Andolana originals

ಓದುಗರ ಪತ್ರ: ಜನಸಾಮಾನ್ಯರ ದಸರಾ ಆಗುವತ್ತ ಗಮನ ಹರಿಸಲಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು ಎಂಬುದು ಜನಜನಿತ. ಇದಕ್ಕೆ ವ್ಯತಿರಿಕ್ತವಾಗಿ ಈಗಿನ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ . ದಸರಾದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಮುಂಭಾಗದಲ್ಲಿ ಜನಪ್ರತಿನಿಧಿಗಳ ಕಡೆಯವರು ಮತ್ತು ಅಧಿಕಾರಿಗಳದ್ದೇ ದರ್ಬಾರು.

ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಭದ್ರತಾ ದೃಷ್ಟಿಯಿಂದ ಶ್ರಮಿಸಿದ ಪೊಲೀಸರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಆದರೆ ಕೆಲವು ಕಡೆ ಅವಶ್ಯಕತೆಗಿಂತಲೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ ಸಾರ್ವಜನಿಕರ ಸ್ಥಳಗಳಲ್ಲಿ ಸಾಮಾನ್ಯ ಜನರ ಮುಕ್ತ ಸಂಚಾರಕ್ಕೆ ಅಡಚಣೆ ಮಾಡಿದ್ದು ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಜಂಬೂ ಸವಾರಿ ವೀಕ್ಷಣೆಗೆ ನಿಗದಿತ ಸಂಖ್ಯೆಗಿಂತ ಹೆಚ್ಚು ವಿಐಪಿ ಪಾಸ್ ಗಳ ಹಂಚಿಕೆ ಮಾಡಿದ ಪರಿಣಾಮ ಹಣ ಕೊಟ್ಟು ಪಾಸ್ ಪಡೆದ ಅನೇಕರು ಹೊರಗೆ ನಿಂತು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದರು.

ಹಾಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳಿಗೆ ಅವಕಾಶ ನೀಡದೆ ವ್ಯವಸ್ಥಿತ ರೀತಿಯಲ್ಲಿ ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಬಂದವರು ಅತೃಪ್ತರಾಗದಂತೆ, ಪಾಸ್ ಪಡೆದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ದಸರಾ ಹಬ್ಬವನ್ನು ಆಚರಣೆ ಮಾಡಬೇಕಿದೆ.

-ಎಂ.ಪಿ. ದರ್ಶನ್ ಚಂದ್ರ, ಮುಕ್ಕಡಹಳ್ಳಿ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸೈಬರ್ ಅಪರಾಧ: ಜಾಗೃತಿ ಕಾರ್ಯಕ್ರಮ ಹೆಚ್ಚಲಿ

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿರುವ…

2 mins ago

ಚುರುಕುಗೊಂಡ ಐದು ರಾಜ್ಯಗಳ ಚುನಾವಣೆಯ ಕಸರತ್ತು

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಬಿಎಸ್‌ಪಿ ನಾಯಕಿ ಮಾಯಾವತಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಡೆಸಿದ್ದಾರೆ ಸಿದ್ಧತೆ…

5 mins ago

ಬರೆಯುವ ರೈತ ಮಹಿಳೆಯ ಸಂಭ್ರಮದ ಕ್ಷಣಗಳು

ನಂದಿನಿ ಹೆದ್ದುರ್ಗ ೨೦೧೪ರಿಂದ ಹಾಸನದ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ ಬರೆಯುವುದರೊಂದಿಗೆ ಪದ್ಯವನ್ನೂ ಬರೆಯುತ್ತಿದ್ದೆ. ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಸಕಲೇಶಪುರದಲ್ಲಿ ನಡೆದ…

16 mins ago

ಲಿಟರರಿ ಸಂತೆಗೆ ನನ್ನ ಮೊದಲ ಸವಾರಿ

ಗುರುಪ್ರಸಾದ್ ಕಂಟಲಗೆರೆ ನಾನೂ ಒಂದು ಸಾಹಿತ್ಯ ಹಬ್ಬಕ್ಕೆ ಹೋಗಿದ್ದೆ. ‘ಸಾಹಿತ್ಯ ಹಬ್ಬ’ ಎನ್ನುವುದು ಇವತ್ತಿಗೆ ಕನೆಕ್ಟ್ ಆಗುತ್ತೆ ಎನ್ನುವುದಾದರೆ ‘ಲಿಟರರಿ…

22 mins ago

ಸತ್ವಕ್ಕಿಂತ ಸದ್ದನ್ನೇ ಸಂಭ್ರಮಿಸುತ್ತಿರುವ ಸಾಹಿತ್ಯ ಔತಣಗಳು

ಪಾತು ಕರ್ನಾಟಕದಾದ್ಯಂತ ಈಗ ಸಾಹಿತ್ಯದ ಹಬ್ಬ. ಈ ಬರಹ ಬರೆದು, ಅಚ್ಚಿಗೆ ಹೋಗಿ, ಮುದ್ರಣವಾಗಿ ನೀವು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ…

28 mins ago

ಪ್ರಯಾಣಿಕನಿಗೆ ಎದೆನೋವು: ಆಸ್ಪತ್ರೆಗೆ ಕರೆದೊಯ್ದು KSRTC ಬಸ್ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ

ಸೋಮವಾರಪೇಟೆ: ಸೋಮವಾರಪೇಟೆ–ಮೈಸೂರು–ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮಯಪ್ರಜ್ಞೆ ಮೆರೆದ ಕೆಎಸ್‌ಆರ್‌ಟಿಸಿ…

19 hours ago