ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ. ಎ.ಐ.ನೊಂದಿಗಿನ ಮೂರೂವರೆ ದಶಕಗಳ ನನ್ನ ವಿಧ್ಯುಕ್ತ ಒಡನಾಟ, ಕೆನಡಾದ ಪ್ರತಿಷ್ಠಿತ ಸಂಸ್ಥೆಯೊಂದರ ಎ.ಐ. ಲ್ಯಾಬರೇಟರಿಯ ನಿರ್ದೇಶಕನಾಗಿ ಕೆಲಸಮಾಡುವ ಮೂಲಕ ಇತ್ತೀಚೆಗೆ ಕೊನೆಗೊಂಡಿದೆ.

ನನ್ನ ಈ ಸುದೀರ್ಘ ಒಡನಾಟದಲ್ಲಿ, ಈ ರಂಗದ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ ಕೂಡ. ಜಾಗತಿಕ ತಾಪಮಾನದ ಏರಿಕೆ, ಆರ್ಥಿಕ ಅಸಮಾನತೆ, ಕ್ಯಾನ್ಸರ್‌ನಿಂದ ಹಿಡಿದು ಶತಮಾನಗಳಿಂದ ಉತ್ತರ ಕಂಡು ಹಿಡಿಯಲಾಗದ ಗಣಿತದ ಸಮಸ್ಯೆಗಳವರೆಗೆ, ಎಲ್ಲಕ್ಕೂ, ಎ.ಐ. ಪರಿಹಾರ ಒದಗಿಸುತ್ತದೆಂಬ ವಾದಗಳನ್ನು ನಾನು ಕೇಳಿದ್ದೇನೆ. ಹಾಗೆಯೇ, ಎ.ಐ. ಕ್ರಾಂತಿಯಿಂದ ಮಾನವರೆಲ್ಲಾ ರೋಬೋಟುಗಳ ಅಡಿಯಾಳುಗಳಾಗಿ ಕೊನೆಗೆ ಇಡೀ ಮಾನವ ಜಾತಿಯೇ ಸಂಪೂರ್ಣ ನಾಶವಾಗುತ್ತದೆ ಎನ್ನುವಂತಹ ವಾದಗಳೂ ನನಗೆ ಹೊಸದಲ್ಲ. ಮೊದಲನೆಯವಾದ ಮಂಡಿಸುವವರನ್ನು, ‘ಎ.ಐ. ಬೂಮರ್ಸ್’ ಎಂದೂ, ಎರಡನೆಯವರನ್ನು ‘ಎ.ಐ.ಡೂಮರ್ಸ್’ ಎನ್ನುವುದೂ ಇದೆ. ಈ ವಾದಗಳಿಗೆ ಹಲವು ದಶಕಗಳ ಇತಿಹಾಸವಿದ್ದರೂ, ಹಿಂದೊಮ್ಮೆ ಪಂಡಿತರ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ‘ಬೂಮರ್ಸ್ ವರ್ಸಸ್ ಡೂಮರ್ಸ್’ಗಳ ಆವೇಶದ ಮಾತುಗಳು, ಇಂದು ಸಾಮಾಜಿಕ ಚರ್ಚೆಯ ವಿಷಯವಾಗಿ ಬದಲಾಗಿವೆ.

ಎ.ಐ.ರಂಗದಲ್ಲಿ ಹಣದ ಹೂಡಿಕೆ, ಬಿಲಿಯನ್-ಟ್ರಿಲಿಯನ್ ಡಾಲರುಗಳ ಲಾಭದ ಆಸೆ-ದುರಾಸೆಗಳು ಹೆಚ್ಚಾದಂತೆ, ಆವೇಶದ ಮಾತುಗಳು, ಡಂಬಾಚಾರಗಳಾಗುತ್ತಿವೆ. ಒಮ್ಮೆ ಬೂಮರ್ಸ್/ಡೂಮರ್ಸ್ ಆಗಿದ್ದವರು, ಇನ್ನೊಮ್ಮೆ ತಮ್ಮ ಆರ್ಥಿಕ ಲಾಭಕ್ಕೆ ತಕ್ಕಂತೆ, ಡೂಮರ್ಸ್/ಡೂಮರ್ಸ್‌ಗಳಾಗಿ ಬದಲಾಗುವುದೂ ನಡೆದಿದೆ. ನನ್ನ ಮಟ್ಟಿಗೆ ಹೇಳುವುದಾದರೇ, ಎ.ಐ. ಎನ್ನುವುದು ಮಾನವ ಇತಿಹಾಸದಲ್ಲಿ ಒಂದು ಕ್ರಾಂತಿಕಾರಕ ಘಟ್ಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎ.ಐ. ವಿಕಾಸದ ಹಾದಿ ಹೇಗಿರಬೇಕು? ಆ ಹಾದಿಗೆ ಎಂತಹ ಬೇಲಿಗಳು, ಸ್ಪೀಡ್ ಲಿಮಿಟ್ಗಳು, ಸಿಗ್ನಲ್‌ಗಳು ಇರಬೇಕು? ಇವೆಲ್ಲಾ, ಜಾಗತಿಕ ರಾಜಕೀಯ ನಾಯಕರು ವಿಜ್ಞಾನಿಗಳು-ತಜ್ಞರೊಂದಿಗೆ ನಟನೆ- ಆವೇಶಗಳನ್ನು ಬದಿಗಿಟ್ಟು, ಸಾಧಕ- ಬಾಧಕಗಳನ್ನು ತಣ್ಣಗೆ ಚರ್ಚಿಸಿ ನಿರ್ಧರಿಸಬೇಕಾದ ವಿಷಯಗಳು. ಆದರೆ, ಈ ಸಂಕ್ರಮಣ ಕಾಲದಲ್ಲಿ, ಈ ರಾಜಕೀಯ ನಾಯಕರು ಬಹುಮಟ್ಟಿಗೆ ಜನಾಂಗವಾದ, ಕೋಮುವಾದ, ಉಗ್ರ ರಾಷ್ಟ್ರೀಯತೆ, ಸರ್ವಾಧಿಕಾರ, ಅವೈಜ್ಞಾನಿಕತೆಗಳ ಪ್ರತಿಪಾದಕರೇ ಆಗಿರುವುದು ಮಾನವ ಜನಾಂಗದ ಭವಿಷ್ಯಕ್ಕೆ ಆಶಾದಾಯಕವೇನಲ

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು

ಆಂದೋಲನ ಡೆಸ್ಕ್

Recent Posts

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

9 mins ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

12 mins ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

16 mins ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

23 mins ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

29 mins ago

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು…

39 mins ago