ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ ಅಥವಾ ಕಚೇರಿಯ ವಿದ್ಯುತ್ ಬಿಲ್‌ಗೆ ಸೇರಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನೀಡಿದ ಸಲಹೆ ಅತ್ಯಂತ ಸಕಾಲಿಕ ಹಾಗೂ ಪ್ರಶಂಸನೀಯ. ಸರ್ಕಾರಕ್ಕೆ ಪ್ರಸ್ತುತ ಜನರಿಂದ ಬರಬೇಕಾದ ಲಕ್ಷಾಂತರ ರೂಪಾಯಿ ಟ್ರಾಫಿಕ್ ದಂಡ ಬಾಕಿ ಉಳಿದುಕೊಂಡಿದೆ. ಅದೇ ರೀತಿ ಜನ ದಂಡ ಪಾವತಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವಿದ್ಯುತ್ ಬಿಲ್‌ಗೆ ಇದನ್ನು ಜೋಡಿಸುವುದರಿಂದ ಪ್ರತಿಯೊಬ್ಬ ವಾಹನ ಸವಾರನೂ ಕಡ್ಡಾಯವಾಗಿ ಮತ್ತು ನಿಗದಿತ ಸಮಯಕ್ಕೆ ದಂಡ ಕಟ್ಟಲೇಬೇಕಾದ ವಾತಾವರಣ ನಿರ್ಮಾಣವಾಗುತ್ತದೆ.
‘ದಂಡ ಕಟ್ಟಿದರಾಯಿತು’ ಎಂಬ ನಿರ್ಲಕ್ಷ್ಯ ಧೋರಣೆ ಕೊನೆಯಾಗುತ್ತದೆ. ಬಿಲ್ ಹೆಚ್ಚಾಗುತ್ತದೆ ಎಂಬ ಭಯದಿಂದ ಜನರು ಹೆಲ್ಮೆಟ್ ಧರಿಸುವುದು, ಸಿಗ್ನಲ್ ಜಂಪ್ ಮಾಡದಿರುವುದು ಹಾಗೂ ವೇಗದ ಮಿತಿ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದರಿಂದ ರಸ್ತೆ ಅಪಘಾತಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ನಿರೀಕ್ಷಿಸಬಹುದು. ದಂಡ ವಸೂಲಿಗಾಗಿ ಸಂಚಾರ ಪೊಲೀಸರು ರಸ್ತೆಯಲ್ಲಿ ನಿಂತು ವಾಹನ ತಡೆಯುವ, ಪಟ್ಟು ಹಿಡಿಯುವ ಅಥವಾ ಕೋರ್ಟ್ ನೋಟಿಸ್ ಕಳುಹಿಸುವ ಅಗತ್ಯವಿರುವುದಿಲ್ಲ. ಇದರಿಂದ ಪೊಲೀಸ್ ಇಲಾಖೆಯ ಅಪಾರ ಸಮಯ ಮತ್ತು ಶ್ರಮ ಉಳಿದು, ಅವರು ನಗರದ ಸಂಚಾರ ನಿರ್ವಹಣೆ ಮತ್ತು ಭದ್ರತೆಯತ್ತ ಹೆಚ್ಚಿನ ಗಮನ ಹರಿಸಬಹುದು.
ಸರ್ಕಾರಕ್ಕೆ ಬರಬೇಕಾದ ಬಾಕಿ ದಂಡದ ಹಣ ಸರಾಗವಾಗಿ ಸರ್ಕಾರಿ ಖಜನೆ ತಲುಪುತ್ತದೆ. ಸುಪ್ರೀಂ ಕೋರ್ಟ್‌ನ ಈ ಪ್ರಸ್ತಾಪವನ್ನು ಸರ್ಕಾರವು ಆಧಾರ್ ಮತ್ತು ವಾಹನ ನೋಂದಣಿ (ಆರ್‌ಸಿ ) ಡೇಟಾಬೇಸ್ ಬಳಸಿ ತಾಂತ್ರಿಕವಾಗಿ ಸೂಕ್ತ ರೀತಿಯಲ್ಲಿ ಜರಿಗೆ ತಂದರೆ, ರಸ್ತೆ ಸುರಕ್ಷತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಗುತ್ತದೆ.
– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…
ಡಾ.ರಘುಪತಿ, ಚಿನಾಕಳ್ಳಿ ಅದು ೧೯೧೮ರ ಆಸುಪಾಸು. ಒಂದು ಕಡೆ ಖೇಡಾ ಸತ್ಯಾಗ್ರಹದ ಭರಾಟೆಯಲ್ಲಿ ದೇಶ ಮುಳುಗೇಳುತ್ತಿರುತ್ತದೆ.ಇನ್ನೊಂದೆಡೆ ರೌಲತ್ ಕಾಯ್ದೆಯ ಅಮಾನುಷ…