ತಿರುವನಂತಪುರಂ: ಈ ಬಾರಿ ಅಕ್ಟೋಬರ್-ನವೆಂಬರ್ ನಲ್ಲಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಬಿಸಿಸಿಐ ಏಕಾಂಗಿಯಾಗಿ ಕೂಟವನ್ನು ಆಯೋಜಿಸುತ್ತಿರುವುದರಿಂದ ಕೂಟ ಅತ್ಯಂತ ಮಹತ್ವ ಪಡೆದು ಕೊಂಡಿದೆ. ಇಂತಹ ಹೊತ್ತಿನಲ್ಲಿ ಕೇರಳದ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಸಂತೋಷದ ಸುದ್ದಿ ಲಭಿಸಿದೆ.
ತಿರುವನಂತಪುರಂ ಗ್ರೀನ್ ಫೀಲ್ಡ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಹಾಗಂತ ಅವರಿಗೆ ಪೂರ್ಣ ಸಂಭ್ರಮಪಡಲು ಅವಕಾಶವಿಲ್ಲ. ಭಾರತದ ಯಾವುದೇ ಪಂದ್ಯಗಳು ನಡೆಯುವ ಸಾಧ್ಯತೆ ಶೇ.99 ಇಲ್ಲ.
ತಿರುವನಂತಪುರಂ ಮೈದಾನದಲ್ಲಿ ಶ್ರೀಲಂಕಾದ ಒಂದು ಪಂದ್ಯ ನಡೆಯಬಹುದು. ಇನ್ನೆರಡು ಇತರೆ ದೇಶಗಳ ಪಂದ್ಯಗಳು ನಡೆಯಲಿವೆ. ಈ ಬಗ್ಗೆ ಎಲ್ಲವೂ ಅಧಿಕೃತವಾಗಿದ್ದರೂ ಐಸಿಸಿ ವಿಶ್ವಕಪ್‌ನ ವೇಳಾಪಟ್ಟಿಯನ್ನು ಅಧಿಕೃತಗೊಳಿಸಿದ ಮೇಲಷ್ಟೇ ಎಲ್ಲವೂ ಅಂತಿಮಗೊಳ್ಳಲಿದೆ. ಅಂದರೆ ಔಪಚಾರಿಕ ವಿಧಿವಿಧಾನಗಳಷ್ಟೇ ಬಾಕಿಯಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಯೇಶ್ ಜಾರ್ಜ್, ನಾವು ಬಿಸಿಸಿಐಗೆ ಮನವಿ ಮಾಡಿದ್ದೇವೆ. ಕೆಲವು ಪಂದ್ಯಗಳು ನಮಗೆ ಸಿಗುವ ನಂಬಿಕೆಯೂ ಇದೆ. ಆದರೆ ಬಿಸಿಸಿಐನಿಂದ ಇನ್ನೂ ನಮಗೆ ಅಧಿಕೃತವಾಗಿ ಖಾತ್ರಿ ಸಿಕ್ಕಿಲ್ಲ ಎಂದಿದ್ದಾರೆ.
ಕೇರಳದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯುವುದು ಅಷ್ಟೇನು ಮಹತ್ವದ ಸಂಗತಿ ಎಂದು ನೀವು ಪ್ರಶ್ನಿಸುತ್ತೀರಾ? ಮಹತ್ವವಿದೆ. ಭಾರತ ಇದುವರೆಗೆ ಮೂರು ಬಾರಿ ವಿಶ್ವಕಪ್ ಆತಿಥ್ಯ ವಹಿಸಿದೆ. 1987, 1996 ಮತ್ತು 2011ರಂದು. ಅಷ್ಟೂ ಬಾರಿ ಜಂಟಿ ಆತಿಥ್ಯದಲ್ಲೇ ನಡೆದಿದ್ದು. ಈ ಕಾರಣಕ್ಕೆ ಕೇರಳ ಒಮ್ಮೆಯೂ ವಿಶ್ವಕಪ್ ಪಂದ್ಯವನ್ನಾಯೋಜಿಸುವ ಅವಕಾಶ ಸಿಕ್ಕಿಲ್ಲ
ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ…
೩೦ ವರ್ಷ ಪ್ರಾಯದ ಸಫುರಾ ಖಾನ್‌ರ ತಂದೆ ತಾಯಿ ಚೆನ್ನೆ ಯಿಂದ ಕರ್ನಾಟಕಕ್ಕೆ ವಲಸೆ ಬಂದಾಗ ಆಕೆ ಇನ್ನೂ ಮಗುವಾಗಿದ್ದರು.…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು…
ಮಾಮರಶಿ ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು ೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ ಮಳವಳ್ಳಿ:…
ಕೆ.ಬಿ.ರಮೇಶನಾಯಕ ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ…
ಶೇಷಾದ್ರಿ ಗಂಜೂರು ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಯುದ್ಧದ ಬೀಸಿಗೆ ಸಿಲುಕಿ ಮುಖ್ಯವಾಗಿ ೧೨…