ಓದುಗರ ಪತ್ರ
ನೀಲಿಯೆಂದರೇನು?!
ನೀಲಿಯೆಂದರೇನು ಬರಿಯ ಬಣ್ಣವೇನು ?
ಮೈತ್ರಿ ಕಣಾ ಕರುಣೆ ಕಣಾ| ಸೂರ್ತಿ ಕಣಾ ಕೀರ್ತಿ ಕಣಾ|
ಬುದ್ಧ ಬಸವ ಭೀಮ ಪಥವು| ಸಮಾನತೆಯ ಕನಸು ಕಣಾ|
ದೇಶ ಭಕ್ತಿಗೆ ಹೆಸರು ಕಣಾ ನನ್ನ ಜನರ ಉಸಿರು ಕಣಾ||
ನೀಲಿಯೆಂದರೇನು ಬರಿಯ ಬಣ್ಣವೇನು?
eನ ಕಣಾ ಮಾನ ಕಣಾ| ಮಾನವತೆಯ ಕೂಗು ಕಣಾ| ಶಾಹು -ಲೆ
ಅಶೋಕರ ನ್ಯಾಯ ನೀತಿ ಧರ್ಮ ಕಣಾ| ಭ್ರಾತೃತ್ವದ ಒಲವು ಕಣಾ !
ನನ್ನ ಜನರ ಬಲವು ಕಣಾ ನಿಲುವು ಕಣಾ||
ನೀಲಿಯೆಂದರೇನು ಬರಿಯ ಬಣ್ಣವೇನು ?
ಹೋರಾಟದ ಶಕ್ತಿ ಕಣಾ ಯುಕ್ತಿ ಕಣಾ|
ನಾಲ್ವಡಿ ಗಾಂಧಿ ಪೆರಿಯಾರರ ಮಾತೃ ಮಮತೆ
ಮಡಿಲು ಕಣಾ |
ನೆಲದ ಮೊದಲ ಮಾತು ಕಣಾ! ಇಳೆ ತಣಿಸುವ ಮಳೆಯು ಕಣಾ|
ನನ್ನ ಜನರ ತ್ರಾಣ ಕಣಾ ಪ್ರಾಣ ಕಣಾ||
ನೀಲಿಯೆಂದರೇನು ಬರಿಯ ಬಣ್ಣವೇನು?
ಅಷ್ಟಾಂಗ ಮಾರ್ಗ ನಡೆಯು ಕಣಾ|
ಪಂಚ ಶೀಲ ನುಡಿಯು ಕಣಾ| ಮುಗಿಲಗಲದ ಬೋಽ
ಮರವು ಕಣಾ |
ಗುರುವು ಕಣಾ ಅರಿವು ಕಣಾ| ನನ್ನ ಜನರ ನೆರಳು ಕಣಾ
ಕೊರಳು ಕಣಾ||
-ಡಾ.ಅಂಬಳೆ ಮಹಾದೇವಸ್ವಾಮಿ
ಮಾಸ್ಕೋ: ರಷ್ಯಾದಲ್ಲಿ ಸಂಶೋಧಕಿಯೊಬ್ಬರು ತೀವ್ರ ನ್ಯುಮೋನಿಯಾದಿಂದ ಮೃತಪಟ್ಟಿರುವುದು ವರದಿಯಾಗಿದೆ. ಅಕ್ಟೋಬರ್ 2ರಂದು ತೀವ್ರ ನ್ಯುಮೋನಿಯಾದಿಂದ ಸಂಶೋಧಕಿ ಮೃತಪಟ್ಟಿದ್ದಾರೆ. ಈ ಸಾವಿಗೂ…
ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ಮುಂದೆ ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್‌ಗಳನ್ನು ಬಳಸುವಂತಿಲ್ಲ. ಬಿಐಎಸ್ ಅಥವಾ…
ಚಾಮರಾಜನಗರ: ತಾಲ್ಲೂಕಿನ ಬೂದಂಬಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಹೆಂಚಿನ ಮನೆ ಜಖಂಗೊಂಡಿದ್ದು, ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆಗೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು. ನಗರ…
‘ನಂದಿನಿ’ ಹೆಸರಿಗೆ ಕಳಂಕ ತರಬೇಡಿ ಮಂಡ್ಯ ಜಿ ಹಾಲು ಒಕ್ಕೂಟದಲ್ಲಿ ( ಮನ್ ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ…
ಮಸೂರ ಬದಲಿಸಿ ಬಾಪುವ ಹುಡುಕಿದೆ ಅಂದಗೆಟ್ಟ ವುಡ್ಲ್ಯಾಂಡ್ ಶೂ, ಹರಿದ ಜೀನ್ಸ್, ಮಾಸಿದ ಟಿ-ಶರ್ಟಿನಲಿ ಕಸ ಆಯುತಿದ್ದನವನು ತಿರುವಿನಲಿ. ರಚ್ಚೆ…