Categories: ಮನರಂಜನೆ

ಉಪೇಂದ್ರಗೆ ನಾಯಕಿಯಾದ ಅಂಕಿತಾ ಅಮರ್‍; ‘ಭಾರ್ಗವ’ ಚಿತ್ರಕ್ಕೆ ನಾಯಕಿ

ನಟಿ ಅಂಕಿತಾ ಅಮರ್‍, ‘ಅಬ ಜಬ ದಬ’ ಮತ್ತು ‘ಜಸ್ಟ್ ಮ್ಯಾರೀಡ್‍’ ಚಿತ್ರಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ಅವರು ‘ಭಾರ್ಗವ’ ಚಿತ್ರದಲ್ಲಿ ಉಪೇಂದ್ರ ಎದುರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಳೆದ ವರ್ಷ ಬಿಡುಗಡೆಯಾದ ‘ಇಬ್ಬನಿ ತಬ್ಬಿದ ಇಳೆಯಲಿ’ ಮತ್ತು ‘ಮೈ ಹೀರೋ’ ಚಿತ್ರಗಳಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆದವರು ಕಿರುತೆರೆ ನಟಿ ಅಂಕಿತಾ ಅಮರ್‍. ಅದರಲ್ಲಿ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿನ ಅವರ ನಟನೆ ನೋಡಿ, ಅಂಕಿತಾಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಗಬೇಕೆಂದು ಸ್ವತಃ ರಕ್ಷಿತ್‍ ಶೆಟ್ಟಿ ಹೇಳಿದ್ದರು. ಆದರೆ, ಆ ನಂತರ ಯಾವೊಂದು ಹೊಸ ಚಿತ್ರವನ್ನು ಅಂಕಿತಾ ಒಪ್ಪಿದ್ದ ಸುದ್ದಿ ಬಂದಿರಲಿಲ್ಲ. ಇದೀಗ ಭಾರ್ಗವ ಚಿತ್ರಕ್ಕೆ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಉಪೇಂದ್ರ ಅಭಿನಯದ ಹೊಸ ಚಿತ್ರವು ಯುಗಾದಿ ಹಬ್ಬದಂದು ಘೋಷಣೆಯಾಗಿತ್ತು. ಆ ನಂತರ ಅಕ್ಷಯ ತೃತೀಯ ದಿನದಂದು ಚಿತ್ರಕ್ಕೆ ‘ಭಾರ್ಗವ’ ಎಂಬ ಹೆಸರನ್ನು ಇಡಲಾಗಿತ್ತು. A Violent Family Man ಎಂಬ ಅಡಿಬರಹವಿರುವ ಈ ಚಿತ್ರವನ್ನು ರಾಂಬಾಬು ಪ್ರೊಡಕ್ಷನ್ಸ್ ಬ್ಯಾನರ್‍ ಅಡಿ ‘ಭಾರ್ಗವ’ ಚಿತ್ರವನ್ನು ‘ಸೂರಪ್ಪ’ ಬಾಬು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ‍ಜನ್ಯ ಸಂಗೀತ, ರಾಜರತ್ನಂ ಅವರ ಛಾಯಾಗ್ರಹಣವಿದೆ.

2019ರಲ್ಲಿ ಬಿಡುಗಡೆಯಾದ ಗಣೇಶ್‍ ಅಭಿನಯದ ‘ಗಿಮಿಕ್‍’ ಚಿತ್ರದ ನಂತರ ನಾಗಣ್ಣ ಯಾವೊಂದು ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಆರು ವರ್ಷಗಳ ಗ್ಯಾಪ್‍ನ ನಂತರ ಅವರು ‘ಭಾರ್ಗವ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಅಭಿನಯದಲ್ಲಿ ಅವರು ನಿರ್ದೇಶಿಸುತ್ತಿರುವ ಐದನೇ ಚಿತ್ರ ಇದು. ಇದಕ್ಕೂ ಮೊದಲು ‘ಗೌರಮ್ಮ’, ‘ಕುಟುಂಬ’, ‘ಗೋಕರ್ಣ’ ಮತ್ತು ‘ದುಬೈ ಬಾಬು’ ಚಿತ್ರಗಳಲ್ಲಿ ಉಪೇಂದ್ರ ಅವರನ್ನುಉ ನಾಗಣ್ಣ ನಿರ್ದೇಶನ ಮಾಡಿದ್ದರು.

ಆಂದೋಲನ ಡೆಸ್ಕ್

Recent Posts

ಎರಡು ಗಂಟೆ ಹೆಣ್ಣಾದಾಗಲೇ ಹೀಗೆ! ಪೂರ್ತಿ ಹೆಣ್ಣು ಜನ್ಮದ ಸಂಕಷ್ಟ ಹೇಗಿರಬಹುದು?

ಪಾತು ದೆಹಲಿ ನಗರ, ಹಗಲಿನ ಬೆಳಕು ನಿಧಾನಕ್ಕೆ ಕರಗಿ ಕತ್ತಲು ಇಷ್ಟಿಷ್ಟಾಗಿ ನಗರವನ್ನು ಆವರಿಸಿಕೊಳ್ಳುತ್ತಿತ್ತು, ರಸ್ತೆಗಳು ನಿರ್ಜನವಾಗುತ್ತಿದ್ದವು. ಇದೇ ಹೊತ್ತಲ್ಲಿ,…

37 mins ago

ಸೈಕಲ್ ನಂಜುಂಡಸ್ವಾಮಿಯ ಪಂಕ್ಚರ್ ಶಾಪ್ ಖಾಲಿ ಖಾಲಿ

ಅಜಯ್ ಕುಮಾರ್ ಎಂ.ಗುಂಬಳ್ಳಿ ಈಗ ಸೈಕಲ್‌ಗಳು ಅತಿವಿರಳ. ಊರಿನಲ್ಲಿ ನಾಲ್ಕೈದು ಮಂದಿ ಹಿರಿಯರು ಇನ್ನೂ ಗದ್ದೆಗೆ, ಕೆಲಸಕ್ಕೆ ಹೋಗಲು ಸೈಕಲ್…

41 mins ago

ಶಾಂತಿದೂತನ ನಾಡಿನಲ್ಲಿ ದ್ವೇಷದ ಕೆನ್ನಾಲಿಗೆ

ಫಾತಿಮಾ ರಲಿಯಾ ಕಳೆದ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ವಾರ್ವಿಕ್ ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಆಫ್ರಿಕನ್…

49 mins ago

ಇಂದು ಮೈಸೂರಿನಲ್ಲಿ ಜಾಗತಿಕ ಸೈಕಲ್ ಸವಾರಿ

ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…

56 mins ago

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

1 hour ago