ಮಂಡ್ಯ

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಇಂದು ನಾಗಮಂಗಲದ ಜನ ಅಭೂತಪೂರ್ವ ಸ್ವಾಗತ ಕೋರಿದರು.

ನೆಲ್ಲಿಗೆರೆ ಟೋಲ್‌ನಿಂದ ಸಾವಿರಾರು ಕಾರ್ಯಕರ್ತರು ಬೈಕ್  ರ‍್ಯಾಲಿ ನಡೆಸಿದರು. ಕ್ರೇನ್ ಮೂಲಕ ಸಚಿವರಿಗೆ ಮೋಸಂಬಿ, ಸೇಬು, ಮುಸುಕಿನ ಜೋಳ ಮತ್ತು ಬೆಲ್ಲದ ಹಾರ ಹಾಕಲಾಯಿತು. 4 ಕಿ.ಮೀ. ಉದ್ದದ ಬೈಕ್ ಮೆರವಣಿಗೆ, ಪೂಜಾ ಕುಣಿತ ತಂಡಗಳೊಂದಿಗೆ ಸಾಗಿದ ಮೆರವಣಿಗೆಗೆ ಗ್ರಾಮಗಳಲ್ಲಿ ಮಹಿಳೆಯರು ಬೆಲ್ಲದಾರತಿ ಮಾಡಿ ಸ್ವಾಗತಿಸಿದರು.

ನಾಗಮಂಗಲ ಮಂಡ್ಯ ಸರ್ಕಲ್‌ನಲ್ಲಿ ಸಾವಿರಾರು ಜನರನ್ನುದ್ದೇಶಿಸಿ ಮಾತನಾಡಿದ ಸಚಿವರು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

“ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ಜನರ ಭಿಕ್ಷೆ”

“ಜೆಡಿಎಸ್ ಭಿಕ್ಷೆ ಅಲ್ಲ. ನಾಗಮಂಗಲದ ಜನರು ಕೊಟ್ಟ ಭಿಕ್ಷೆಯಿಂದಲೇ ನಾನು 1999ರಲ್ಲಿ ಗೆದ್ದಿದ್ದು. ಅಂದು 6 ಜನ ಪಕ್ಷ ಬಿಟ್ಟು ಹೋದಾಗ ನಾನು 4 ಜನರನ್ನು ಉಳಿಸಿಕೊಂಡು ಜೆಡಿಎಸ್ ಪಕ್ಷ ಕಟ್ಟಿದ್ದು. ಅವತ್ತು ಗೌರವವಾಗಿ ಉಳಿಸಿಕೊಂಡಿದ್ದರೆ ಜೆಡಿಎಸ್‌ನಿಂದ 50ರಿಂದ 60 ಜನ ಗೆಲ್ಲುತ್ತಿದ್ದರು” ಎಂದು ಹೇಳಿದರು.

“ಡಿಕೆಶಿ ಸಿಎಂ ಆಗೋದನ್ನ ಯಾರು ತಡೆಯಲು ಆಗಲ್ಲ”

“ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಅಣ್ಣ-ತಮ್ಮನಂತೆ ಪಕ್ಷ ಕಟ್ಟಿದ್ದಾರೆ. ನಾನು 2028ಕ್ಕೆ ಮತ್ತೆ ಗೆದ್ದು ವಿಧಾನಸಭೆಗೆ ಹೋದರೆ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ” ಎಂದು ಭವಿಷ್ಯ ನುಡಿದರು.

“ಕುಮಾರಸ್ವಾಮಿ ಅವರಿಗೆ 10-20 ಸೀಟ್ ಗೆಲ್ಲೋದು ದೊಡ್ಡ ವಿಷಯ. ಅವರು ಬೇರೆಯವರ ಮನೆಗೆ ಹೋಗಬೇಕು ಅಥವಾ ನಮ್ಮ ಹತ್ರ ಬರಬೇಕು. ಡಿಕೆಶಿ, ಸಿದ್ದರಾಮಯ್ಯ ಯಾರ ಮನೆಗೂ ಹೋಗುವುದಿಲ್ಲ. ಜನರ ಮನೆಗೆ ಮಾತ್ರ ಹೋಗಿ ಮತ ಕೇಳುತ್ತೇವೆ” ಎಂದು ಟೀಕಿಸಿದರು.

“ನಿಮ್ಮ ಋಣದಿಂದ 4 ಬಾರಿ ಮಂತ್ರಿ”

“ನಿಮ್ಮ ಆಶೀರ್ವಾದದಿಂದಲೇ ನಾನು ಮತ್ತೊಮ್ಮೆ ಸಚಿವನಾಗಿದ್ದೇನೆ. ನಿಮ್ಮ ಋಣದಿಂದ ನಾನು ನಾಲ್ಕು ಬಾರಿ ಮಂತ್ರಿಯಾಗುವ ಭಾಗ್ಯ ಪಡೆದಿದ್ದೇನೆ. ನಾಗಮಂಗಲ ಮತ್ತು ಕೊಪ್ಪ ಜನರಿಗೆ ಧನ್ಯವಾದಗಳು” ಎಂದು ಭಾವುಕರಾದರು.

“ಅಭಿವೃದ್ಧಿಯೇ ನನ್ನ ಉತ್ತರ”

ಟೀಕೆ-ಟಿಪ್ಪಣಿಗೆ ಉತ್ತರ ಕೊಡುವುದಿಲ್ಲ. ನಾನು ಮಾಡಿದ ಕೆಲಸವೇ ಅವರಿಗೆ ಉತ್ತರ. ನಾನು ಕಟ್ಟಿದ ಕಾಂಪ್ಲೆಕ್ಸ್ ಅನ್ನು ಈಗ ಉದ್ಘಾಟಿಸಿದ್ದೇನೆ. ನಾಗಮಂಗಲದ ರಸ್ತೆ, ಕೊಪ್ಪದ ಬಸ್ ನಿಲ್ದಾಣ, ಬೆಕ್ಕರಳೆಯ ರಸ್ತೆ, ಕೊಪ್ಪ ಹೋಬಳಿಗೆ ನೀರು ಕೊಟ್ಟು ಅಭಿವೃದ್ಧಿ ಮಾಡಿದ್ದು ನಾನೇ. ಸೋತವನು, ಗೆದ್ದವನು ಲೀಡರ್ ಅಲ್ಲ. ಜನಸೇವೆ ಮಾಡುವವನೇ ನಿಜವಾದ ಲೀಡರ್ ಎಂದು ಹೇಳಿದರು.

“2028ರ ಗುರಿ”
2028ಕ್ಕೆ ವಿಧಾನಸಭೆ ಚುನಾವಣೆ ಬರುತ್ತಿದೆ. ಗ್ರಾ.ಪಂ, ತಾ.ಪಂ, ಜಿಲ್ಲಾ ಪಂ ಚುನಾವಣೆಯಲ್ಲಿ ವ್ಯತ್ಯಾಸವಾಗದಂತೆ ಹೋರಾಟ ಮಾಡೋಣ. ಕಾಂಗ್ರೆಸ್‌ನಲ್ಲಿ ಎಲ್ಲಾ ಸಮಾಜಕ್ಕೂ ಸಮಾನ ಅವಕಾಶವಿದೆ. ಬಿಜೆಪಿ-ಜೆಡಿಎಸ್‌ನಲ್ಲಿ ಮಾತ್ರ ಬೇರೆ ಬೇರೆ ಎಂದು ವ್ಯತ್ಯಾಸ ತೋರಿಸಿದರು.

“ಬರದ ಬಗ್ಗೆ ಧೈರ್ಯ”
ಮಳೆ ಬಂದು ಕೆ.ಆರ್.ಎಸ್, ಹೇಮಾವತಿ ಅಣೆಕಟ್ಟು ತುಂಬುತ್ತಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಧೈರ್ಯವಾಗಿರಿ ಎಂದು ರೈತರಿಗೆ ಅಭಯ ನೀಡಿದರು.

ಕಾರ್ಯಕ್ರಮದಲ್ಲಿ ಸಚ್ಚಿನ್ ಚಲುವರಾಯಸ್ವಾಮಿ,ಸಹೋದರ ಲಕ್ಷ್ಮಿಕಾಂತ್,ಸುನೀಲ್ ಲಕ್ಷ್ಮಿಕಾಂತ್,ಜಿ ಪಂ ಮಾಜಿ ಸದಸ್ಯ ಪ್ರಸನ್ನ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

ಆಂದೋಲನ ಡೆಸ್ಕ್

Recent Posts

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

2 mins ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

6 mins ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

9 mins ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

13 mins ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

19 mins ago

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು…

29 mins ago