Andolana originals

ಮೂಗನಕೊಪ್ಪಲಿನಲ್ಲಿ ಮಾದರಿ ಚಾಕಿ ಸಾಕಾಣಿಕಾ ಕೇಂದ್ರ

ಮಾಮರಶಿ

ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು

೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ

ಮಳವಳ್ಳಿ: ರೇಷ್ಮೆ ಬೆಳೆಯಿಂದ ರೈತನ ಜೀವನ ಹಸನಾಗಲಿದೆ ಎಂಬುದನ್ನು ಸಾಬೀತುಪಡಿಸಿ, ಹಲವರಿಗೆ ಉದ್ಯೋಗ ಕಲ್ಪಿಸಿ, ದೇಶ-ವಿದೇಶಗಳಲ್ಲಿ ಅಧ್ಯಯನ ನಡೆಸಿ ‘ರೇಷ್ಮೆ ರಾಜ’ ಎಂಬ ಖ್ಯಾತಿ ಪಡೆದಿರುವ ಯುವ ರೈತ ರೇಷ್ಮೆ ಬೆಳೆಗಾರ ತ್ಯಾಗರಾಜು ಅವರ ಸಾಧನೆ ರೈತರಿಗೆ ಮಾದರಿಯಾಗಿದೆ.

ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಕುಗ್ರಾಮ ಕಾಕರಾಮರನಹಳ್ಳಿಯವೆಂಕಟರಾಮಯ್ಯ-ವನ ಜಾಕ್ಷಮ್ಮ ಅವರ ಪುತ್ರ ತ್ಯಾಗರಾಜ ಅವರು ಬಿ.ಎ. ಪದವೀಧರ. ರೇಷ್ಮೆ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು, ಕೀರನಗೆರೆ ಜಗದೀಶ್ ಅವರ ಚಾಕಿ ಕೇಂದ್ರದಲ್ಲಿ ೧೨ ವರ್ಷ ರೇಷ್ಮೆ ಬೆಳೆ, ಅಭಿವೃದ್ಧಿ ಬಗ್ಗೆ ಕಲಿತು, ೨೦೧೬ರಲ್ಲಿ ಮಳವಳ್ಳಿ ತಾಲ್ಲೂಕಿನ ಮೂಗನಕೊಪ್ಪಲು ಬಳಿ ‘ಮೂಗನಕೊಪ್ಪಲು ಚಾಕಿ ಸಾಕಾಣಿಕಾ ಕೇಂದ್ರ’ವನ್ನು ಆರಂಭಿಸಿ ೨೦೦ ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ತಮ್ಮ ನೌಕರರಿಗೆ ಪಿಎಫ್, ಇಎಸ್‌ಐ, ವಿಮೆ ಸೌಲಭ್ಯ ನೀಡಿ ಅವರ ಕುಟುಂಬಕ್ಕೆ ಆಧಾರವಾಗಿದ್ದಾರೆ.

೧೦ ಸಾವಿರ ರೈತರಿಗೆ ಮರಿ ಸರಬರಾಜು ಗುರಿ: ಆರಂಭದಲ್ಲಿ ೫೦ ಲಕ್ಷ ರೂ. ಬಂಡವಾಳ ಹೂಡಿ ಇದೀಗ ಒಂದೂವರೆ ಕೋಟಿ ರೂ. ಬಂಡವಾಳದೊಂದಿಗೆ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಚಾಕಿ ಮರಿಗಳನ್ನು ಉತ್ಪಾದಿಸಿ, ರಾಜ್ಯದ ೬ ಸಾವಿರ ರೈತರಿಗೆ ಸರಬರಾಜು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ೧೦ ಸಾವಿರ ರೈತರಿಗೆ ಸರಬರಾಜು ಮಾಡುವ ಗುರಿ ಇಟ್ಟುಕೊಂಡಿದ್ದಾರೆ.

೫ ಸಾವಿರ ರೇಷ್ಮೆ ಗೂಡು ಉತ್ಪಾದಿಸುವ ಗುರಿ: ೩೯ನೇ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ರೇಷ್ಮೆ ಕಾಯಕ ಮಾಡುತ್ತಾ ತಿಂಗಳಿಗೆ ೨ ಸಾವಿರ ಕೆ.ಜಿ. ರೇಷ್ಮೆಗೂಡು ಉತ್ಪಾದಿಸುತ್ತಿದ್ದಾರೆ. ರೈತರಿಗೆ ಉಚಿತ ತರಬೇತಿ: ಸರ್ಕಾರದ ಯಾವುದೇ ಸವಲತ್ತು ಪಡೆಯದೇ ರೈತರಿಗೆ ಉಚಿತವಾಗಿ ತರಬೇತಿ, ಶೇ.೯೫ಕ್ಕೂ ಹೆಚ್ಚು ಇಳುವರಿ ಉತ್ಪಾದಿಸಲು ತಾಂತ್ರಿಕತೆ ಮತ್ತು ಸಲಹೆಯೊಂದಿಗೆ ಪ್ರತಿ ವರ್ಷ ರಾಜ್ಯದ ಸಾವಿರಾರು ಯುವ ರೈತರಿಗೆ ತರಬೇತಿ ನೀಡಿದ್ದಾರೆ.

೧೮ ದೇಶಗಳಿಗೆ ಅಧ್ಯಯನ ಪ್ರವಾಸ: ಚೀನಾ, ಬ್ರೆಜಿಲ್, ಜಪಾನ್, ಥೈಲ್ಯಾಂಡ್, ಇಸ್ರೇಲ್ ದೇಶಗಳು ಸೇರಿದಂತೆ ೧೮ಕ್ಕೂ ಹೆಚ್ಚು ದೇಶಗಳಿಗೆ ಪ್ರವಾಸ ತೆರಳಿ ರೇಷ್ಮೆ ಕೃಷಿ ಕುರಿತು ಅಧ್ಯಯನ ಮಾಡಿದ್ದಾರೆ.

ಸಮಾಜ ಸೇವೆಯಲ್ಲೂ ಮುಂದು: ಉತ್ತಮ ದ್ವಿತಳಿ ರೇಷ್ಮೆ ಬೆಳೆಗಾರರನ್ನು ಸನ್ಮಾನಿಸುತ್ತಾ, ರೇಷ್ಮೆ ಬೆಳೆಗಾರರಿಗೆ ಮಾರ್ಗದರ್ಶಕರಾಗಿರುವುದಲ್ಲದೆ, ಸರ್ಕಾರಿ ಶಾಲೆಗಳಿಗೆ ವಾಟರ್ ಫಿಲ್ಟರ್, ಕಪ್ಪು ಹಲಗೆಗಳು, ಮಕ್ಕಳ ಮನೆ ನಿರ್ಮಾಣ, ಪುಟಾಣಿ ಮಕ್ಕಳಿಗೆ ಚೇರ್ ಮತ್ತು ಟೇಬಲ್‌ಗಳನ್ನು ನೀಡುತ್ತಾ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

” ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆ ಯುವ ಜಿಲ್ಲೆಯಾಗಿದೆ. ಗುಣಮಟ್ಟದಲ್ಲಿ ರೇಷ್ಮೆ ಬೆಳೆ ಬೆಳೆದರೆ ರೈತರಿಗೆ ವರದಾನ. ಎಲ್ಲ ಬೆಳೆಗಿಂತಲೂ ರೇಷ್ಮೆ ಬೆಳೆ ಲಾಭದಾಯಕ. ಸರ್ಕಾರಗಳೂ ರೇಷ್ಮೆ ಬೆಳೆಗೆ ಬಹಳಷ್ಟು ಉತ್ತೇಜನ ನೀಡುತ್ತಿವೆ.”

– ತ್ಯಾಗರಾಜು, ರೇಷ್ಮೆ ಬೆಳೆಗಾರ 

 

 

ಆಂದೋಲನ ಡೆಸ್ಕ್

Recent Posts

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

13 mins ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

21 mins ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

5 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

5 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

5 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

5 hours ago