ಓದುಗರ ಪತ್ರ
ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನೆ ಹಾಗೂ ನೌಕಾ ನೆಲೆಗಳ ಮೇಲೆ ಇರಾನ್ ನಡೆಸುತ್ತಿರುವ ಕ್ಷಿಪಣಿ ದಾಳಿಗಳಿಂದಾಗಿ ಅಲ್ಲಿನ ನಾಗರಿಕರು ಹಾಗೂ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಅನಿವಾಸಿ ಭಾರತೀಯರಲ್ಲಿ ಆತಂಕ ಉಂಟಾಗಿದೆ.
ಈ ಯುದ್ಧದ ಪರಿಣಾಮ ಭಾರತದ ಮೇಲೂ ಆಗಲಿದೆ. ಭಾರತಕ್ಕೆ ಸರಬರಾಜಾಗುವ ಕಚ್ಚಾ ತೈಲದ ಹಡಗುಗಳು ಇರಾನ್‌ನ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗಬೇಕಾಗಿದ್ದು, ಅಲ್ಲಿ ಹಡಗುಗಳ ಸಂಚಾರವನ್ನು ನಿಷೇಧಿಸಿರುವುದರಿಂದ ಭಾರತಕ್ಕೆ ಇಂಧನ ಪೂರೈಕ ಸ್ಥಗಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತದೆ. ವಿಶ್ವಸಂಸ್ಥೆ ಕೂಡಲೇ ಮಧ್ಯ ಪ್ರವೇಶಿಸಿ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವ ಮೂಲಕ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುವುದು ಅಗತ್ಯ.
-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…