ದೇಶ- ವಿದೇಶ

ಸಾಹಿತಿ ವಾಸುದೇವನ್‌ ನಾಯರ್‌ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸಂತಾಪ

ಹೊಸದಿಲ್ಲಿ: ಮಲಯಾಳದ ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂ.ಟಿ ವಾಸದೇವನ್‌ ನಾಯರ್‌ (91) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.

ಇವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯ್‌ ವಿಜಯನ್‌ ಸೇರಿದಂತೆ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮಲಯಾಳಂನ ಹೆಸರಾಂತ ಲೇಖಕರಾದ ಎಂ.ಟಿ ವಾಸುದೇವನ್‌ ನಾಯರ್‌ ಅವರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಬರಹಗಳಲ್ಲಿ ಗ್ರಾಮೀಣ ಭಾರತ ಜೀವಂತವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಎಂ.ಟಿ ವಾಸುದೇವನ್‌ ನಾಯರ್‌ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಮಲಯಾಳಂ ಸಾಹಿತ್ಯ ಮತ್ತು ಚಿತ್ರರಂಗದ ಗೌರವಾನ್ವಿತ ವ್ಯಕ್ತಿ ಇವರು. ಅನೇಕರಿಗೆ ಸ್ಫೂರ್ತಿ ನೀಡುವ ಇವರು ಅನ್ವೇಷಣೆಗಳ ಮೂಲಕ ಹಿಂದಿನ ಪೀಳಿಗೆಯನ್ನು ರೂಪಿಸಿದ್ದಾರೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಪ್ರಧಾನಿ ಮೋದಿ ಸಾಮಾಜಿಕ್‌ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಎಂ.ಟಿ ವಾಸುದೇವನ್‌ ನಾಯರ್‌ ಅವರು ತಮ್ಮ ಕೃತಿಗಳ ಮೂಲಕ ಕೇರಳದ ಬದುಕಿನ ಸೌಂದರ್ಯ ಮತ್ತು ಸಂಕೀರ್ಣತೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಪೊಸ್ಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಎರಡು ಗಂಟೆ ಹೆಣ್ಣಾದಾಗಲೇ ಹೀಗೆ! ಪೂರ್ತಿ ಹೆಣ್ಣು ಜನ್ಮದ ಸಂಕಷ್ಟ ಹೇಗಿರಬಹುದು?

ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…

38 mins ago

ಸೈಕಲ್ ನಂಜುಂಡಸ್ವಾಮಿಯ ಪಂಕ್ಚರ್ ಶಾಪ್ ಖಾಲಿ ಖಾಲಿ

ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…

42 mins ago

ಶಾಂತಿದೂತನ ನಾಡಿನಲ್ಲಿ ದ್ವೇಷದ ಕೆನ್ನಾಲಿಗೆ

ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…

50 mins ago

ಇಂದು ಮೈಸೂರಿನಲ್ಲಿ ಜಾಗತಿಕ ಸೈಕಲ್ ಸವಾರಿ

ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…

56 mins ago

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

1 hour ago