Andolana originals

ರಾಷ್ಟ್ರಿಯ ಹೆದ್ದಾರಿ ಅಗಲೀಕರಣ ವಿಳಂಬ: ಆರೋಪ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು ತಿಂಗಳುಗಳೇ ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಹತ್ತಾರು ಕಿ.ಮೀ. ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ರಸ್ತೆ ಅಗಲೀಕರಣ ಮಾಡುತ್ತಿದ್ದರೂ ವಿದ್ಯುತ್ ಕಂಬಗಳು, ಮರಗಳನ್ನು ತೆರವು ಮಾಡಿಲ್ಲ. ಕೆಲವು ಪೆಟ್ರೋಲ್ ಬಂಕ್‌ಗಳು ಮೊದಲೇ ರಾಷ್ಟ್ರೀಯ ಹೆದ್ದಾರಿಗೆ ಚಾಚಿದಂತೆ ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ರಸ್ತೆಗೆ ಮಣ್ಣು, ಜಲ್ಲಿ ಹಾಕಿ ಬಿಗಿ ಮಾಡುವ ಕಾರ್ಯ ನಡೆಯುತ್ತಿದ್ದರೂ ಮರ ಮತ್ತು ಕಂಬಗಳನ್ನು ತೆರವು ಮಾಡದೆ ಇರುವುದರಿಂದ ನಂತರ ಮರ, ಕಂಬಗಳನ್ನು ತೆರವುಗೊಳಿಸುವ ವೇಳೆ ರಸ್ತೆ ಸಡಿಲವಾಗುತ್ತದೆ ಎಂದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ರಸ್ತೆಯನ್ನು ಐದು ಕಿ.ಮೀ. ಅಂತರದವರೆಗೆ ಮಾಡಿ, ನಂತರ ಮತ್ತೆ ೫ ಕಿ.ಮೀ.ನಂತೆ ಮಾಡಿದರೆ ಸಮಸ್ಯೆಯಾಗುವುದಿಲ್ಲ.

ಆದರೆ ಹತ್ತಾರು ಕಿ.ಮೀ. ದೂರ ಒಟ್ಟಿಗೆ ರಸ್ತೆ ಅಗಲಿಕರಣ ಮಾಡಲು ಮುಂದಾಗಿ ಮಂದಗತಿಯಲ್ಲಿ ಕಾಮಗಾರಿ ನಡೆಸಿದರೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತದೆ ಎಂಬುದು ವಾಹನ ಸವಾರರ ಆರೋಪ.

ಇದರ ಬಗ್ಗೆ ಪ್ರಶ್ನಿಸಲು ವಾಹನ ಸವಾರರು ಮುಂದಾದರೆ ನಮಗೆ ಕನ್ನಡ ಬರುವುದಿಲ್ಲ ಎಂದು ಇಂಜಿನಿಯರ್, ಸಿಬ್ಬಂದಿ, ಕಾರ್ಮಿಕರು ಹೇಳುತ್ತಾರೆ. ತಮಿಳುನಾಡು ಮೂಲದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ.

ವ್ಯಾಪಾರಸ್ಥರಿಗೆ ನಷ್ಟ: ರಸ್ತೆ ಬದಿಯಲ್ಲಿ ಅಗೆದಿರುವ ಕಾರಣ ಅಂಗಡಿ ಮುಂಗಟ್ಟು ಇಟ್ಟುಕೊಂಡಿರುವ ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತಿದೆ. ಎರಡೂ ಬದಿಗಳಲ್ಲಿ ರಸ್ತೆಯನ್ನು ಅಗೆದಿರುವ ಕಾರಣ ರಸ್ತೆ ಕಿರಿದಾ ಗಿದ್ದು, ಟಿಪ್ಪರ್ ಮತ್ತಿತರ ವಾಹನಗಳ ಚಾಲನೆಯಿಂದ ಅಪಘಾತಗಳಾಗುವ ಆತಂಕವಿದೆ.

” ರಸ್ತೆ ಅಗಲೀಕರಣ ಕಾಮಗಾರಿ ಕಳಪೆಯಾಗಿದೆ. ಜಲ್ಲಿ ಬಳ ಸಿಲ್ಲ, ಮಣ್ಣು ಮಿಶ್ರಿತ ಮಾಡಿ ಹಾಕಿದ್ದಾರೆ. ಸರಿಯಾಗಿ ಅಗಲೀಕರಣವಾಗುತ್ತಿಲ್ಲ. ಸೆಸ್ ನವರು ಕಂಬಗಳನ್ನು, ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.”

ಮಹದೇವಪ್ಪ, ರೈತ ಮುಖಂಡ, ಮಾಡ್ರಹಳ್ಳಿ

” ಅವೈಜ್ಞಾನಿಕ ಕಾಮಗಾರಿ ನಡೆ ಯುತ್ತಿದೆ. ಕೆಲವೆಡೆ ಮಾತ್ರ ಚತುಷ್ಪಥ ಮಾಡುತ್ತಿದ್ದು, ಕೆಲವೆಡೆ ಯಥಾಸ್ಥಿತಿ ಇದೆ. ಇದರಿಂದ ವಾಹನ ಸವಾರರಿಗೆ ರಸ್ತೆಯ ಅಂದಾಜು ತಿಳಿಯದೆ ಅಪಘಾತಗಳಾಗಲಿದೆ. ಗ್ರಾವಲ್ಸ್ ಕಡಿಮೆ ಹಾಕಿ ಗುಣಮಟ್ಟದ ರಸ್ತೆ ಕಿತ್ತು ಅದ್ವಾನ ಮಾಡಿದ್ದಾರೆ. ಬೇಗೂರಲ್ಲಿ ಚತುಷ್ಪಥ ಮತ್ತು ಸರ್ವೀಸ್ ರಸ್ತೆಯಾಗಬೇಕು.”

ರವಿ ಕಮರಹಳ್ಳಿ, ಬಿಜೆಪಿ ಯುವ ಮುಖಂಡ

” ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ರಸ್ತೆ ಅಗಲೀಕರಣದಿಂದಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ. ಗುಂಡ್ಲುಪೇಟೆ-ಮೈಸೂರು ರಸ್ತೆ ಅಗಲೀಕರಣದಿಂದ ವಾಹನ ಸವಾರರಿಗೂ ಸಮಯ ಉಳಿಯುತ್ತದೆ. ಮರಗಳ ತೆರವಿಗೆ ಅರಣ್ಯ ಇಲಾಖೆಯಿಂದ ಎನ್‌ಒಸಿ ಕೆಲವೇ ದಿನಗಳಲ್ಲಿ ಸಿಗಲಿದ್ದು, ರಸ್ತೆ ಅಭಿವೃದ್ಧಿ ಮಾಡುವಾಗ ಸಮಸ್ಯೆ ಎದುರಾಗುವುದು ಸಹಜ. ನಮ್ಮ ತಾಲ್ಲೂಕಿನ ಸಂಪರ್ಕ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು.”

ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

ಆಂದೋಲನ ಡೆಸ್ಕ್

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

11 hours ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

11 hours ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

11 hours ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

11 hours ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

11 hours ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago