ ಅಭ್ಯರ್ಥಿಯೊಂದಿಗೆ ನೇರ ಸಂಭಾಷಣೆ ನಡೆಸಿ, ಅಭ್ಯರ್ಥಿಯ ದುರ್ಬಲ ಹಾಗೂ ಪ್ರಬಲ ಅಂಶಗಳನ್ನು ಗುರುತಿಸಿ, ಸೂಕ್ತ ಮಾರ್ಗದರ್ಶನ ಮಾಡುತ್ತಾರೆ.

ಈ ಸಂಭಾಷಣೆ ಸಾಮಾನ್ಯವಾಗಿ ಮುಕ್ಕಾಲು ಗಂಟೆಯಿಂದ ಒಂದು ಗಂಟೆ ಕಾಲ ನಡೆಯುತ್ತದೆ. ಮಹೇಶ್ ಭಾಗವತ್ ತಮ್ಮ ಡ್ಯೂಟಿಗೆ ಹೋಗುವ ಮೊದಲು ಬೆಳಿಗ್ಗೆ ಅಥವಾ ಡ್ಯೂಟಿ ಮುಗಿಸಿ ಸಂಜೆ ಹೊತ್ತು, ವಾರಾಂತ್ಯ ಹಾಗೂ ಪ್ರಯಾಣದ ಸಮಯದಲ್ಲಿ ಸಂಜೆ ಈ ಸಂಭಾಷಣೆಗಳನ್ನು ನಡೆಸುತ್ತಾರೆ. ಆ ಸಂಭಾಷಣೆಯ ನಂತರವೂ ಅಭ್ಯರ್ಥಿಗಳು ಅವರಿಗೆ ಫೋನ್ ಮಾಡಿ, ಮೆಸೇಜ್ ಮಾಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ. ಮಹೇಶ್ ಭಾಗವತ್ ಒಬ್ಬ ಸೇವಾನಿರತ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಯಾದುದರಿಂದ ಅಭ್ಯರ್ಥಿಗಳಿಗೆ ಅವರ ಮಾರ್ಗದರ್ಶನ ಯಾವುದೇ ಯುಪಿಎಸ್‌ಸಿ ಕೋಚಿಂಗ್ ಕ್ಲಾಸ್‌ಗಳಲ್ಲಿ ಸಿಗುವ ತರಬೇತಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ೨೦೧೫ರಲ್ಲಿ ಆಯ್ಕೆಯಾದ ೯೫೮ ಅಭ್ಯರ್ಥಿಗಳಲ್ಲಿ ೩೩೧ ಅಭ್ಯರ್ಥಿಗಳು, ಅಂದರೆ ಪ್ರತೀ ಮೂವರಲ್ಲಿ ಒಬ್ಬರು, ಇವರ ಮಾರ್ಗದರ್ಶನ ಪಡೆದವರು.

ಯುಪಿಎಸ್‌ಸಿ ಕೋಚಿಂಗ್ ಎನ್ನುವುದು ಈಗ ಒಂದು ಬಹುಕೋಟಿ ರೂಪಾಯಿಯ ಉದ್ಯಮವಾಗಿದೆ. ಅತ್ಯಂತ ಕಠಿಣವಾಗಿರುವ ‘ಪರ್ಸನಾಲಿಟಿ ಟೆಸ್ಟ್’ ಹಂತ ವಾಸ್ತವದಲ್ಲಿ ‘ಎಲಿಮಿನೇಶನ್’ ಹಂತ. ಕೇವಲ ಈ ಹಂತಕ್ಕೆ ಅಭ್ಯರ್ಥಿಗಳನ್ನು ತಯಾರು ಮಾಡಲು ಕೋಚಿಂಗ್ ಕೇಂದ್ರಗಳು ಪ್ರತೀ ಅಭ್ಯರ್ಥಿಗೆ ತಿಂಗಳಿಗೆ ವಿಧಿಸುವ ಫೀಸು ಕನಿಷ್ಠವೆಂದರೆ ೨೦೦೦ ರೂಪಾಯಿ. ಪ್ರತೀವರ್ಷ ಮಹೇಶ್ ಭಾಗವತರ ಮಾರ್ಗದರ್ಶನ ಪಡೆಯುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ ಸುಮಾರು ೩೦೦೦. ಈ ಅಭ್ಯರ್ಥಿಗಳು ಕೇವಲ ೫೦೦ ರೂಪಾಯಿ ನೀಡಿದರೂ ಮಹೇಶ್ ಭಾಗವತ್‌ರ ಪ್ರತಿ ತಿಂಗಳ ಆದಾಯ ರೂ.೧೫ ಲಕ್ಷವಾಗುತ್ತದೆ! ಆದರೆ, ಕಳೆದ ಒಂದು ದಶಕದಿಂದ ಅವರು ಈ ಕಾರ್ಯವನ್ನು ಉಚಿತವಾಗಿ ಮಾಡುತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ ತೆಲಂಗಾಣದ ಡೈರೆಕ್ಟರ್ ಜನರಲ್ ಆ- ಪೊಲೀಸ್ ಆಗಿ ನಿಯುಕ್ತಿಗೊಂಡಿರುವ ಮಹೇಶ್ ಭಾಗವತ್ ಈಗಲೂ ತಮ್ಮ ಈ ವಾಟ್ಸಾಪ್ ಗ್ರೂಪ್ ಮೂಲಕ ಯುಪಿಎಸ್‌ಸಿ ಅಭ್ಯಥಿಗಳಿಗೆ ಮಾರ್ಗದರ್ಶನ ಮಾಡುವುದನ್ನು ಮುಂದುವರಿಸಿದ್ದಾರೆ.

” ಪ್ರತೀವರ್ಷ ಮಹೇಶ್ ಭಾಗವತರ ಮಾರ್ಗದರ್ಶನ ಪಡೆಯುವ ಅಭ್ಯರ್ಥಿಗಳ ಸರಾಸರಿ ಸಂಖ್ಯೆ ಸುಮಾರು ೩,೦೦೦. ಈ ಅಭ್ಯರ್ಥಿಗಳು ಕೇವಲ ೫೦೦ ರೂಪಾಯಿ ನೀಡಿದರೂ ಮಹೇಶ್ ಭಾಗವತ್‌ರ ಪ್ರತಿ ತಿಂಗಳ ಆದಾಯ ರೂ.೧೫ ಲಕ್ಷವಾಗುತ್ತದೆ! ಆದರೆ, ಕಳೆದ ಒಂದು ದಶಕದಿಂದ ಅವರು ಈ ಕಾರ್ಯವನ್ನು ಉಚಿತವಾಗಿ ಮಾಡುತ್ತಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ರಷ್ಯಾದಲ್ಲಿ ಪ್ಲೇಗ್ ಪತ್ತೆಯಾಗಿಲ್ಲ: WHO ಸ್ಪಷ್ಟನೆ!

ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…

5 hours ago

ರಾಜ್ಯದಲ್ಲಿ ಇನ್ಮುಂದೆ ಹಾಫ್ ಹೆಲ್ಮೆಟ್ ಬ್ಯಾನ್!

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…

5 hours ago

ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂ: ಮಾಜಿ ಸಚಿವ ಎನ್.ಮಹೇಶ್ ಭೇಟಿ, ಸಾಂತ್ವನ

ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…

6 hours ago

ಮೈಸೂರು ದಸರಾ: ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ನಗರ…

6 hours ago

ಓದುಗರ ಪತ್ರ: ‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ

‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…

6 hours ago

ಓದುಗರ ಪತ್ರ: ನೀಲಿಯೆಂದರೇನು?!

ನೀಲಿಯೆಂದರೇನು?! ನೀಲಿಯೆಂದರೇನು ಬರಿಯ ಬಣ್ಣವೇನು ? ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ| ಬುದ್ಧ ಬಸವ…

6 hours ago