ಪಾತು
ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ, ದೆಹಲಿಯ ಕಂಟೆಂಟ್ ಕ್ರಿಯೇಟರ್ ಅಮನ್ ಜೈನ್ ಒಂದು ಪ್ರಯೋಗಕ್ಕೆ ಮುಂದಾದರು. ಮಹಿಳೆಯೊಬ್ಬರು ರಾತ್ರಿ, ಒಬ್ಬರೇ ನಗರದಲ್ಲಿ ಸಂಚರಿಸುವಾಗ ಎದುರಿಸುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅವರ ಉದ್ದೇಶವಾಗಿತ್ತು.
ಗುಲಾಬಿ ಬಣ್ಣದ ಉಡುಪು, ಮೇಕಪ್ ಹಾಗೂ ಮುಖಕ್ಕೆ ದುಪಟ್ಟಾ ಸುತ್ತಿಕೊಂಡು ಅಮನ್ ಸ್ಕೂಟಿಯಲ್ಲಿ ಹೊರಟರು. ಹಾಗೆ ಹೋಗುವಾಗ ತಮ್ಮ ಅನುಭವವನ್ನು ವಿಡಿಯೋದಲ್ಲಿ ದಾಖಲಿಸುತ್ತಾ ಸಾಗಿದರು. ಆದರೆ ಪ್ರಯೋಗ ಆರಂಭವಾದ ಕೆಲವೇ ಸಮಯದಲ್ಲಿ ಅವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗತೊಡಗಿತು.
ಪೆಟ್ರೋಲ್ ಹಾಕಿಸಲೆಂದು ಬಂಕಿಗೆ ಹೋದಾಗಲೇ ಕೆಲವು ಕಣ್ಣುಗಳು ಅವರನ್ನು ಕೆಕ್ಕರಿಸಿ ನೋಡತೊಡಗಿದವು. ರಸ್ತೆಗೆ ಬಂದ ಬಳಿಕ ಒಬ್ಬ ಸೈಕಲ್ ಸವಾರ ಅವರನ್ನು ಹಿಂಬಾಲಿಸಲು ಆರಂಭಿಸಿದ. ಇಬ್ಬರು ಯುವಕರು ಬೈಕ್ ನಲ್ಲಿ ಮುಂದೆ ಹೋಗಿ ನಿಂತು, ಅವರು ಬಂದಾಗ ಮತ್ತೆ ಹಿಂಬಾಲಿಸಿದರು. ಎರಡು ಆಟೋರಿಕ್ಷಾಗಳೂ ಅವರ ಹಿಂದೆ ಬಂದವು. ನಂತರ ಎರಡು ಕಾರುಗಳು ಕೂಡ ಸಾಕಷ್ಟು ದೂರ ಅವರನ್ನು ಹಿಂಬಾಲಿಸಿದವು. ಕೊನೆಗೂ ಕೆಲವರು ಅವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿದ್ದು ವಿಡಿಯೋ ಚಿತ್ರೀಕರಣ ಆಗುತ್ತಿರುವುದನ್ನು ಕಂಡು.
ಬೆನ್ನು ಹತ್ತಿ ಬರುವ ಕಣ್ಣುಗಳು ಅಮನ್ ಅವರನ್ನು ನಿರಂತರ ಬೆದರಿಸುತ್ತಿದ್ದರೆ, ಆ ಕಣ್ಣುಗಳಲ್ಲಿದ್ದ ಪೈಶಾಚಿಕತೆ ಅವರೊಳಗೆ ಹೇವರಿಕೆ ಹುಟ್ಟಿಸುತ್ತಿತ್ತು. ರಾಷ್ಟ್ರ ರಾಜಧಾನಿಯ ಪುರುಷರ ದಾಷ್ಟ ತೆ ಮತ್ತು ನಿರ್ದಯತೆ ಆತಂಕ ಹುಟ್ಟಿಸುತ್ತಿತ್ತು. ಕೇವಲ ಎರಡು ಗಂಟೆಗಳ ಕಾಲ ಹೆಣ್ಣಾಗಲು, ಹೆಣ್ಣಿನಂತೆ ಇರಲು ನಿರ್ಧರಿಸಿದಾಗ ಹೀಗಾಗಬೇಕಾದರೆ ಈ ನಗರದಲ್ಲಿ ಬದುಕುತ್ತಿರುವ, ಕೆಲಸಕ್ಕೆಂದೋ, ಇನ್ನಾವುದೋ ಕಾರಣಕ್ಕೆಂದೋ ಹೊರಹೋಗುವ ಅನಿವಾರ್ಯತೆ ಇರುವ ಹೆಣ್ಣುಮಕ್ಕಳು ಪ್ರತಿದಿನ ಅನುಭವಿಸಬೇಕಿರುವ ಈ ಆತಂಕ ವನ್ನೂ, ಅನಿಶ್ಚಿತತೆಯನ್ನೂ ಗ್ರಹಿಸಿ ಸ್ವತಃ ಅವರೇ ಭಯಬಿದ್ದರು. ಸುಮಾರು ಎರಡು ಗಂಟೆಗಳ ಬಳಿಕ ಅವರು ಈ ಪ್ರಯೋಗವನ್ನು ನಿಲ್ಲಿಸಿದರು. ಈ ಅನುಭವ ತಮ್ಮ ನಿರೀಕ್ಷೆಗಿಂತ ಹೆಚ್ಚು ಅಹಿತಕರ ಮತ್ತು ಭಯಾನಕವಾಗಿತ್ತು ಎಂದು ಆನಂತರ ಅವರು ಹೇಳಿದರು.
ಈ ವಿಡೀಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಹಿಳೆಯರು ತಮ್ಮ ಅನು ಭವಗಳನ್ನು ಹಂಚಿಕೊಂಡರು. ಕೆಲವರು, ಇದು ಕೇವಲ ರಾತ್ರಿ ಎದುರಾಗುವ ಸಮಸ್ಯೆಯಲ್ಲ; ಹಗಲಿನಲ್ಲಿಯೂ ಇಂತಹ ಅನುಭವಗಳು ಎದುರಾಗುತ್ತವೆ ಎಂಬ ಭಯಾನಕ ಸತ್ಯವನ್ನು ಮುಂದಿಟ್ಟರು.
ಇದರ ಜೊತೆಗೆ, ಈ ಘಟನೆ ಸಾಮಾಜಿಕ ಮಾಧ್ಯಮದ ಮತ್ತೊಂದು ಸಾಧ್ಯತೆಯ ಬಗ್ಗೆಯೂ ಬೆಳಕು ಚೆಲ್ಲಿತು. ‘ವ್ಯೂಸ್’ ಮತ್ತು ‘ಲೈಕ್’ಗಳನ್ನು ಮೀರಿ, ಸಾಮಾಜಿಕ ಮಾಧ್ಯಮವನ್ನು ಸಾಮಾಜಿಕ ಅರಿವು, ಹೊಣೆಗಾರಿಕೆ ಮತ್ತು ಬದಲಾವಣೆಯ ಸಾಧನವಾಗಿಯೂ ಬಳಸಬಹುದು ಮತ್ತು ‘ವೈರಲ್’ ಆಗಬಹುದು ಎಂಬುದನ್ನು ತೋರಿಸಿಕೊಟ್ಟಿತು.
” ದೆಹಲಿಯ ಕಂಟೆಂಟ್ ಕ್ರಿಯೇಟರ್ ಅಮನ್ ಜೈನ್ ಕಂಡುಕೊಂಡ ಭಯಾನಕ ಸತ್ಯ”
ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…
ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…
ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…
ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…