ಅಂಕಣಗಳು

ಚುರುಕುಗೊಂಡ ಐದು ರಾಜ್ಯಗಳ ಚುನಾವಣೆಯ ಕಸರತ್ತು

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ 

ಬಿಎಸ್‌ಪಿ ನಾಯಕಿ ಮಾಯಾವತಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಡೆಸಿದ್ದಾರೆ ಸಿದ್ಧತೆ

ಬರುವ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ದೇಶದ ರಾಜಕೀಯ ದಿಕ್ಕನ್ನು ಬದಲಿಸಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟಗಳ ನಡುವೆ ಸೀಟು ಹಂಚಿಕೆಯ ಮಾತುಕತೆಗಳು ನಡೆಯುತ್ತಿವೆ.

ಕಾಂಗೆಸ್ಸಿನ ಈ ವರಸೆಯನ್ನು ಗಮನಿಸಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸಿಪಿಎಂ ಮತ್ತು ಸಿಪಿಎಂಎಲ್ ಜೊತೆಯೂ ಮಾತುಕತೆಗೆ ಮುಂದಾಗಿರುವುದು ವಿಶೇಷ. ಕಾಂಗ್ರೆಸ್ ಜೊತೆಗೆ ಮಾತುಕತೆ ನಡೆಸಲು ಅಖಿಲೇಶ್ ಯಾದವ್ ತಮ್ಮ ಪಕ್ಷದ ರಾಜ್ಯಸಭೆ ಸದಸ್ಯ ರಾಂ ಗೋಪಾಲ್ ಯಾದವ್ ನೇತೃತ್ವದ ಏಳು ಮಂದಿ ಸದಸ್ಯರ ಸಮಿತಿಯನ್ನು ರಚಿಸಿzರೆ. ಈ ಸಮಿತಿಯ ಸದಸ್ಯರು ಇನ್ನು ಎರಡು ಮೂರು ದಿನಗಳಲ್ಲಿ ದೆಹಲಿಯ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ತನಗೆ ೧೮೧ ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನಿಟ್ಟಿದೆ.

ಈ ಮಧ್ಯೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ರಾವಣ್ ಎಂದೇ ಖ್ಯಾತಿಯಾಗಿರುವ ನಗೀನ್ ಲೋಕಸಭೆ ಕ್ಷೇತ್ರದ ಸದಸ್ಯ ಚಂದ್ರಶೇಖರ್ ಆಜದ್ ಅವರ ಆಜದ್ ಸಮಾಜ್ ಪಾರ್ಟಿ (ಕಾನ್ಷಿರಾಂ) ನಡುವೆ ಚುನಾವಣಾ ಮೈತ್ರಿ ಏರ್ಪಟ್ಟಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿzರೆ. ದಲಿತರು, ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳನ್ನು ಒಟ್ಟಾರೆ ತೆಗೆದುಕೊಂಡು ಹೋಗುವ ಕನಸು ಹೊತ್ತಿರುವ ಅವರು ಎಲ್ಲ ಜಿಗಳಲ್ಲಿಯೂ ಸಹೋದರತ್ವ ಸಮಿತಿಗಳನ್ನು ರಚಿಸಿ ಸ್ವಂತ ಬಲದಿಂದ ಗೆದ್ದು ಒಂದೇ ಪಕ್ಷದ ಆಡಳಿತ ನಡೆಸುವ ಕನಸು ಕಾಣುತ್ತಿದ್ದಾರೆ. ಹಾಗಾಗಿ ಬಿಎಸ್‌ಪಿ ಜೊತೆ ಹೊಂದಾಣಿಕೆಗೆ ಯಾವುದೇ ಪಕ್ಷವೂ ಮುಂದಾಗುತ್ತಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಮಾಯಾವತಿ ಅವರ ಏಕಪಕ್ಷೀಯ ತೀರ್ಮಾನದ ನಡೆಯು ಬೇರೆ ರಾಜಕೀಯ ಒಕ್ಕೂಟವನ್ನು ಆಕರ್ಷಿಸಿಲ್ಲದಿರುವ ಬೆಳವಣಿಗೆ ಎದ್ದು ಕಾಣುತ್ತಿದೆ.

ಉತ್ತರಾಖಂಡದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಕಾಂಗ್ರೆಸ್ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಆದರೂ ಕಾಂಗ್ರೆಸ್ ಮತ್ತು ಬಿಎಸ್‌ಪಿಯ ಹೋರಾಟವನ್ನು ನಿರ್ಲಕ್ಷಿಸುವಂತಿಲ್ಲ. ಇದೇ ಪರಿಸ್ಥಿತಿ ಗೋವಾದಲ್ಲಿಯೂ ಇದೆ. ಪಂಜಾಬ್‌ನಲ್ಲಿ ಅಧಿಕಾರರೂಢ ಆಮ್ ಆದ್ಮಿ ಪಕ್ಷವು ಯಾರ ಜೊತೆಯೂ ಹೋಗುವಂತೆ ಕಾಣುತ್ತಿಲ್ಲ. ಬಿಜೆಪಿಯು ತನ್ನ ಹಿಂದಿನ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳದ ಮೈತ್ರಿಗೆ ಸಿದ್ಧತೆ ನಡೆಸಿದೆ. ಇತ್ತ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಬಿಜೆಪಿ ಸ್ನೇಹ ತೊರೆದು ಮತ್ತೆ ಕಾಂಗ್ರೆಸ್ಸಿಗೆ ಹಿಂತಿರುಗುವ ಸಂದೇಶ ನೀಡಿರುವುದು ಅವರ ತೀರ್ಮಾನಕ್ಕಾಗಿ ಕಾಂಗ್ರೆಸ್ ಪಕ್ಷ ಚಾತಕ ಪಕ್ಷಿಯಂತೆ ಕಾಯುತ್ತಿದೆ. ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಮುಂದುವರಿದಿದೆ. ಇನ್ನು ಮಣಿಪುರದಲ್ಲಿ ಮತ್ತೆ ಮತೀಯ ಘರ್ಷಣೆ ಮುಂದುವರಿದಿರುವುದರಿಂದ ಅಲ್ಲಿ ಚುನಾವಣೆ ನಡೆಯುವ ಸಾಧ್ಯತೆಯ ಬಗೆಗೆ ಅನುಮಾನ ಹುಟ್ಟಿದೆ.

ಈ ಮಧ್ಯೆ ರಾಜಸ್ತಾನದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಪಂಚಾಯತ್ ಸಮಿತಿಗಳ ಒಟ್ಟು ೬,೯೯೨ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಳುವ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿಯು ೨,೮೫೯ ಕ್ಷೇತ್ರಗಳಲ್ಲಿ ಗೆದ್ದರೆ ಕಾಂಗ್ರೆಸ್ ೨,೯೯೮ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ತನ್ನ ಪ್ರಾಬಲ್ಯವನ್ನು ಮೆರೆದಿರುವುದು ಆಳುವ ಬಿಜೆಪಿಗೆ ಆತಂಕ ತಂದೊಡ್ಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಸಚಿನ್ ಪೈಲಟ್ ನಡುವೆ ನಡೆದ ಬಣ ರಾಜಕೀಯ ದಿಂದಾಗಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಈಗ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಪ್ರೇರಿತರಾಗಿರುವ ರಾಜಸ್ತಾನದ ಕಾಂಗ್ರೆಸ್ ನಾಯಕರು,ಬಿಜೆಪಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವ ಸ್ಪಷ್ಟ ಸೂಚನೆ ಇದಾಗಿರುವ ಕಾರಣ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ರಾಜೀನಾಮೆ ನೀಡಬೇಕೆಂಬ ಆಗ್ರಹ ಮಾಡಲಾರಂಭಿಸಿದ್ದಾರೆ. ಇದೇ ರಾಜಕೀಯ ಹವಾ ಮುಂದುವರಿದರೆ ೨೦೨೮ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎನ್ನುವ ಭವಿಷ್ಯ ಕಾಣತೊಡಗಿದೆ.

ಈ ನಡುವೆ ಮಹಾರಾಷ್ಟ್ರದ ಸಾಂಗ್ಲಿ ಜಿ ಸಹಕಾರ ಬ್ಯಾಂಕ್ ಅಧಿಕಾರ ಹಿಡಿಯಲು ಬಿಜೆಪಿ ನೇತೃತ್ವದ ಮಹಾಯುತಿಯ ಮೈತ್ತಿಕೂಟದಲ್ಲಿರುವ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದಿದೆ. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟಿದೆ. ಇದೇ ಪರಿಸ್ಥಿತಿ ಸತಾರಾ ಜಿ ಸಹಕಾರ ಬ್ಯಾಂಕ್ ಚುನಾವಣೆಯಲ್ಲೂ ಮರುಕಳಿಸಿದೆ. ಈ ಎಲ್ಲ ಬೆಳವಣಿಗೆಯ ನಡುವೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಮಹಾಯುತಿ ಸರ್ಕಾರದಲ್ಲಿರುವ ಅಜಿತ್ ಪವಾರ್ ಬಣಗಳು ವಿಲೀನವಾಗುವ ಚರ್ಚೆ ಯಾವುದೇ ಪ್ರತಿಫಲ ನೀಡದೆ ಸದ್ಯಕ್ಕೆ ನಿಂತಿದ್ದು, ಪವಾರ್ ಪಕ್ಷವು ಇಂಡಿಯಾ ಮೈತ್ರಿಕೂಟದಲ್ಲಿಯೇ ಮುಂದುವರಿಯುವ ಎಲ್ಲ ಸಾಧ್ಯತೆಗಳು ಖಚಿತಗೊಂಡಿವೆ.

ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ , ಅಜಿತ್ ಪವಾರ್ ಅವರ ಪತ್ನಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪಾಟೀಲ್ ಅವರ ಜೊತೆ ಹಲವು ಸುತ್ತಿನ ಮಾತುಕತೆ ನಡೆದು ಬೇರೆಯಾಗಿದ್ದ ಈ ಪಕ್ಷ ಮತ್ತೆ ಒಂದಾಗಲಿದೆ ಎನ್ನುವ ಭಾರೀ ಚರ್ಚೆ ರಾಷ್ಟ್ರದ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿಯೇ ಈ ಬಗೆಗೆ ಇಂಗಿತ ವ್ಯಕ್ತಪಡಿಸಿ, ಎನ್‌ಡಿಎ ಮೈತ್ರಿಕೂಟದ ತೆಕ್ಕೆಗೆ ಪವಾರ್ ಪಕ್ಷ ಬರಲಿದ್ದು, ಅವರ ಪುತ್ರಿ ಸುಪ್ರಿಯಾ ಸುಳೆ ಅವರ ರಾಜಕೀಯ ತಿರುವು ಅಚ್ಚರಿ ಉಂಟು ಮಾಡಲಿದೆ ಎನ್ನುವ ಮಾತನ್ನಾಡಿದ್ದರು. ಆದರೆ ಈ ಕನಸು ನನಸಾಗಿಲ್ಲ. ತಮ್ಮ ಪಕ್ಷವು ಇಂಡಿಯಾ ಮೈತ್ರಿಕೂಟದಲ್ಲಿಯೇ ಮುಂದುವರಿಯಲಿದೆ. ಸದ್ಯಕ್ಕೆ ಯಾವ ವಿಲೀನವೂ ಇಲ್ಲ ಎಂದು ಸುಪ್ರಿಯಾ ಸುಳೆ ಸ್ಪಷ್ಟನೆ ನೀಡಿರುವುದು ಇಂಡಿಯಾ ಮೈತ್ರಿಕೂಟದ ಆತಂಕವನ್ನು ದೂರಮಾಡಿದಂತಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಕಾರ್ಯತಂತ್ರಗಳಲ್ಲಿ ಒಂದಾದ ತಮಿಳುನಾಡಿನ ಆಳುವ ಪಕ್ಷ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಟಿವಿಕೆಯನ್ನೂ ಇಂಡಿಯಾ ಮೈತ್ರಿಕೂಟದತ್ತ ಸೆಳೆಯುವ ಪ್ರಯತ್ನಕ್ಕೆ ನಿರಾಶೆ ಉಂಟಾಗಿದೆ. ಮುಖ್ಯಮಂತ್ರಿ ಜೋಸೆಫ್‌ ವಿಜಯ್ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ತನ್ನ ಐವರು ಶಾಸಕರ ಬೆಂಬಲ ನೀಡಿದ್ದರೂ ವಿಜಯ್ ಅವರ ಬೆಂಬಲ ಪಡೆಯುವ ಪ್ರಯತ್ನ ಮುಂದುವರಿಸಿದ್ದರೂ ಆ ದಿಕ್ಕಿನಲ್ಲಿ ರಾಹುಲ್ ಯಶಸ್ವಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ತಮಿಳುನಾಡಿನಲ್ಲಿ ಚುನಾವಣಾ ಆಯೋಗ ದೇಶದಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಂತರ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿರುವ ವಿಜಯ್ , ಎಸ್‌ಐಆರ್ ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್ ನಡೆಸಿರುವ ಯಾವುದೇ ಪ್ರತಿಭಟನೆಯಲ್ಲೂ ಭಾಗಿಯಾಗಿಲ್ಲ. ಈ ಮೂಲಕ ಟಿವಿಕೆಯು ಕಾಂಗ್ರೆಸ್ಸಿನ ಒಟ್ಟಾರೆ ರಾಜಕೀಯ ಕಾರ್ಯತಂತ್ರಕ್ಕೆ ಶರಣಾಗಿಲ್ಲದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ದೆಹಲಿಗೆ ಆಗಮಿಸಿದ್ದ ಜೋಸೆಫ್ ವಿಜಯ್ ಅವರ ರಾಜಕೀಯ ನಡೆಯು ಹಲವು ಕುತೂಹಲ ಹುಟ್ಟಿಸಿತ್ತಾದರೂ, ಕಾಂಗ್ರೆಸ್ ಜೊತೆಗಿನ ಮೈತ್ರಿಯ ಇತಿಮಿತಿಯನ್ನು ಕಾಪಾಡಿಕೊಂಡಿರುವುದು ವಿಶೇಷ.

ಈ ನಡುವೆ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರನ್ನು ಸೋಲಿಸುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಡಿಎಂಕೆಗೆ ಆಘಾತ ಉಂಟು ಮಾಡಿದ್ದ ಟಿವಿಕೆಯ ಶಾಸಕ ವಿ.ಎಸ್. ಬಾಬು ಅವರ ನಿಧನದಿಂದ, ಇನ್ನಾರು ತಿಂಗಳೊಳಗೆ ನಡೆಯುವ ವಿಧಾನಸಭೆ ಉಪಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಟಾಲಿನ್ ಅವರಿಗೆ ರಾಜಕೀಯ ಮರುಜೀವ ದೊರೆಯಲಿದೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಕೊಳತ್ತೂರು ವಿಧಾನಸಭೆ ಕ್ಷೇತ್ರದ ಮತದಾರರ ಅನುಕಂಪ ಟಿವಿಕೆಗೆ ಅಥವಾ ಡಿಎಂಕೆಯ ಬಲಿಷ್ಠ ನಾಯಕ ಸ್ಟಾಲಿನ್ ಅವರಿಗೆ ಒಲಿಯುವುದೇ ಎನ್ನುವುದು ಮುಂದಿನ ದಿನಗಳು ಹೇಳಬೇಕಿದೆ. ಒಂದು ವೇಳೆ ಸ್ಟಾಲಿನ್ ಬರಲಿರುವ ಉಪಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದರೆ ತಮಿಳುನಾಡಿನ ರಾಜಕೀಯ ಚಿತ್ರಣ ಮತ್ತಷ್ಟು ಆಕರ್ಷಣೆಯ ಕೇಂದ್ರವಾಗಲಿದೆ.

” ಉತ್ತರ ಪ್ರದೇಶದಲ್ಲಿ ಆಳುವ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿರುವ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಈಗಾಗಲೇ ಎರಡು ಮೂರು ಸುತ್ತು ಮಾತುಕತೆ ನಡೆದಿದೆ. ಉತ್ತರ ಪ್ರದೇಶದಲ್ಲಿ ರಾಜಕೀಯ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಕೇವಲ ೨೫ ಸೀಟುಗಳನ್ನು ಬಿಟ್ಟುಕೊಡಲು ಸಮಾಜವಾದಿ ಪಕ್ಷ ಮುಂದಾಗಿರುವ ಬಗೆಗೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಆಡುತ್ತಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸೈಬರ್ ಅಪರಾಧ: ಜಾಗೃತಿ ಕಾರ್ಯಕ್ರಮ ಹೆಚ್ಚಲಿ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ…

28 seconds ago

ಓದುಗರ ಪತ್ರ: ಜನಸಾಮಾನ್ಯರ ದಸರಾ ಆಗುವತ್ತ ಗಮನ ಹರಿಸಲಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು…

2 mins ago

ಬರೆಯುವ ರೈತ ಮಹಿಳೆಯ ಸಂಭ್ರಮದ ಕ್ಷಣಗಳು

ನಂದಿನಿ ಹೆದ್ದುರ್ಗ ೨೦೧೪ರಿಂದ ಹಾಸನದ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ ಬರೆಯುವುದರೊಂದಿಗೆ ಪದ್ಯವನ್ನೂ ಬರೆಯುತ್ತಿದ್ದೆ. ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಸಕಲೇಶಪುರದಲ್ಲಿ ನಡೆದ…

15 mins ago

ಲಿಟರರಿ ಸಂತೆಗೆ ನನ್ನ ಮೊದಲ ಸವಾರಿ

ಗುರುಪ್ರಸಾದ್ ಕಂಟಲಗೆರೆ ನಾನೂ ಒಂದು ಸಾಹಿತ್ಯ ಹಬ್ಬಕ್ಕೆ ಹೋಗಿದ್ದೆ. ‘ಸಾಹಿತ್ಯ ಹಬ್ಬ’ ಎನ್ನುವುದು ಇವತ್ತಿಗೆ ಕನೆಕ್ಟ್ ಆಗುತ್ತೆ ಎನ್ನುವುದಾದರೆ ‘ಲಿಟರರಿ…

21 mins ago

ಸತ್ವಕ್ಕಿಂತ ಸದ್ದನ್ನೇ ಸಂಭ್ರಮಿಸುತ್ತಿರುವ ಸಾಹಿತ್ಯ ಔತಣಗಳು

ಪಾತು ಕರ್ನಾಟಕದಾದ್ಯಂತ ಈಗ ಸಾಹಿತ್ಯದ ಹಬ್ಬ. ಈ ಬರಹ ಬರೆದು, ಅಚ್ಚಿಗೆ ಹೋಗಿ, ಮುದ್ರಣವಾಗಿ ನೀವು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ…

27 mins ago

ಪ್ರಯಾಣಿಕನಿಗೆ ಎದೆನೋವು: ಆಸ್ಪತ್ರೆಗೆ ಕರೆದೊಯ್ದು KSRTC ಬಸ್ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ

ಸೋಮವಾರಪೇಟೆ: ಸೋಮವಾರಪೇಟೆ–ಮೈಸೂರು–ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮಯಪ್ರಜ್ಞೆ ಮೆರೆದ ಕೆಎಸ್‌ಆರ್‌ಟಿಸಿ…

19 hours ago