Andolana originals

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು ನಮ್ಮ ನೇತಾರರಾದ ಗಾಂಧಿ ನಡೆದರೆ ? ಈ ವಾಸ್ತವ ಆಲೋಚನೆಯೊಡನೆ ಯೋಚಿಸಿದಾಗ, ನಮ್ಮ ಗಾಂಧಿ ಕಾಲೋನಿಯಲ್ಲಿ ಹುಟ್ಟು, ಶಿಕ್ಷಣ, ಆರೋಗ್ಯ ಪ್ರತಿಯೊಂದೂ ಹಿಂಸೆಯಿಂದ ಕೂಡಿದ ವ್ಯವಹಾರಗಳಲ್ಲಿ ಒಂದಾಗಿದೆ. ರಕ್ಷಿಸುವ ಹೆಸರಿನಲ್ಲಿ ಬಂದೂಕುಗಳನ್ನು ಕೊಳ್ಳುತ್ತಿರುವುದು ಜನರಿಗೆ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನೂ ಅಲ್ಲ.

ನಿಜಕ್ಕೂ ಗಾಂಧಿಯ ಒಂದೇ ಒಂದು ನಡೆ, ಆ ನಡೆಯನ್ನು ನಾನು ಕೂಡ ನಡೆಯಬೇಕೆಂದು ಯೋಚಿಸುತಿದ್ದೆ. ಅದೃಷ್ಟವೆಂಬಂತೆ ೨೦೦೫ರಲ್ಲಿ ದಂಡಿ ಯಾತ್ರೆಯ ೭೫ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಗಾಂಧಿಜಿ ಅವರ ಅಹಿಂಸಾ ತತ್ವಗಳು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಲು ಹಮ್ಮಿಕೊಂಡಿದ್ದ ಐತಿಹಾಸಿಕ ದಂಡಿಯಾತ್ರೆಯ ಪ್ರತಿ ರೂಪಕ ಪಾದಯಾತ್ರೆಯಲ್ಲಿ ಮೈಸೂರಿನ ಒಡನಾಡಿ ಸಂಸ್ಥೆಯವನಾದ ನನ್ನನ್ನು ಆಯೋಜಕರಾದ ಬ್ರಿಟಿಷ್ ಹೈ ಕಮಿಷನ್ ಸ್ವಾಗತಿಸಿತ್ತು. ಅಹಮದಾಬಾದ್ ಸಬರಮತಿ ಆಶ್ರಮ ಯಾತ್ರೆಯ ಆರಂಭಿಕ ಸ್ಥಳದಲ್ಲಿ ನಾನು ಗಾಂಧಿಜಿಯವರ ಉಣ್ಣುವ ಒಂದಿಷ್ಟು ಪಾತ್ರೆ ಪಡಗ, ಗಾಂಧಿ ಮಕ್ಕಳು ಮಲಗಿದ ಸ್ಥಳ ಇತ್ಯಾದಿಗಳನ್ನು ನೋಡುತ್ತಲೇ ಆಡಂಬರವನ್ನು ಮೈ ಸುತ್ತಿಕೊಳ್ಳದ ಗಾಂಧಿ ಏನೆಲ್ಲ ಬಿಟ್ಟು ಹೋಗಿದ್ದಾನೆ. ಕುಳಿತ ಸ್ಥಳ, ನಿಂತ ಸ್ಥಳ, ಕಾಯಕ ಮಾಡಿದ ಜಾಗ ಎಲ್ಲವೂ ಚರಕದಂತೆ ಮುಕ್ಕಾಗಿರುವುದು ಕಾಣುತ್ತಿತ್ತು. ಮೆಲ್ಲಗೆ ನಾವು ಕರಿ ನೆಲದ ಮೇಲೆ ಗಾಂಧಿ ನಡೆದ ದಾರಿಯಲ್ಲಿ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದೆವು.

ನಡೆಯುತ್ತಾ ಗಾಂಧಿಗೆ ಯಾವುದೆಲ್ಲವೂ ರುಚಿಸುವುದಿಲ್ಲವೋ ಆ ಜಾತಿವ್ಯವಸ್ಥೆ, ಧರ್ಮದ ವ್ಯವಸ್ಥೆ ಆಡಂಬರಗಳು ಅಲ್ಲಲ್ಲಿ ಎದ್ದು ಕಾಣುತ್ತಿದ್ದವು. ನಡೆಯುತ್ತಾ ನಡೆಯುತ್ತಾ ಹಳ್ಳಿಯ ದಾರಿಯಲ್ಲಿ ಸಾಗುತ್ತಿದ್ದಾಗ ಮತ್ತದೆ ಎಮ್ಮೆ ಮೇಯಿಸುವ ಜನರು ಸ್ವಾತಂತ್ರ್ಯದ ಅರಿವಿಲ್ಲದೆ ತಬ್ಬಲಿತನದ ಹೆಜ್ಜೆ ಹಾಕುವ ಮಂದಿ ಸ್ವಚ್ಛತೆ ಇಲ್ಲದ ಕೆರೆ, ಕೊಳಗಳು, ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲಿಗಳು ಮುಂತಾದವುಗಳನ್ನು ನೋಡುತ್ತಾ ಸಾಗತೊಡಗಿದೆವು. ಗಾಂಧಿ ಅಲ್ಲಲ್ಲಿ ತಂಗಿದ ಸ್ಥಳ, ಹೋರಾಡಿದ, ಭಾಷಣ ಮಾಡಿದ ಸ್ಥಳ… ನಾವು ಗಾಂಧಿ ಯುಗದಲ್ಲಿ ನಡೆಯುತ್ತಿದ್ದೇವೆ ಎಂದು ಭ್ರಮಿಸುವಂತೆ ಕಾಣುತ್ತಿತ್ತು.

ಬಂದ ಎಲ್ಲರಿಗೂ ಸರಳ ಜೀವನ, ಗಾಂಧಿಜಿ ಹೋರಾಟದ ಆಶಯಗಳು, ಪ್ರತಿಯೊಬ್ಬರ ಜೀವನದಲ್ಲಿ ಮುನ್ನಡೆಸಬೇಕಾದಂತಹ ಆಶಯಗಳು. ಅದರಲ್ಲಿ ಮುಖ್ಯವಾಗಿ ಸರ್ವರ ಉದಯವಾಗಬೇಕೆಂದು, ಸರ್ವೋದಯ ಎಂದರೆ ಏನು ಎನ್ನುತ್ತಾ ನಾವಷ್ಟು ಜನರು ನಡೆಯುತ್ತಾ ಗಾಂಧಿಯ ವಿಚಾರದ ಮಾತುಕತೆಯ ದಟ್ಟಾಣಿಯೊಳಗೆ ತುಂಬಿಹೋಗಿದ್ದೆವು. ಹಾಗೆಯೇ ಮೇರು ವ್ಯಕ್ತಿತ್ವದ ಮಹಾವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್ ನಮ್ಮ ಎದೆಯನ್ನು ತಟ್ಟ ತೊಡಗಿದರು.

೧೯೩೯ರಲ್ಲಿ ಗಾಂಧಿಗೆ ೭೦ ವರ್ಷ ತುಂಬಿದ ಸಂದರ್ಭದಲ್ಲಿ. ಅಲ್ಬರ್ಟ್ ಐನ್‌ಸ್ಟಿನ್ ಹೇಳಿದ ಮಾತು, ನಮ್ಮ ದಾರಿಯ ಆ ಕಪ್ಪು ನೆಲದಲ್ಲಿ ಪ್ರತಿಧ್ವನಿಸುತ್ತಿತ್ತು-‘ಈ ಜಗತ್ತಿನ ಪ್ರತಿಯೊಬ್ಬರ ಹೃದಯಗಳಲ್ಲಿ ಒಬ್ಬ ಪಕೀರನಿದ್ದ ಈ ನೆಲದ ಮೇಲೆ ರಕ್ತ ಮಾಂಸಭರಿತವಾಗಿ ಅಡ್ಡಾಡಿದ್ದು ನಿಜವಿರಬಹುದೇ, ನಿಜವೇ ಇದು. ಈ ಗಾಂಧಿ ನಮ್ಮಂತೆ ಮಾನವನಾಗಿ ಜನಸಿ ಅನ್ನ, ಜಲ, ವಾಯು ಸೇವಿಸಿದ ಮಾನವ ದೇವರು ಎಂದು ಯೋಚಿಸುವಂತಾಗಿದೆ’ ಎಂಬ ವಿಜ್ಞಾನಿಯ ಆ ಮಾತುಗಳು ನಮ್ಮ ಕಿವಿ ಒಳಗೆ ಗುನುಗುಟ್ಟುತ್ತಿದ್ದವು.

ಗಾಂಧಿಯ ಬಗ್ಗೆ ಅನುಮಾನದ ಹುತ್ತವನ್ನು ತಲೆಗೇರಿಸಿಕೊಂಡು ಮುನ್ನಡೆಯುತ್ತಿರುವ ಯುವಜನ ಗಾಂಧಿಯನ್ನು ನಿರಂತರವಾಗಿ ಅಪಹಾಸ್ಯ ಮಾಡುತ್ತಾ ಭಿನ್ನ ರೀತಿಯಲ್ಲಿ ಚಿತ್ರಿಸುತ್ತಾ ತಮಗನಿಸಿದ್ದನ್ನು ನಂಜಿನ ರೀತಿಯಲ್ಲಿ ಹಾಡಿಕೊಳ್ಳುತ್ತಾ ಹೋರಾಟದ ಆಶಯಗಳನ್ನೇ ಮರೆತು ಕೇಕೆ ಹಾಕುತ್ತಿರುವ ಜನಸಮುದ್ರ, ಎಲ್ಲದರ ಬಗ್ಗೆ ಚರ್ಚೆ ಮಾಡುತ್ತಾ ಪಾದಯಾತ್ರೆಯನ್ನು ನಡೆಸುತ್ತಿದ್ದೆವು. ಗಾಂಧಿಯನ್ನೂ, ಅವರ ಹೋರಾಟವನ್ನೂ, ಅಪಹಾಸ್ಯಗೊಳಿಸುತ್ತಿರುವ ಈ ಸಂದರ್ಭದಲ್ಲಿ ಉದ್ಯೋಗವಿಲ್ಲದ ಜನ, ಕೃಷಿಕರ ಬಗ್ಗೆ ಗೌರವ ಇಲ್ಲದ ಸರ್ಕಾರಗಳು, ದೀನ ದಲಿತರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಬಂಡವಾಳಶಾಹಿಗಳು, ಪ್ರತಿದಿನ ದುಃಖವನ್ನು ತಲೆಯ ಮೇಲೆ ಹೊತ್ತು ಜೀವನದ ರಥವನ್ನು ಎಳೆಯಬೇಕಾದಂತಹ ಬಲವಂತದ ದುಡಿಮೆ… ಎಲ್ಲವನ್ನೂ ಅವಡುಗಚ್ಚಿ ಸಹಿಸಿಕೊಳ್ಳುವ ಅಂಶ ಜನಸಾಮಾನ್ಯರ ಎದೆಯಲ್ಲಿ ಕರಿಬಂಡೆಯಂತೆ ಹೆಪ್ಪುಗಟ್ಟಿದೆ.

ರೋದನೆಗಳನ್ನು ಸಹಿಸಿಕೊಳ್ಳುತ್ತಾ ಧರ್ಮಗಳನ್ನು ಎತ್ತಿ ಕಟ್ಟುವ ಜನರ ಲಾಭಕೋರಕ ಮನಸ್ಥಿತಿಯನ್ನು ಮರೆಯಲಾಗದು ಎಂಬುದನ್ನು ಒಬ್ಬರು ಎತ್ತಿ ಹೇಳಿದರೆ, ನಾವು ನಮ್ಮವರನ್ನೇ ಪ್ರೀತಿಸಲಾಗದ ತಬ್ಬಲಿ ತನಕ್ಕೆ ನಮ್ಮನ್ನು ತಳ್ಳಿಕೊಳ್ಳುತ್ತಿದ್ದೇವೆ ಎಂದು  ಮತ್ತೊಬ್ಬರು ಹೇಳುತ್ತಿದ್ದರು.

‘ಗಾಂಧಿ ದೀನ ನಿರ್ಗತಿಕರ ಗುಡಿಸಲ ಮುಂದೆ ತಲೆಬಾಗಿ ನಿಂತರು, ಅವರದೇ ಉಡುಪುತೊಟ್ಟರು, ಅವರ ಭಾಷೆಯಲ್ಲಿಮಾತನಾಡಿದರು, ಅವರ ಗ್ರಂಥಗಳ ವೇದಿಕೆಯಲ್ಲಿ ಸತ್ಯದ ದೀಮಂತ ಜೀವಂತ ವ್ಯಕ್ತಿತ್ವವನ್ನು ಪ್ರತಿನಿಧಿಸಿದರು’ ಎಂದು ಹೇಳಿದ ರವೀಂದ್ರನಾಥ್ ಟಾಗೋರ್ ಅವರ ಮಾತನ್ನು ಎದೆಗೆ ಸುರಿದುಕೊಳ್ಳುತ್ತಲೇ ಆ ಸ್ಥಳದಲ್ಲಿ ತುಂಬಿಕೊಂಡೆವು. ಬೆಳಗೆದ್ದು ಗಾಂಧಿ ಕುಳಿತ ಸ್ಥಳದಲ್ಲಿ ವೃತ್ತಾಕಾರವಾಗಿ ಕುಳಿತೆವು. ದಡಿಯ ಮೇಲೆ ಮತ್ತದೆ ಗಾಂಧಿಯ ಆಲೋಚನೆ- ಸತ್ಯವೊಂದರಿಂದಲೇ ಅತ್ಯುತ್ತಮವಾಗಿ ಹೊರ ಹೊಮ್ಮಿದವರು ಗಾಂಧಿ. ಪರಿಣಾಮಕಾರಿಯಾದಂಹ ಅಹಿಂಸಾತ್ಮಕ ಗೆಲುವಿನ ಹೋರಾಟ; ಸ್ವಾತಂತ್ರ್ಯಕ್ಕಾಗಿ ಅಲ್ಲಿ ಸೇನೆ ಇರಲಿಲ್ಲ, ಬಲತ್ಕಾರವಿರಲಿಲ್ಲ, ಎಲ್ಲವೂ ಗಾಂಧಿಯ ವಿವೇಕದ ಬುದ್ಧಿಯ ಮುಂದೆ ನಮ್ರತೆಯಿಂದ ತಲೆಬಾಗಿಸಿದ್ದವು. ಗಾಂಧಿಯ ವಿಚಾರಗಳು ಸರಿ ಇವೆ; ಸರಿ ಇಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಯೋಚಿಸಬೇಕಾದದ್ದು ಪ್ರೀತಿಗೆ, ಭ್ರಾತೃತ್ವಕ್ಕೆ, ಕಾರುಣ್ಯದ ಕಠಿಣತೆಗೆ, ಕಠೋರ ಶಿಸ್ತಿಗೆ, ಆತ್ಮಶುದ್ಧಿ ಸದ್ಭಾವನೆಯ ಪ್ರಾರ್ಥನೆಗೆ ಇವುಗಳೆಲ್ಲವನ್ನೂ ಚಿಮ್ಮಿಸುತ್ತಲ್ಲೇ ಗಾಂಧಿ ನಡೆದ ದಾರಿಯಲ್ಲೇ ನಡೆಯೋಣ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

1 hour ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

1 hour ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

1 hour ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

1 hour ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

2 hours ago

ಗಾಂಧಿಯನ್ನು ಬದುಕಿಸಿ ಬೆಳಗಿಸಿದ ಆಡು ಪಾಡು

ಡಾ.ರಘುಪತಿ, ಚಿನಾಕಳ್ಳಿ ಅದು ೧೯೧೮ರ ಆಸುಪಾಸು. ಒಂದು ಕಡೆ ಖೇಡಾ ಸತ್ಯಾಗ್ರಹದ ಭರಾಟೆಯಲ್ಲಿ ದೇಶ ಮುಳುಗೇಳುತ್ತಿರುತ್ತದೆ.ಇನ್ನೊಂದೆಡೆ ರೌಲತ್ ಕಾಯ್ದೆಯ ಅಮಾನುಷ…

2 hours ago