Andolana originals

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ

ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು ಪ್ರಸಿದ್ಧರಾಗಿದ್ದಾರೆ. ಬಾಲ್ಯದಿಂದಲೇ ಇವರು ಸತ್ಯ, ಸರಳತೆ ಮತ್ತು ಪ್ರಾಮಾಣಿಕ ತತ್ವಗಳನ್ನು ಅಳವಡಿಸಿಕೊಂಡಿದ್ದರು. ಮುಂದೆ ಇಡೀ ದೇಶಕ್ಕೆ ಗಾಂಧಿಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿಕೊಟ್ಟರು.

ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ಎಂಬ ಎರಡು ಪ್ರಬಲ ಅಸ್ತ್ರಗಳ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಿದರು. ‘ದಂಡಿ ಯಾತ್ರೆ’, ‘ಅಸಹಕಾರ ಚಳವಳಿ’ ಮತ್ತು ‘ಕ್ವಿಟ್ ಇಂಡಿಯಾ’ ಚಳವಳಿಗಳಂತಹ ಹಲವು ಶಾಂತಿಯುತ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಸ್ಪೃಶ್ಯತೆ ನಿವಾರಣೆ ಹಾಗೂ ಧಾರ್ಮಿಕ ಸಾಮರಸ್ಯಕ್ಕಾಗಿ ಅವರು ಬಹುವಾಗಿ ಶ್ರಮಿಸಿದರು.

ದಲಿತರನ್ನು ‘ಹರಿಜನ’ರು(ದೇವರ ಮಕ್ಕಳು) ಎಂದು ಕರೆದು ಅವರ ಸಮಾನತೆಗಾಗಿ ಮಹಾತ್ಮ ಗಾಂಧಿಜಿ ಶ್ರಮಿಸಿದರು. ವಿದೇಶಿ ಬಟ್ಟೆಗಳನ್ನು ತ್ಯಜಿಸಿ ಪ್ರತಿಯೊಬ್ಬರೂ ಚರಕದ ಮೂಲಕ ನೂಲು ತೆಗೆದು ಖಾದಿ ಬಟ್ಟೆಧರಿಸಬೇಕೆಂದು ಗಾಂಧಿಜಿ ಕರೆ ನೀಡಿದರು. ಇದು ಭಾರತದ ಆರ್ಥಿಕ ಸ್ವಾವಲಂಬನೆಯ ಸಂಕೇತವಾಯಿತು. ಸ್ವಚ್ಛತೆಯೇ ದೈವತ್ವ ಎಂದು ಸಾರಿದ ಮಹಾತ್ಮ ಗಾಂಧಿಜಿ, ಹಿಂದೂ-ಮುಸ್ಲಿಂ ಬಾಂಧವ್ಯಕ್ಕಾಗಿ ನಿರಂತರವಾಗಿ ಶ್ರಮಿಸಿದರು. ಮಹಾತ್ಮ ಗಾಂಧಿಜಿ ಅವರ ಜೀವನದ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭವ್ಯ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ.

ಲಕ್ಷ್ಮೀಸನ್ನಿಧಿ ಆರ್., ೮ನೇ ತರಗತಿ, ನಟರಾಜ ಪಬ್ಲಿಕ್ ಸ್ಕೂಲ್, ಅಗ್ರಹಾರ, ಮೈಸೂರು

ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ ಜೀವಂತ ಚೇತನ ಗಾಂಧಿ: 

ಸಾಮಾನ್ಯವಾಗಿ ಇತಿಹಾಸದ ಪಠ್ಯಪುಸ್ತಕದಲ್ಲಿ ಮಹಾತ್ಮ ಗಾಂಧೀಜಿ ನಮಗೆ ‘ರಾಷ್ಟ್ರಪಿತ’, ‘ಮಹಾತ್ಮ’ ಅಥವಾ ಕರೆನ್ಸಿ ನೋಟಿನ ಮೇಲಿನ ಭಾವಚಿತ್ರವಾಗಿ ಮಾತ್ರ ಪರಿಚಯ. ಆದರೆ, ನನ್ನ ಕಣ್ಣಿನಲ್ಲಿ ಗಾಂಧೀಜಿ ಕೇವಲ ಇತಿಹಾಸದ ಕಲ್ಲಿನ ಪ್ರತಿಮೆಯಲ್ಲ. ಅವರು ಮನುಷ್ಯನ ಸಹಜ ಮಿತಿಗಳು ಮತ್ತು ದೌರ್ಬಲ್ಯಗಳ ಮಧ್ಯೆಯೇ ಸತ್ಯ ಮತ್ತು ಆತ್ಮಬಲದಿಂದ ಅಸಾಧ್ಯವಾದುದನ್ನು ಸಾಧ್ಯವನ್ನಾಗಿಸಿ ತೋರಿಸಿದ ಒಬ್ಬ ಜಾಗೃತ ಜೀವನ ಚೇತನ. ಇಂದಿನ ವೇಗದ ಬದುಕಿನಲ್ಲಿ ನಮ್ಮ ದಿನಗಳು ಆರಂಭವಾಗುವುದೇ ಸ್ಮಾರ್ಟ್ ಫೋನ್‌ಗಳ ನೋಟಿಫಿಕೇಷನ್‌ಗಳಿಂದ, ಇನ್‌ಸ್ಟಾಗ್ರಾಂ ರೀಲ್ಗಳು, ಆನ್ಲೈನ್ ಶಾಪಿಂಗ್, ಬ್ರಾಂಡೆಡ್ ಬಟ್ಟೆಗಳು… ಇವುಗಳ ಹಿಂದೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಓಡುತ್ತಿದ್ದೇವೆ. ಆಧುನಿಕ ಕಾಲಘಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ನಮಗೆ ನೂರು ವರ್ಷಗಳ ಹಿಂದೆ ಬದುಕಿದ್ದ ಗಾಂಧಿ ಹೇಗೆ ಪ್ರಸ್ತುತರಾಗುತ್ತಾರೆ? ನಮ್ಮ ಪಠ್ಯಪುಸ್ತಕದಲ್ಲಿ ಗಾಂಧಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು ಹಾಗೂ ರಾಷ್ಟ್ರಪಿತ ಮಹಾತ್ಮ ಮತ್ತು ನೋಟಿನ ಮೇಲಿನ ನಗುಮುಖದ ಚಿತ್ರವಾಗಿ ಮಾತ್ರ ಪರಿಚಯ. ಆದರೆ, ನನ್ನ ಕಣ್ಣಲ್ಲಿ ಗಾಂಧಿ ಗತಕಾಲದ ನಾಯಕರಲ್ಲಿ ಅಗ್ರಗಣ್ಯರು. ಇಂದಿನ ಯುವಪೀಳಿಗೆ ಎದುರಿಸುತ್ತಿರುವ ಸಾಮಾಜಿಕ ಒತ್ತಡ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಇವೆಲ್ಲಕ್ಕೂ ಸ್ಪಷ್ಟ ಪರಿಹಾರ ನೀಡಬಲ್ಲ ಆಧುನಿಕ ಮಾರ್ಗದರ್ಶಿ. ಗಾಂಧೀಜಿ ನನ್ನ ಕಣ್ಣಲ್ಲಿ ಅಕ್ಟೋಬರ್ ೨ರಂದು ಆಚರಿಸುವ ಜಯಂತಿಯಲ್ಲ, ನಮ್ಮ ಬದುಕಿನಲ್ಲಿ ದಿನ ನಿತ್ಯ ಅಳವಡಿಸಿಕೊಳ್ಳಬೇಕಾದ ಜೀವನ ಮಾರ್ಗ. ಮಹಾತ್ಮ ಗಾಂಧೀಜಿ ಅವರ ಸರಳತೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ.

ಪ್ರೇಕ್ಷ ಎಂ.ಡಿ., ೯ನೇ ತರಗತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅರಕೆರೆ(ಭೇರ್ಯ), ಸಾಲಿಗ್ರಾಮ ತಾಲ್ಲೂಕು, ಮೈಸೂರು ಜಿಲ್ಲೆ

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

1 hour ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

1 hour ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

1 hour ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

1 hour ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

2 hours ago

ಗಾಂಧಿಯನ್ನು ಬದುಕಿಸಿ ಬೆಳಗಿಸಿದ ಆಡು ಪಾಡು

ಡಾ.ರಘುಪತಿ, ಚಿನಾಕಳ್ಳಿ ಅದು ೧೯೧೮ರ ಆಸುಪಾಸು. ಒಂದು ಕಡೆ ಖೇಡಾ ಸತ್ಯಾಗ್ರಹದ ಭರಾಟೆಯಲ್ಲಿ ದೇಶ ಮುಳುಗೇಳುತ್ತಿರುತ್ತದೆ.ಇನ್ನೊಂದೆಡೆ ರೌಲತ್ ಕಾಯ್ದೆಯ ಅಮಾನುಷ…

2 hours ago