‘ಪ್ರತಾಪ’ಕ್ಕೆ ಸವಾಲು ಈ ನೀಲಿ
ಇದು ನಮ್ಮ ಸೂರು ಆಕಾಶದ ನೀಲಿ
ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ
ನನಗೆ ತಣ್ಣನೆ ಗಾಳಿ ನೀಡಿದ ನೀಲಿ
ನನಗೆ ಹೊದಿಕೆಯಾದ ನೀಲಿ
ನಾನು ಮಲಗಿ ಮೇಲೆ ನೋಡಿದಾಗ
ಕಣ್ಣಿಗೆ ತಂಪು ನೀಡುವ ಗಗನದ ನೀಲಿ
ತಂದೆ ಬಾಬಾ ಸಾಹೇಬರು ಧರಿಸಿದ ನೀಲಿ
ಅದು ಪ್ರತಿಭಟನೆಯ ಅಸ ಈ ನೀಲಿ
ದಬ್ಬಾಳಿಕೆಯ ಮೆಟ್ಟಿ ನಿಂತ ನೀಲಿ
ನಿಮ್ಮ ಹುನ್ನಾರಗಳ ಽಕ್ಕರಿಸಿದ ನೀಲಿ
ನಿಮ್ಮ ಕುತಂತ್ರಗಳನು ಹತ್ತಿಕ್ಕಿದ ನೀಲಿ
ನಿಮ್ಮ ಮೌಢ್ಯಗಳಿಗೆ ಸಡ್ಡುಹೊಡೆದ ನೀಲಿ
ನಾವು ತಲೆ ಎತ್ತಿ ನಡೆಯಲು eನ ನೀಡಿದ
ನೀಲಿ
ನೀಲಿ ನೀಲಿ ನೀಲಿ
ನಾವು ಹೆಗಲ ಮೇಲೆ ಧರಿಸಿದ ನೀಲಿ
ದುಷ್ಟರ ಪಾಲಿನ ಶಿಕ್ಷೆ ಈ ನೀಲಿ
ಇದು ನಮ್ಮ ರಕ್ಷಣೆಯ ನೀಲಿ
ಸಂವಿಧಾನ ಬರೆದ ನೀಲಿ
ಕಾನೂನು ಬಣ್ಣ ಈ ನೀಲಿ
ನಮ್ಮ ರುಮಾಲು ಈ ನೀಲಿ
‘ಪ್ರತಾಪ’ಕ್ಕೆ ಸವಾಲು ಈ ನೀಲಿ
-ಈ.ಧನಂಜಯ ಎಲಿಯೂರು
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…