ಜಿಲ್ಲೆಗಳು

ಶಾಲೆಯ ಮೇಲ್ಚಾವಣಿ ದುರಸ್ತಿ : ಶಾಲೆಯ ಒಳಗೆ ಬೀಳುತ್ತಿರುವ ಮಳೆಯ ನೀರು

ಹನೂರು: ಕಳೆದ 2 ದಿನಗಳಿಂದ ಜಿಟಿಜಿಟಿ ಮಳೆ ಬೀಳುತ್ತಿರುವ ಹಿನ್ನೆಲೆ ಪಳನಿಮೇಡು ಶಾಲೆಯ ಮೇಲ್ಚಾವಣಿ ದುರಸ್ತಿ ಗೊಂಡಿರುವುದರಿಂದ ಮಳೆಯ ನೀರು ಶಾಲೆಯ ಒಳಗೆ ಬೀಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ತೀವ್ರ ತೊಂದರೆಯಾಗಿದೆ.

ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಳನಿಮೇಡು ಗ್ರಾಮದಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ 130 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 130 ವಿದ್ಯಾರ್ಥಿಗಳಿಗೆ ಕೇವಲ 5 ಕೊಠಡಿ ಗಳಿದ್ದು ಇದರಲ್ಲಿ 2 ಮಂಗಳೂರು ಹಂಚಿನ ಕಟ್ಟಡಗಳು ತೀವ್ರ ದುರಸ್ತಿಗೊಂಡಿದೆ. ಇದಲ್ಲದೆ ಕೋತಿಗಳ ಹಾವಳಿ ಹೆಚ್ಚಿರುವುದರಿಂದ ಮೇಲ್ಚಾವಣಿ ದುರಸ್ತಿಗೊಂಡಿದೆ . ಇನ್ನೂ ಇರುವ 3 ಕೊಠಡಿಗಳು ಆರ್ ಸಿಸಿ ಕಟ್ಟಡ ಗಳಾಗಿದ್ದರೂ ಸಹ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಗೋಡೆಗಳು ಶಿಥಿಲ ಗೊಂಡಿದೆ.ಇದರಿಂದ ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ : ಪಳನಿಮೇಡು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ದುರಸ್ತಿಗೊಂಡಿರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದರು ಸಹ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಯಾವುದಾದರು ಅವಘಡಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ? ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪೋಷಕರು ಎಚ್ಚರಿಕೆ ನೀಡಿದ್ದಾರೆ.

ಶಾಲೆಯ ಮೇಲ್ಚಾವಣಿ ದುರಸ್ತಿಗೊಂಡಿರುವ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದ್ದು, ಮೇಲ್ಚಾವಣಿ ದುರಸ್ತಿಗೆ ಅನುದಾನ ನೀಡುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ.- ಶಿವರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹನೂರು ಶೈಕ್ಷಣಿಕ ವಲಯ.

andolana

Recent Posts

ಓದುಗರ ಪತ್ರ: ಕೊಲ್ಲಿ ರಾಷ್ಟ್ರಗಳಲ್ಲಿ ಮುಂದುವರಿದ ಆತಂಕ

ಮಧ್ಯ ಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದಿಂದ ನಡೆಯುತ್ತಿರುವ ದಾಳಿ ಹಾಗೂ ಯುಎಇ, ಬಹರೇನ್, ಕುವೈತ್ ಮೊದಲಾದ ರಾಷ್ಟ್ರಗಳಲ್ಲಿರುವ…

26 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಸಫುರಾ ಖಾನ್ ಎಂಬ ಆಟೋ ಓಡಿಸುವ ಕನಸುಗಾರ್ತಿ

೩೦ ವರ್ಷ ಪ್ರಾಯದ ಸಫುರಾ ಖಾನ್‌ರ ತಂದೆ ತಾಯಿ ಚೆನ್ನೆ ಯಿಂದ ಕರ್ನಾಟಕಕ್ಕೆ ವಲಸೆ ಬಂದಾಗ ಆಕೆ ಇನ್ನೂ ಮಗುವಾಗಿದ್ದರು.…

29 mins ago

ರಾಷ್ಟ್ರಿಯ ಹೆದ್ದಾರಿ ಅಗಲೀಕರಣ ವಿಳಂಬ: ಆರೋಪ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ನಂಜನಗೂಡು ತನಕ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಬದಿಗಳನ್ನು ಅಗೆದು…

34 mins ago

ಮೂಗನಕೊಪ್ಪಲಿನಲ್ಲಿ ಮಾದರಿ ಚಾಕಿ ಸಾಕಾಣಿಕಾ ಕೇಂದ್ರ

ಮಾಮರಶಿ ರೇಷ್ಮೆ ಕೃಷಿಯಿಂದಲೇ ಉದ್ಯಮ ಕಟ್ಟಿದ ರೇಷ್ಮೆ ತ್ಯಾಗರಾಜು ೨೦೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ರೈತನ ಮಗ ಮಳವಳ್ಳಿ:…

38 mins ago

ಆದಾಯದ ಹಳಿಗೆ ಮರಳಿದ ಮೃಗಾಲಯ

ಕೆ.ಬಿ.ರಮೇಶನಾಯಕ ಮೈಸೂರು: ದಕ್ಷಿಣ ಭಾರತದಲ್ಲೇ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಶ್ರೀ ಚಾಮರಾಜೇಂದ್ರ ಮೃಗಾಲಯವು ಕೋವಿಡ್ ಸಮಯದಲ್ಲಿ ಆದಾಯ ಕುಸಿತದಿಂದ ಕಂಗೆಟ್ಟರೂ…

41 mins ago

ಲೆಬನಾನಿನ ನಾಶಕ್ಕೆ ಕಾರಣವಾಗುತ್ತಿರುವ ಹೆಜ್ಬುಲ್ಲಾ ಎಂಬ ದೇವರ ಪಕ್ಷ!

ಶೇಷಾದ್ರಿ ಗಂಜೂರು ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ನಾಲ್ಕನೇ ದಿನ ಪೂರ್ಣಗೊಳಿಸಿದೆ. ಯುದ್ಧದ ಬೀಸಿಗೆ ಸಿಲುಕಿ ಮುಖ್ಯವಾಗಿ ೧೨…

45 mins ago