ಹಾಡು ಪಾಡು

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ ಒಂದೇ ತರಹ ಇದೆ’ಎಂಬ ದೂರು ಕೇಳುತ್ತಿದ್ದೇನೆ; ಮಕ್ಕಳು ಎಲ್ಲಕ್ಕೂ ‘ಎಐ’ ಬಳಸುವ ಮೂಲಕ, ಓದುವ, ಬರೆಯುವ ಕೌಶಲಗಳನ್ನು ಕಳೆದುಕೊಳ್ಳುವುದಿರಲಿ, ಸ್ವತಃ ಯೋಚಿಸುವ, ತರ್ಕಿಸುವ, ವಿವೇಚಿಸುವ ‘ಸಹಜ ಬುದ್ಧಿವಂತಿಕೆ’ಯನ್ನೂ ಕಳೆದುಕೊಳ್ಳುತ್ತಿದ್ದಾರೆ.

ಜೊತೆಗೆ ಮನುಷ್ಯ ಮನುಷ್ಯರೊಡನೆ ಒಡನಾಡುವ, ದಿಟ ಜಗತ್ತಿನೊಡನೆ ಸಂವಹಿಸುವ ಸಾಮರ್ಥ್ಯ ಲುಪ್ತವಾಗುತ್ತಿದೆ. ನಮಗೆ ಸದಾ ಅರಿವಿರಬೇಕು, ‘ಎಐ’ ಉತ್ತರಿಸುವುದು ‘ಡಾಟಾ’ ಮತ್ತು ‘ಅಲ್ಗಾರಿದಮ್’ ಅನ್ನು ಅವಲಂಬಿಸಿ. ಅದರಲ್ಲಿ ಉಣಿಸಿರುವ ಮಾಹಿತಿಯೇ ತಪ್ಪಿರಬಹುದು. ಬರೆದಿರುವ ಅಲ್ಗಾರಿದಮ್ ಪೂರ್ಣ ವಿಕಾಸಗೊಂಡಿರದೆ ಇರಬಹುದು; ಎಲ್ಲಕ್ಕಿಂತ ಅಪಾಯದ್ದು ಅಲ್ಗಾರಿದಮ್ ಯಾರದೋ ಲಾಭಕ್ಕೆ ದುಡಿಯುತ್ತಿರಬಹುದು, ಯಾರತ್ತಲೋ ಪಕ್ಷಪಾತಿಯಾಗಿರಬಹುದು, ಪೂರ್ವಗ್ರಹದ್ದಾಗಿರಬಹುದು. ‘ಎಐ ಹೇಳುವುದೆಲ್ಲವೂ ಪರಮಸತ್ಯವಲ್ಲ’ ಎಂಬ ಎಚ್ಚರಿಕೆಯಿಂದ ಬಳಸಬೇಕು, ನಮ್ಮ ಸ್ವಂತದ ವಿವೇಚನೆ ಸದಾ ಜಾಗೃತವಿರಬೇಕು.

‘ಎಐ’ ಅನ್ನು ಒಂದು ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳ ಪರಿಹಾರಕ್ಕೆ ನಾವು ಬಳಸುವುದು ಸೂಕ್ತ. ಉದಾಹರಣೆಗೆ ಎಂ.ಆರ್.ಐ., ಸಿ.ಟಿ. ಸ್ಕ್ಯಾನ್ ಯಂತ್ರಗಳು ದೇಹದೊಳಗೆ ಇಣುಕಿ ಒಂದು ಚಿತ್ರವನ್ನು ನೀಡುತ್ತವೆ. ಅದನ್ನು ಅರ್ಥೈಸಿ ರೋಗಪತ್ತೆ ಮಾಡುವಲ್ಲಿ ಮಾನವಸಹಜ ತಪ್ಪುಗಳಾಗುವುದನ್ನು ನೋಡುತ್ತೇವೆ. ಇಂತಹ ಸಮಸ್ಯೆಗೆ ‘ಎಐ’ ಸಹಾಯಕನಾಗಬಲ್ಲದು. ಅಗಾಧ ಮಾಹಿತಿಯನ್ನು ಉಣಿಸಿ, ತಜ್ಞರ ಸಹಾಯದಿಂದ ರೋಗಪತ್ತೆಯ ಕಾರ್ಯಕ್ಕೆ ವಿಕಾಸಗೊಳಿಸಿದ ‘ಎಐ’ ಸಲಕರಣೆ ವೈದ್ಯರಿಗೆ ಸಹಾಯಕನಾಗ ಬಲ್ಲದು. ‘ಎಐ’ ತಂತ್ರಜ್ಞಾನದಿಂದ ದೂರ ಓಡಬೇಕಿಲ್ಲ, ಆದರೆ ಅದರ ಅತಿಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಬೇಕು; ಜವಾಬ್ದಾರಿಯುತ ‘ಎಐ’ ಬಳಕೆ ಸದ್ಯದ ಅಗತ್ಯವಾಗಿದೆ.

ನೇಮಿಚಂದ್ರ, ಖ್ಯಾತ ಬರಹಗಾರ್ತಿ, ಮತ್ತು ಹಿರಿಯ ವೈಮಾನಿಕ ಇಂಜಿನಿಯರ್

 

 

ಆಂದೋಲನ ಡೆಸ್ಕ್

Recent Posts

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

3 mins ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

10 mins ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

14 mins ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

20 mins ago

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು…

30 mins ago

ಮೈತ್ರಿ ಪಕ್ಷದ ೮ ನಿರ್ದೇಶಕರ ರಾಜೀನಾಮೆ ಅಂಗೀಕಾರ

ಮಂಜು ಕೋಟೆ ಕೋಟೆ ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ ಭವಿಷ್ಯದ ಕುರಿತು ಮೂಡಿದ ಕುತೂಹಲ ಎಚ್.ಡಿ.ಕೋಟೆ: ರಾಜಕೀಯ ಕಾರ್ಯತಂತ್ರಗಳಿಂದ ಕೂಡಿ ಕುತೂಹಲ…

37 mins ago