ತಂಬಾಕು ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ರೈತರಿಗೆ ಅಧಿಕಾರಿಗಳ ಸಲಹೆ
ಎಂ.ಯೋಗಾನಂದ
ಹುಣಸೂರು: ಈ ವರ್ಷ ತಂಬಾಕು ಬೆಳೆದ ರೈತನಿಗೆ ಸಮಾಧಾನ ತಂದಿದ್ದು, ಬೆಳೆದ ತಂಬಾಕಿಗೆ ಹಾಗೂ ತಂಬಾಕು ಹದಗೊಳಿಸುವಾಗ ಉದುರುವ ಹುಡಿಗೂ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದ್ದು, ತಂಬಾಕು ಇರುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಈಚಿನ ವರ್ಷಗಳಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆಯದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಈ ವರ್ಷ ನಿರೀಕ್ಷೆಗಿಂತ ಹೆಚ್ಚಾಗಿ ಮಾರಾಟವಾಗುತ್ತಿರುವ ತಂಬಾಕಿನ ಬೆಲೆ ಒಂದೆಡೆಯಾದರೆ ತಂಬಾಕು ಹುಡಿಗೂ ಬೇಡಿಕೆ ಹೆಚ್ಚಾಗಿದೆ.
ಕೆಲವು ವರ್ಷಗಳಿಂದ ಹುಡಿಗೆ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡದೆ ರೈತರು ಮನೆಯ ಹತ್ತಿರ ಸಣ್ಣ ವ್ಯಾಪಾರಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಹುಡಿಯನ್ನು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಲು ಅವಕಾಶ ಕೊಡಿ ಎಂಬ ರೈತರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ.
ಈಗ ಉತ್ತಮ ದರ್ಜೆಯ ತಂಬಾಕಿಗೆ ಸರಾಸರಿ ೨೫೦ ರೂ.ತನಕವೂ ದೊರೆಯುತ್ತಿದೆ. ರೈತರು ನೀರು ಹಾಕದೆ ಹಾಗೂ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬಂದರೆ ಇದೇ ಬೆಲೆ ಕೊಡಿಸಲು ಸಹಕಾರಿಯಾಗುತ್ತದೆ ಎಂದು ತಂಬಾಕು ಮಂಡಳಿಯ ಪ್ಲಾಟ್ ಫಾರಂ ನಂ. ೨ರ ಹರಾಜು ಅಧೀಕ್ಷಕ ಧನ್‌ರಾಜ್ ತಿಳಿಸಿದರು.
ತಂಬಾಕು ಹುಡಿಗೆ ಉತ್ತಮ ಬೇಡಿಕೆ ಇರುವುದರಿಂದ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ರೈತರು ಮುಂದಿನ ದಿನಗಳಲ್ಲಿ ಅನ್ಯ ಪದಾರ್ಥಗಳನ್ನು ಸೇರಿಸದೆ ಚೆನ್ನಾಗಿ ಬೇಲ್ ಮಾಡಿಕೊಂಡು ಬರಬೇಕು. ರೈತರು ಹೊರಗಡೆ ಹುಡಿಯನ್ನು ಮಾರಾಟ ಮಾಡಬಾರದು ಎಂದು ಆದಿನಾರಾಯಣ ಎಂಟರ್‌ಪ್ರೈಸಸ್ ಕಂಪೆನಿ ಅಧಿಕಾರಿ ಕೂಸಪ್ಪ ಸಲಹೆ ನೀಡಿದರು.
ಹಿಂದೆ ಹುಡಿಯನ್ನು ಕೆ.ಜಿ.ಗೆ ೧೫-೨೦ ರೂ. ಗಳಿಗೆ ಮನೆಯ ಹತ್ತಿರ ಮಾರಾಟ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ವರ್ಷ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಉತ್ತಮ ಬೆಲೆ ಸಿಕ್ಕಿದೆ. ೧೩೦-೧೪೦ ರೂ.ತನಕ ದೊರೆಯುತ್ತಿದೆ. ಇದರಿಂದ ಖುಷಿಯಾಗುತ್ತಿದೆ. ಇದೇ ಬೆಲೆಯನ್ನು ಮುಂದೆುಯೂ ಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ.
-ತಾಜು, ತಂಬಾಕು ಬೆಳೆಗಾರ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…