Andolana originals

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ

ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ ಬಸ್‌ಗಳ ಸೇವೆ ಒದಗಿಸಲು ರೂಟ್ ಮ್ಯಾಪ್

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಓಡಾಟ ಕೂಡ ದ್ವಿಗುಣವಾಗಲಿದ್ದು, ನಗರದ ಹೊರವಲಯದಲ್ಲಿ ಈ ಬಾರಿ ನಡೆಯುವ ಎರಡು ಪ್ರಮುಖ ಕಾರ್ಯಕ್ರಮಗಳಿಗೆ ಬಸ್ ಸೇವೆ ಒದಗಿಸುವುದು ದೊಡ್ಡ ಸವಾಲಾಗಿದೆ.

ರಿಂಗ್ ರಸ್ತೆಯ ಹೊರಗೆ ಇರುವ ಉತ್ತನಹಳ್ಳಿ ಸಮೀಪ ನಡೆಯುವ ಯುವ ದಸರಾಕ್ಕಿಂತಲೂ ಕಂಬಳ ಕ್ರೀಡೆ ನೋಡಲು ಲಕ್ಷಾಂತರ ಮಂದಿ ಆಗಮಿಸುವ ಕಾರಣ ಸಾತಗಳ್ಳಿಗೆ ಹೆಚ್ಚಿನ ಬಸ್ ಸೇವೆ ಒದಗಿಸಲು ಮೀಸಲಿಡಬೇಕಾಗಿದೆ. ಹೀಗಾಗಿಯೇ ಕಂಬಳ ಕ್ರೀಡೆ ನಡೆಯುವ ದಿನಗಳಂದು ತಾತ್ಕಾಲಿಕ ಕೇಂದ್ರ ತೆರೆದು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ನಿರ್ವಹಣೆ ಮಾಡಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗೀಯ ಅಧಿಕಾರಿಗಳು ಹದಿನೈದು ದಿನಗಳ ಮುನ್ನವೇ ರೂಟ್ ಮ್ಯಾಪ್ ಪ್ಲಾನ್ ಮಾಡುತ್ತಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಯುವ ದಸರಾ ಕಾರ್ಯಕ್ರಮವನ್ನು ಕೆಲ ವರ್ಷಗಳ ಹಿಂದೆ ಉತ್ತನಹಳ್ಳಿ ಗ್ರಾಮದ ಸಮೀಪವಿರುವ ವಿಶಾಲವಾದ ಜಾಗಕ್ಕೆ ಸ್ಥಳಾಂತರ ಮಾಡಲಾಯಿತು. ದಕ್ಷಿಣ ಭಾರತದ ಹೆಸರಾಂತ ನಟ, ಮೈಸೂರಿನವರೇ ಆದ ಪ್ರಭುದೇವ ಅವರನ್ನು ಯುವ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಅದೇ ರೀತಿ ಸಾತಗಳ್ಳಿಯ ವಿಟಿಯು ಪ್ರಾದೇಶಿಕ ಕೇಂದ್ರದ ಸಮೀಪವಿರುವ ೨೨ ಎಕರೆ ಜಾಗದಲ್ಲಿ ಕಂಬಳ ಕ್ರೀಡೆ ನಡೆಸಲು ಕೋಣಗಳ ಓಟಕ್ಕೆ ಬೇಕಾದಂತಹ ಕಂಬಳ ಕೆರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಕಂಬಳ ಆಯೋಜಕರು ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಇದರ ಬೆನ್ನಲ್ಲೇ ಮೈಸೂರು ನಗರ ಸಾರಿಗೆ ವಿಭಾಗದ ಅಧಿಕಾರಿಗಳು ಉತ್ತನಹಳ್ಳಿ ಹಾಗೂ ಸಾತಗಳ್ಳಿ ಕಾರ್ಯಕ್ರಮಗಳಿಗೆ ನಗರ ಬಸ್ ನಿಲ್ದಾಣ, ಕುವೆಂಪುನಗರ, ಸಾತಗಳ್ಳಿ ಬಸ್ ನಿಲ್ದಾಣದಿಂದ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ತಾತ್ಕಾಲಿಕ ಕೇಂದ್ರ: ಯುವ ದಸರಾ ಕಾರ್ಯಕ್ರಮ ಸಂಜೆ ಶುರುವಾದರೆ, ಕಂಬಳ ಕ್ರೀಡೆ ಮಧ್ಯಾಹ್ನದ ವೇಳೆ ನಡೆಯುವ ಕಾರಣ ನಗರ ಮತ್ತು ಹೊರಗಿನ ಪ್ರದೇಶಗಳಿಂದ ನಿರೀಕ್ಷೆಗೂ ಮೀರಿ ಜನ ಭಾಗವಹಿಸುವ ಕಾರಣ ತಾತ್ಕಾಲಿಕ ಕೇಂದ್ರವನ್ನು ತೆರೆದು ಬಸ್ ಸೇವೆ ಒದಗಿಸಲಾಗುತ್ತದೆ. ರಿಂಗ್ ರಸ್ತೆ ಮತ್ತು ಸಂಪರ್ಕ ಸ್ಥಳಗಳಿಂದ ಬಸ್‌ಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಓಡಿಸಲಾಗುತ್ತದೆ. ಪ್ರಾರಂಭದಲ್ಲಿ ಐದು ಬಸ್‌ಗಳನ್ನು ಕಾರ್ಯಾಚರಣೆಗೆ ಬಿಟ್ಟಾಗ ಹೆಚ್ಚುವರಿ ಬೇಡಿಕೆ ಇದ್ದರೆ ತಕ್ಷಣವೇ ಮತ್ತೆ ಐದು ಬಸ್‌ಗಳನ್ನು ಕಾಯ್ದಿರಿಸಿಕೊಂಡು ಸೇವೆ ಕೊಡಲಾಗುತ್ತದೆ. ಅದೇ ರೀತಿ ಬೇರೆ ಕಡೆಗಳಿಂದಲೂ ಬಸ್‌ಗಳನ್ನು ಮೀಸಲಿಟ್ಟು ಬೇಡಿಕೆ ಪೂರೈಸಲಾಗುವುದು. ಸಾತಗಳ್ಳಿಗೆ ಬರುವಂತಹ ಮಾರ್ಗಗಳು, ಸಂಪರ್ಕ ರಸ್ತೆಗಳು ಹಾಗೂ ಯಾವ್ಯಾವ ಕಡೆಯಿಂದ ಸುಗಮವಾಗಿ ಬರಬಹುದು ಎನ್ನುವುದರ ಬಗ್ಗೆ ರೂಟ್ ಮ್ಯಾಪ್ ಸಿದ್ಧಪಡಿಸಿಕೊಂಡು ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

” ಕಂಬಳ, ಯುವ ದಸರಾ ಕಾರ್ಯಕ್ರಮಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ ಸೇವೆ ಒದಗಿಸಲು ಬಸ್‌ಗಳನ್ನು ಕಾಯ್ದಿರಿಸಲಾಗುತ್ತದೆ. ಜನರ ಸಂಖ್ಯೆಗೆ ಅನುಗುಣವಾಗಿ ನಾವು ರೂಟ್ ಮ್ಯಾಪ್ ಮಾಡಿ ಅದರಂತೆ ನೋಡಿ ಕೊಳ್ಳುತ್ತೇವೆ.”

-ಜಗದೀಶ್‌ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ ವಿಭಾಗ 

ಟಿಕೆಟ್ ವ್ಯವಸ್ಥೆ: ಯುವ ದಸರಾ, ಕಂಬಳ ವೀಕ್ಷಣೆಗೆ ಬಸ್ ವ್ಯವಸ್ಥೆ ಇದ್ದರೂ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಾಗಿದೆ. ಟಿಕೆಟ್ ದರ ಇನ್ನಷ್ಟೇ ಅಂತಿಮವಾಗಬೇಕಿದೆ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

8 mins ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

9 mins ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

11 mins ago

ರಂಗದ ಮೇಲೆ ಜಿನುಗಿದ ಜೀವಸೆಲೆ

ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…

14 mins ago

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

19 mins ago