Andolana originals

‘ಭವಾನಿ ನಗರಕ್ಕೆ ಒಮ್ಮೆ ಬನ್ನಿ ಪ್ಲೀಸ್…’

ಪ್ರಶಾಂತ್ ಎನ್. ಮಲ್ಲಿಕ್

ಮೈಸೂರು: ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಮೈಸೂರಿನ ಪಕ್ಕದಲ್ಲೇ ಒಂದು ಬಡಾವಣೆ ಇದೆ. ಆದರೆ ಅಲ್ಲಿಗೆ ಹೋದರೆ ನೀವು ಯಾವುದೋ ಹಳ್ಳಿಗಿಂತಲೂ ಕಡೆಯಾದ ಊರಿಗೆ ಬಂದಂತಾಗುತ್ತದೆ! ಇದು ಜೆ.ಪಿ. ನಗರದ  ರಿಂಗ್ ರಸ್ತೆಗೆ ತೀರಾ ಹತ್ತಿರದಲ್ಲಿರುವ ಭವಾನಿ ನಗರ ಬಡಾವಣೆಯ ಇಂದಿನ ದುಸ್ಥಿತಿ. ಹಾಗಾಗಿ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ‘ಒಮ್ಮೆ ಬನ್ನಿ ಪ್ಲೀಸ್…’ ಎನ್ನುತ್ತಿದ್ದಾರೆ.

ಹಂದಿಗಳ ತಾಣವಾದ ವಸತಿ ಪ್ರದೇಶ: ಬಡಾವಣೆಯ ೨ನೇ ಕ್ರಾಸ್‌ನಲ್ಲಿ ಕಾಲಿಟ್ಟರೆ ಸಾಕು, ಮೂಗು ಮುಚ್ಚಿಕೊಳ್ಳದೆ ಓಡಾಡುವುದು ಅಸಾಧ್ಯ. ಇಲ್ಲಿನ ಯುಜಿಡಿ (ಒಳಚರಂಡಿ) ಕಾಮ ಗಾರಿ ಅರ್ಧಕ್ಕೆ ನಿಂತು ಹಲವು ವರ್ಷಗಳೇ ಕಳೆದಿವೆ. ಚರಂಡಿ ನೀರು ಮತ್ತು ಮಳೆಯ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ, ಖಾಲಿ ಇರುವ ಸೈಟುಗಳಲ್ಲೇ ಬಂದು ನಿಲ್ಲುತ್ತಿದೆ. ಈ ಕೊಳಚೆ ನೀರು ಈಗ ಹಂದಿಗಳ ನೆಚ್ಚಿನ ಆವಾಸ ಸ್ಥಾನವಾಗಿದೆ. ಹಗಲು-ರಾತ್ರಿ ಎನ್ನದೇ ಹಂದಿಗಳು ಈ ಗಬ್ಬೆದ್ದು ನಾರುವ ನೀರಿನಲ್ಲಿ ಹೊರಳಾಡುತ್ತಾ, ಸ್ಥಳೀಯರ ಮನೆಗಳ ಬಾಗಿಲವರೆಗೂ ಬಂದು ನಿಲ್ಲುತ್ತಿವೆ.

ನೆಂಟರಿಷ್ಟರ ಮುಂದೆ ಅವಮಾನ: ನಮ್ಮ ಮನೆಗೆ ಬರುವ ನೆಂಟರಿಷ್ಟರು, ‘ಹಳ್ಳಿಗಳ ಪರಿಸ್ಥಿತಿಗಿಂತಲೂ ಹೀನಾಯವಾಗಿರುವ ಈ ಜಾಗದಲ್ಲಿ ನೀವು ಹೇಗೆ ವಾಸಿಸುತ್ತಿದ್ದೀರಿ?’ ಎಂದು ವ್ಯಂಗ್ಯವಾಡುತ್ತಾರೆ. ಅವರ ಮಾತಿನಿಂದ ನಮಗೆ ಅವಮಾನವಾಗತ್ತಿದೆ, ಆದರೆ ಬೇರೆ ದಾರಿಯಿಲ್ಲದೆ ಇಲ್ಲದಂತಾಗಿದೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ.

ಈ ಸಮಸ್ಯೆ ಪರಿಹಾರಕ್ಕಾಗಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ದಿನನಿತ್ಯ ಅಲೆದಾಡಿದರೂ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳಿಗೆ ಜನರ ಕಷ್ಟ ಮಾತ್ರ ಕಾಣಿಸುತ್ತಿಲ್ಲ.

ರೋಗಗಳಿಗೆ ಸರಾಗ: ಈಗಾಗಲೇ ಬಡಾವಣೆಯ ಅನೇಕರಲ್ಲಿ ಚರ್ಮವ್ಯಾಧಿ ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿವೆ. ಈಗ ಬೇಸಿಗೆ ಕಾಲ ಶುರುವಾಗುತ್ತಿರುವುದರಿಂದ ಕೊಳಚೆ ನೀರಿನ ದುರ್ವಾಸನೆ ಮತ್ತಷ್ಟು ಹೆಚ್ಚಾಗಲಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರು ಈ ಅಶುಚಿತ್ವದ ನಡುವೆಯೇ ಬದುಕು ದೂಡುತ್ತಿದ್ದಾರೆ.

” ಬೀದಿಯ ನೀರು ಮನೆಯೊಳಗೆ ನುಗ್ಗುತ್ತದೆ. ಈ ಬಗ್ಗೆ ಹಲವಾರು ಬಾರಿ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಂದಿಗಳ ಹಾವಳಿಯಿಂದ ಮಕ್ಕಳು, ವೃದ್ಧರು ದಿನವೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.”

ಶಂಕರ್, ಬಡಾವಣೆ ನಿವಾಸಿ

” ರಸ್ತೆ, ಯುಜಿಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನಿತ್ಯವೂ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಬಳಿ ಎಷ್ಟು ಬಾರಿ ಹೋದರೂ ಪ್ರಯೋಜನವಾಗುತ್ತಿಲ್ಲ. ಮುಂದೆ ಬೃಹತ್ ಮೈಸೂರು ಮಹಾನಗರ ಪಾಲಿಕೆಯಾದರೆ ಇಲ್ಲಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ.”

ಕೆ.ಸಿ.ಬಸವರಾಜು, ಬಡಾವಣೆ ನಿವಾಸಿ ಹಾಗೂ ನಿವೃತ್ತ ತಹಸಿಲ್ದಾರ್

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನೀತಿ ಪಾಠಗಳು ಶಿಕ್ಷಣ ಭಾಗವಾಗಬೇಕೆಂಬ ಸಲಹೆ ಸ್ವಾಗತಾರ್ಹ

ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…

4 hours ago

ಓದುಗರ ಪತ್ರ: ವಿಚ್ಛೇದನಗಳೂ ದುಬಾರಿಯಾಗಿವೇ!

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ…

4 hours ago

ಓದುಗರ ಪತ್ರ: 3 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ಜನರಿಗೋ, ಖಾಸಗಿ ವಾಹನಗಳಿಗೋ?

ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್…

4 hours ago

ಬಹುತ್ವ ಭಾರತ ನೀತಿಗೆ ಮೋಹನ್ ಭಾಗವತ್ ಬದ್ಧರೇ?

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ…

4 hours ago

ವಿಶ್ವದಾಖಲೆಗೆ ಕಾಯುತ್ತಿರುವ ಅರಿವೆಯ ಮೇಲಿನ ಮದರಂಗಿ ಚಿತ್ತಾರ

ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ…

5 hours ago

ಅಧ್ಯಾತ್ಮದ ಅಮಲಿನಲ್ಲಿ ದಾರಿ ತಪ್ಪಿದ ತರುಣ ತರುಣಿಯರು

ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ…

5 hours ago