ವಾಸ್ತವವಾಗಿ ಈ ರೆಸ್ಟೊರೆಂಟ್ ಉದ್ಯಮಕ್ಕೆ ಕೈ ಹಾಕಿದವರಲ್ಲಿ ಸುರೇಶ್ ರೈನಾ ಅವರೇ ಮೊದಲಿಗರಲ್ಲ. ಅವರಿಗೂ ಮುನ್ನ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ರೆಸ್ಟೊರೆಂಟ್ ಉದ್ಯಮವನ್ನು ಆರಂಭಿಸಿದ್ದಾರೆ ಅಂತಹವರ ಪಟ್ಟಿ ಇಲ್ಲಿದೆ.
ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಕ್ರಿಕೆಟ್ ಮಾತ್ರವಲ್ಲದೆ ಬೇರೆ ವಲಯದಲ್ಲೂ ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ನೆದರ್ಲೆಂಡ್ಸ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ಶೈಲಿಯ ರೆಸ್ಟೊರೆಂಟ್ ತೆರೆದಿದ್ದು, ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಾಸ್ತವವಾಗಿ ಈ ರೆಸ್ಟೊರೆಂಟ್ ಉದ್ಯಮಕ್ಕೆ ಕೈ ಹಾಕಿದವರಲ್ಲಿ ಸುರೇಶ್ ರೈನಾ ಅವರೇ ಮೊದಲಿಗರಲ್ಲ. ಅವರಿಗೂ ಮುನ್ನ ಟೀಂ ಇಂಡಿಯಾದ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ರೆಸ್ಟೊರೆಂಟ್ ಉದ್ಯಮವನ್ನು ಆರಂಭಿಸಿದ್ದಾರೆ ಅಂತಹವರ ಪಟ್ಟಿ ಇಲ್ಲಿದೆ.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದೆಹಲಿ, ಪುಣೆ ಹಾಗೂ ಮುಂಬೈ ಸೇರಿದಂತೆ ಹಲವು ಕಡೆ ಒನ್ 8 ಕಮ್ಯೂನ್ ಎಂಬ ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ ವಿರಾಟ್ ದೆಹಲಿಯಲ್ಲಿ NUEVA ಎಂಬ ಹೆಸರಿನ ರೆಸ್ಟೋರೆಂಟ್ ಕೂಡ ನಡೆಸುತ್ತಿದ್ದಾರೆ.
ಕೊಹ್ಲಿಯಂತೆಯೇ ರವೀಂದ್ರ ಜಡೇಜಾ ಕೂಡ ಬಹಳ ವರ್ಷಗಳಿಂದ ರೆಸ್ಟೋರೆಂಟ್ ವ್ಯವಹಾರ ನಡೆಸುತ್ತಿದ್ದಾರೆ. ಜಡೇಜಾ ರಾಜ್‌ಕೋಟ್‌ನಲ್ಲಿ ಜಡ್ಡುಸ್ ಫುಡ್ ಫೀಲ್ಡ್ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಈ ಹಿಂದೆ ಜಡೇಜಾ ಅವರ ಜಡ್ಡುಸ್ ಫುಡ್ ಫೀಲ್ಡ್ ರೆಸ್ಟೋರೆಂಟ್ಗೆ ಹಲವು ಕ್ರಿಕೆಟಿಗರು ಭೇಟಿ ನೀಡಿ ರುಚಿ ಸವಿದಿದ್ದರು.
1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಪಾಟ್ನಾದಲ್ಲಿ ‘ಇಲೆವೆನ್ಸ್’ ಎಂಬ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೂಡ SM 18 ಎಂಬ ಹೆಸರಿನ ಕೆಫೆಯನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆರಂಭಿಸಿದ್ದಾರೆ.
ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಕೂಡ 2005ರಲ್ಲಿ ಫೈನ್ ಡೈನಿಂಗ್ ರೆಸ್ಟೋರೆಂಟ್ ಅನ್ನು ಪುಣೆಯಲ್ಲಿ ಆರಂಭಿಸಿದ್ದಾರೆ.
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…