ಶೇಷಾದ್ರಿ ಗಂಜೂರು
ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಯುದ್ಧದ ಬೀಸಿಗೆ ಸಿಲುಕಿ ಮುಖ್ಯವಾಗಿ ೧೨ ದೇಶಗಳು ತತ್ತರಿಸಿವೆ. ಇಲ್ಲಿ ಪ್ರಮುಖವಾಗಿ ಲೆಬನಾನ್ ದೇಶವು ನೇರವಾಗಿ ಸಂಘರ್ಷದಲ್ಲಿ ಪಾಲ್ಗೊಂಡಿಲ್ಲ. ಆದರೆ, ತನ್ನದೇ ನೆಲೆಯಲ್ಲಿರುವ ಹೆಜ್ಬುಲ್ಲಾ ಎಂಬ ಸಂಘಟನೆಯ ಅವಾಂತರದಿಂದ ನೋವು- ನಷ್ಟ ಅನುಭವಿಸುವ ಸಂಕಷ್ಟಕ್ಕೆ ಸಿಲುಕಿದೆ. ಸ್ಥಳೀಯವಾಗಿ ದೇವರ ಪಕ್ಷ ಎಂದೇ ಗುರುತಿಸಿಕೊಂಡಿರುವ ಹೆಜ್ಬುಲ್ಲಾ ಮಾಡಿರುವ ಎಡವಟ್ಟು ಏನು? ಅಲ್ಲದೆ, ಚಾಟಿಂಗ್‌ಗೆ ಸೀಮಿತ ಎಂದೇ ಭಾವಿಸಿದ್ದ ಕೃತಕ ತಂತ್ರಜ್ಞಾನ ಯುದ್ಧವನ್ನು ಆಳುವ ಮಟ್ಟಕ್ಕೂ ಹೇಗೆ ಬೆಳೆದು ನಿಂತಿದೆ ಎಂಬ ಅಂಶಗಳನ್ನು ಕುರಿತು ಮಾಧ್ಯಮ ತಜ್ಞ ಶೇಷಾದ್ರಿ ಗಂಜೂರು ಅವರ ವ್ಯಾಖ್ಯಾನದ ಅಕ್ಷರ ರೂಪ ಇಲ್ಲಿದೆ.
ಮಧ್ಯಪ್ರಾಚ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಈಗ ಹೆಜ್ಬುಲ್ಲಾ ಕಾರಣದಿಂದ ಲೆಬನಾನ್ ದೇಶವನ್ನು ಸುಡಲು ಆರಂಭಿಸಿದೆ. ಅಸಲಿಗೆ ಈ ಹೆಜ್ಬುಲ್ಲಾ ಎಂದರೆ ಯಾರು? ಇವರಿಂದ ಇಡೀ ಲೆಬನಾನ್ ದೇಶ ಏಕೆ ಸಂಕಷ್ಟಕ್ಕೆ ಸಿಲುಕಿದೆ ಎಂಬುದರ ಹಿನ್ನೆಲೆ ಇಲ್ಲಿದೆ.
ಹೆಜ್ಬುಲ್ಲಾ ಅಂದರೆ ಅರೇಬಿಕ್ ಭಾಷೆಯಲ್ಲಿ ದೇವರ ಪಕ್ಷ ಎಂದು ಅರ್ಥ. ಇದು ಕೇವಲ ಒಂದು ಸಶಸ್ತ್ರ ಗುಂಪು ಮಾತ್ರವಲ್ಲ. ಲೆಬನಾನಿನ ಒಂದು ಪ್ರಭಾವಿ ರಾಜಕೀಯ ಪಕ್ಷ ಕೂಡ ಹೌದು. ೧೯೮೨ರಲ್ಲಿ ಇಸ್ರೇಲ್, ಲೆಬನಾನಿನ ಮೇಲೆ ಆಕ್ರಮಣ ಮಾಡಿದಾಗ ಅದನ್ನು ಎದುರಿಸಲು ಇರಾನ್ ಬೆಂಬಲದೊಂದಿಗೆ ಈ ಸಂಘಟನೆ ಅಸ್ತಿತ್ವಕ್ಕೆ ಬಂತು. ಇಂದು ಇದು ಲೆಬನಾನಿನ ಅಽಕೃತ ಸೇನೆಗಿಂತಲೂ ಹೆಚ್ಚು ಶಕ್ತಿಯುತವಾಗಿದೆ ಅಂತಲೇ ಹೇಳಲಾಗುತ್ತದೆ.
ಈಗಿನ ಅಸಲಿ ಸಮಸ್ಯೆ ಏನೆಂದರೆ, ಹೆಜ್ಬುಲ್ಲಾ ಮತ್ತು ಇರಾನ್ ನಡುವಿನ ಗಾಢ ಸಂಬಂಧವಾಗಿದೆ. ಹೆಜ್ಬುಲ್ಲಾ ಸಂಘಟನೆಯು ಇರಾನಿನ್ ಒಂದು ಪ್ರಾಕ್ಸಿ ಅಥವಾ ಪ್ರತಿನಿಽಯಂತೆ ಕೆಲಸ ಮಾಡುತ್ತಿದೆ. ಈಗ ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಯುದ್ಧ ಶುರುವಾಗಿರುವಾಗ ಹೆಜ್ಬುಲ್ಲಾ, ಇರಾನ್ ಪರವಾಗಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಲು ಆರಂಭಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನಿನ ಮೇಲೆ ಭೀಕರ ಬಾಂಬ್ ದಾಳಿ ಶುರು ಮಾಡಿದೆ. ಅಂದರೆ ಇರಾನಿನ ಹಿತಾಸಕ್ತಿಗಾಗಿ ಹೆಜ್ಬುಲ್ಲಾ ಮಾಡುತ್ತಿರುವ ಹೋರಾಟಕ್ಕೆ ಇವತ್ತು ಇಡೀ ಲೆಬನಾನ್ ಬೆಲೆ ತೆರುವಂತಾಗಿದೆ.
ಲೆಬನಾನ್ ಸರ್ಕಾರ, ಹೆಜ್ಬುಲ್ಲಾಗೆ ಇಸ್ರೇಲ್ ವಿರುದ್ಧದ ಯುದ್ಧದಿಂದ ದೂರ ಇರಲು ಎಚ್ಚರಿಕೆ ನೀಡಿದ್ದರೂ, ಅದರ ನಾಯಕರು ಮಾತ್ರ ಕೇಳುತ್ತಿಲ್ಲ. ಇದರಿಂದ ಜನಸಾಮಾನ್ಯರು ಮನೆ-ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಒಂದು ರಾಜಕೀಯ ಸಂಘಟನೆಯ ನಿರ್ಧಾರ ಇಡೀ ದೇಶವನ್ನೇ ಅಸ್ಥಿರಗೊಳಿಸುತ್ತಿರುವುದು ಇಂದಿನ ದುರಂತ. ಮುಂದೆ ಏನಾಗುತ್ತದೆ ಎನ್ನುವುದನ್ನು ನಾವು ಕಾದು ನೋಡಬೇಕು ಅಷೆ
ಇವತ್ತು ಯುದ್ಧ ಅಂದರೆ ಬರೀ ಕ್ಷಿಪಣಿ, ಬಾಂಬ್, ಟ್ಯಾಂಕರ್‌ಗಳಷ್ಟೇ ಅಲ್ಲ. ಅದರ ಹಿಂದೆ ಆರ್ಟಿಫಿಷಿಯಲ್ ಇಂಟಲಿಜೆಂಟ್ (ಎಐ) ಕೂಡ ಕೆಲಸ ಮಾಡುತ್ತಿದೆ. ಪ್ರಸ್ತುತ ನಡೆಯುತ್ತಿರುವ ಇರಾನ್ ಸಂಘರ್ಷದಲ್ಲಿ ಎಐ ಬಳಕೆ ಮತ್ತು ಅದೇ ವಿಚಾರಕ್ಕೆ ಅಮೆರಿಕದಲ್ಲಿ ಎರಡು ದೈತ್ಯ ಕಂಪೆನಿಗಳಾದ ಆಂತ್ರೋಪಿಕ್ ಮತ್ತು ಓಪನ್ ಐ ನಡುವೆ ನಡೆದ ಕಿತ್ತಾಟದ ಕೆಲ ವಿವರಗಳನ್ನು ಗಮನಿಸಬಹುದು. ಈಗಿನ ಇರಾನ್ ಸಂಘರ್ಷದಲ್ಲಿ ಎಐ ಅನ್ನು ಸೈಬರ್ ದಾಳಿ ನಡೆಸಲು, ಸುಳ್ಳು ಸುದ್ದಿ ಅಥವಾ ಡೀಪ್ ಫೇಕ್ ವಿಡಿಯೋಗಳ ಮೂಲಕ ಜನರನ್ನು ದಾರಿ ತಪ್ಪಿಸಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಶತ್ರುಗಳ ಕ್ಷಿಪಣಿಗಳನ್ನು ಪತ್ತೆ ಹಚ್ಚಲು, ಡ್ರೋನ್ ಗಳ ಮೂಲಕ ನಿಖರ ದಾಳಿ ನಡೆಸಲು ಮಿಲಿಟರಿ ಶಕ್ತಿಗಳು ಎಐ ಮೇಲೆ ಅವಲಂಬಿತವಾಗಿವೆ. ಅಂದರೆ ಈ ತಂತ್ರಜ್ಞಾನ ಯುದ್ಧದ ವೇಗವನ್ನೇ ಬದಲಿಸುತ್ತಿದೆ.
ಈ ಮಧ್ಯೆ ಆಂತ್ರೋಪಿಕ್ ಕಂಪೆನಿಯು ಅಮೆರಿಕದ ರಕ್ಷಣಾ ಇಲಾಖೆಯ ೧,೮೦೦ ಕೋಟಿ ರೂ. ಒಪ್ಪಂದಿಂದ ಹಿಂದೆ ಸರಿದಿದೆ. ತಮ್ಮ ಎಐ ಮಾಡೆಲ್ ಕ್ಲಾಡ್‌ನ್ನು ಮನುಷ್ಯರ ಮೇಲೆಗೂಢಚಾರಿಕೆ ಮಾಡಲು ಅಥವಾ ಸ್ವಯಂ ಚಾಲಿ ಮಾರಕಾಯುಧಗಳಲ್ಲಿ ಬಳಸಲು ಬಿಡುವುದಿಲ್ಲ ಎಂದು ಆ ಕಂಪೆನಿ ಪಟ್ಟು ಹಿಡಿದಿದೆ. ನೈತಿಕತೆ ಮುಖ್ಯ ಯುದ್ಧವಲ್ಲ ಎನ್ನುವುದು ಅವರ ನಿಲುವು. ಇದರಿಂದ ಕೋಪಗೊಂಡ ಸರ್ಕಾರ ಆ ಕಂಪೆನಿಯನ್ನು ಬ್ಲಾಕ್ ಲಿಸ್ಟ್ (ಕಪ್ಪು ಪಟ್ಟಿ) ಕೂಡ ಮಾಡಿದೆ. ಆದರೆ, ಇದೇ ಅವಕಾಶವನ್ನು ಬಳಸಿಕೊಂಡು ಚಾಟ್‌ಜಿಪಿಟಿಯ ಮಾತೃ ಸಂಸ್ಥೆ ಓಪನ್ ಐ, ಆಂತ್ರೋಪಿಕ್ ಸಂಸ್ಥೆಯು ಬಿಟ್ಟುಹೋದ ಅದೇ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಪ್ರಕಾರ, ಸರ್ಕಾರ ಮತ್ತು ತಂತ್ರಜ್ಞಾನ ಕಂಪೆನಿಗಳ ನಡುವೆ ಸಂಬಂಧ ಚೆನ್ನಾಗಿರಬೇಕು. ನಾವು ಸುರಕ್ಷತಾ ಕ್ರಮಗಳೊಂದಿಗೆ ಸಹಾಯ ಮಾಡುತ್ತೇವೆ ಎನ್ನುವ ಮೂಲಕ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಇತ್ತೀಚೆಗೆ ಚಾಟ್‌ಜಿಪಿಟಿ ಅನ್ನು ಅನ್- ಇನ್‌ಸ್ಟಾಲ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಒಟ್ಟಿನಲ್ಲಿ ಎಐ ಕೇವಲ ಚಾಟಿಂಗ್‌ಗೆ ಮಾತ್ರವಲ್ಲ, ದೇಶಗಳ ಭವಿಷ್ಯ ಮತ್ತು ಯುದ್ಧವನು ನಿರ್ಧರಿಸುವ ಮಟ್ಟಕ್ಕೂ ಬೆಳೆದು ನಿಂತಿದೆ.
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…