Andolana originals

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ

ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ ೧೮ರ ಸಂಭ್ರಮ ಆಚರಣೆ ಮಾಡಲಾಗುತ್ತಿದ್ದು, ಮನೆಮನೆಯಲ್ಲೂ ಕಕ್ಕಡದ ವಿಶೇಷ ಖಾದ್ಯಗಳು ಘಮಘಮಿಸಲಿವೆ.

ಕೊಡಗು ಜಿಲ್ಲೆಯ ಸಂಸ್ಕೃತಿ, ಆಚಾರ ವಿಚಾರಗಳು ವಿಭಿನ್ನವಾಗಿವೆ. ಅಂತಹ ವಿಭಿನ್ನ ಆಚರಣೆಗಳಲ್ಲಿ ಆಷಾಢ ತಿಂಗಳ ಹದಿನೆಂಟರಂದು ನಡೆಯುವ ಕಕ್ಕಡ ೧೮ರ ಆಚರಣೆ ಕೂಡ ಒಂದು. ಈ ದಿನ ಔಷಧಿಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷ.

ಹಸಿರು ಕಾನನದ ಗೂಡಾದ ಕೊಡಗಿನಲ್ಲಿ ಔಷಧಿಯ ಗುಣಗಳನ್ನು ಹೊಂದಿರುವ ಹಸಿರು ಗಿಡಗಳಿಗೇನೂ ಕೊರತೆ ಇಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ, ಚಳಿ, ಗಾಳಿಗೆ ಮಾನವನ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ನಾಟಿ ಕೋಳಿ, ಏಡಿ, ಹೊಳೆಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಾಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವರ್ಧಕ ವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗುವ ಕೊಡಗಿನ ಕೃಷಿಕರು ಮಳೆ, ಚಳಿಗೆ ಮೈಯೊಡ್ಡಿ ದುಡಿಯುತ್ತಾರೆ. ಇದೇ ಕಾರಣಕ್ಕೆ ದೇಹವನ್ನು ಬೆಚ್ಚಗಿಡುವ ಖಾದ್ಯಗಳಿಗೆ ವಿಶೇಷ ಆದ್ಯತೆ ನೀಡುತ್ತಾರೆ.

ಕಕ್ಕಡ ೧೮ರಂದು ಮದ್ದ್ ತೊಪ್ಪು ಎಂದು ಕರೆಯಲ್ಪಡುವ ವಿಶೇಷವಾದ ಗಿಡವನ್ನು ಕಾಡಿನಿಂದ ಆರಿಸಿ ತರುತ್ತಾರೆ. ಇದು ಆರೋಗ್ಯಕ್ಕೆ ಪೂರಕವಾದುದು ಹಾಗೂ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎನ್ನಲಾಗುತ್ತದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಚಿಕ್ಕ ಬಳ್ಳಿಯಂತಹ ಒಂದು ವರ್ಗದ ಸಸ್ಯದಿಂದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸಲಾಗುತ್ತದೆ. ಸುಮಾರು ೮-೧೦ ಅಡಿ ಎತ್ತರಕ್ಕೆ ಈ ಗಿಡ ಬೆಳೆಯುತ್ತದೆ. ಹಿಂದೆ ಕಾಡಿನಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದ್ದ ಈ ಗಿಡಗಳು ಇಂದು ಕಡಿಮೆಯಾಗಿವೆ. ಸಾಕಷ್ಟು ಜನ ತಮ್ಮ ಮನೆಯ ಸುತ್ತಮುತ್ತಲೇ ಇಂದಿಗೂ ಈ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಕಕ್ಕಡ ೧೮ ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ವಿಶೇಷವಾದ ಸುವಾಸನೆ ಈ ಗಿಡದಿಂದ ಬರಲು ಆರಂಭವಾಗುತ್ತದೆ. ಇದರಿಂದ ಇದನ್ನು ಸುಲಭವಾಗಿ ಹುಡುಕಿತರಬಹುದು. ೧೮ರ ನಂತರ ಇದರ ಸುವಾಸನೆ ಹಾಗೂ ಔಷಧ ಗುಣಗಳು ಕಡಿಮೆಯಾಗುತ್ತ ಹೋಗುತ್ತದೆ ಎನ್ನುವ ನಂಬಿಕೆ ಇದೆ.

ಕಾಡಿನಿಂದ ತಂದ ಸೊಪ್ಪನ್ನು ಒಂದು ದಿನ ಮುನ್ನ ಜಜ್ಜಿ ನೀರಿನಲ್ಲಿ ನೆನೆ ಹಾಕುತ್ತಾರೆ. ಇಲ್ಲವೇ ಆ ಸೊಪ್ಪನ್ನು ಬೇಯಿಸಿ ಅದರ ರಸವನ್ನು ತೆಗೆಯುತ್ತಾರೆ. ಈ ನೀರಿನಲ್ಲಿ ಅಕ್ಕಿ ಪಾಯಸ, ವಿವಿಧ ಬಗೆಯ ತಿಂಡಿಗಳನ್ನು ಮಾಡಿ ಸೇವಿಸುತ್ತಾರೆ. ಇದರಿಂದ ನಮ್ಮ ದೇಹದಲ್ಲಿರುವ ಕಲ್ಮಷಗಳು ಹೊರ ಹೋಗುತ್ತವೆಯಲ್ಲದೆ ಹಲವು ಬಗೆಯ ರೋಗಗಳಿಗೆ ಔಷಧವಾಗಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಬಹುತೇಕ ಮಂದಿ ಕಕ್ಕಡ ೧೮ರಂದು ಇದನ್ನು ಸೇವಿಸುತ್ತಾರೆ.

ಮದ್ದು ಸೊಪ್ಪು ಭರ್ಜರಿ ಮಾರಾಟ:  ಕಕ್ಕಡ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವ್ಯಾಪಾರಿಗಳು ನಾನಾ ಕಡೆಯಿಂದ ಮದ್ದುಸೊಪ್ಪನ್ನು ತಂದು ನಗರದ ಮುಖ್ಯ ಬೀದಿಗಳಲ್ಲಿ ಮುಂಜಾನೆಯಿಂದಲೇ ಮಾರಾಟ ಮಾಡುತ್ತಿದ್ದರು. ನಗರಸಭೆ ಬಳಿ, ಕೋಟೆ ಮುಂಭಾಗ, ಬಸ್ ನಿಲ್ದಾಣ, ಚೌಕಿ ಆವರಣ ಸೇರಿದಂತೆ ವಿವಿಧೆಡೆ ಮದ್ದು ಸೊಪ್ಪನ್ನು ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು

ಸೊಪ್ಪಿಗೆ 18 ಔಷಧಿಯ ಗುಣ..!: 

ಕಕ್ಕಡ ಆರಂಭವಾದ ದಿನದಿಂದ ೧೮ ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು ೧೮ ಔಷಧಿಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತವೆ ಎಂದು ನಂಬಲಾಗಿದೆ. ೧೮ ಔಷಧಿಗಳು ಸಂಪೂರ್ಣವಾಗಿ ಸೇರಿಕೊಂಡ ನಂತರವಷ್ಟೇ ಸೊಪ್ಪಿಗೆ ಪರಿಪೂರ್ಣ ಔಷಧಿಯ ಗುಣ ಬರುತ್ತದೆ ಎನ್ನುವ ಕಾರಣಕ್ಕೆ ಕಕ್ಕಡ ೧೮ರಂದೇ ಮದ್ದು ಸೊಪ್ಪನ್ನು ಕೊಯ್ದು ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಸೊಪ್ಪನ್ನು ಮಧುಬನ ಎಂದು ಕೂಡ ಕರೆಯುತ್ತಾರೆ. ಇದರಿಂದ ತಯಾರಿಸಲಾದ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ಇಂದಿನ ವಿಶೇಷವಾಗಿದೆ. ತುಳುನಾಡಿನಲ್ಲಿ ಆಟಿ ೧೮ನ್ನು ಯಾವ ರೀತಿಯಲ್ಲಿ ಆಚರಿಸಲಾಗುವುದೋ ಅದೇ ರೀತಿಯಲ್ಲಿ ಕೊಡಗಿನಲ್ಲಿ ಕೂಡ ಕಕ್ಕಡ ೧೮ ಒಂದು ವಿಶಿಷ್ಟ ಆಚರಣೆಯಾಗಿದೆ.

” ಸಾರ್ವಜನಿಕವಾಗಿ ಕಕ್ಕಡ ಪದ್ನೆಟ್ ಆಚರಣೆ ಆರಂಭವಾಗಿ ಈ ವರ್ಷಕ್ಕೆ ಮೂರು ದಶಕಗಳಾಗುತ್ತಿವೆ. ಈ ಪರಂಪರೆಯನ್ನು ಮೂಲತಃ ಕೊಡವ ಕಾರಣವರು (ಪೂರ್ವಜರು) ಪ್ರಾರಂಭಿಸಿದ್ದು, ಅದನ್ನು ಸಿಎನ್‌ಸಿ ಸಾರ್ವತ್ರಿಕ ಆಚರಣೆಯ ಮೂಲಕ ಅತ್ಯಂತ ಗೌರವದಿಂದ ಮುಂದುವರಿಸಿಕೊಂಡು ಬರುತ್ತಿದೆ. ಇದು ಕೊಡವ ಜಾನಪದ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ.”

-ಎನ್.ಯು.ನಾಚಪ್ಪ, ಅಧ್ಯಕ್ಷ, ಕೊಡವ ನ್ಯಾಷನಲ್ ಕೌನ್ಸಿಲ್

 

 

ಆಂದೋಲನ ಡೆಸ್ಕ್

Recent Posts

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

5 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

6 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

7 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

13 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

20 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

20 hours ago