ಹಾಡು ಪಾಡು

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ ಎಂದರೆ ಮನುಷ್ಯನಂತೆ ಯೋಚಿಸುವ ಮೆದುಳು, ಕಂಪ್ಯೂಟರ್ ಎಂದರೆ ಪುನರಾವರ್ತಿತ ಕೆಲಸಗಳನ್ನು ಮಾಡುವ ಲೇಬರ್. ಎರಡೂ ಸೇರಿದರೆ ಇದು ಬಹುತೇಕ ಎಲ್ಲ ಕಡೆ ಲಗ್ಗೆ ಇಡಬಹುದು. ಕಾಲ್‌ಸೆಂಟರ್ ನಂತಹ ಉದ್ಯೋಗಗಳು ಸಂಪೂರ್ಣ ನಶಿಸಿಹೋಗ ಬಹುದು. ಇದರ ನೇರ ಪರಿಣಾಮ ಯುವತಲೆಮಾರಿನ ಮೇಲೆಯೇ ಬೀರಲಿದೆ. ಕಾಲಾ ನಂತರ ಸರಿಹೋಗುತ್ತೆ, ಹೊಸ ಉದ್ಯೋಗ, ಉದ್ಯಮಗಳು ಸೃಷ್ಟಿಯಾಗ್ತವೆ. ಆದರೆ ಈ ಸ್ಥಿತ್ಯಂತರ ವೇಗ ಇದೆಯಲ್ಲಾ ಅದು ಹಿಂದೆಂದೂ ಕಂಡಿರದ್ದು. ಸದ್ಯದ ಯುವ ತಲೆಮಾರು ಖಂಡಿತ ಕಂಗಾಲಾಗಲಿದೆ. ಯಾಕೆಂದರೆ ಇವರನ್ನೆಲ್ಲ ನಾವು ‘ಇಲ್ಲದ’ ಉದ್ಯೋಗಗಳಿಗೆ ತಯಾರು ಮಾಡಿಬಿಟ್ಟಿದ್ದೇವೆ. ಅವರೀಗ ಅನುಭವಿ ಹಂತದ ಮಟ್ಟಿಗೆ ತಯಾರಾಗಬೇಕು, ಆದರೆ ಅದಕ್ಕೆ ಆರಂಭಿಕ ತರಬೇತಿ ಬೇಕಲ್ಲ. ಪಾಪ ಅನ್ಸುತ್ತೆ, ಒಂಥರ ಅತಂತ್ರ ಸ್ಥಿತಿ.

ಇದು ವಿನಾಶಕಾರಿ ಮಟ್ಟದ ಆತಂಕ ಸೃಷ್ಟಿಸಿದೆ. ಸಣ್ಣಪುಟ್ಟದ್ದಲ್ಲ. ಈಗಾಗಲೇ ಪೂರಕ ಉದಾಹರಣೆಗಳು ಘಟಿಸುತ್ತಿವೆ. ಆಸ್ಟ್ರೇಲಿಯಾ ಸರ್ಕಾರ ಓಪನ್ ಎಐ ಏಜೆಂಟುಗಳಿಂದ ತನ್ನ ಮೆಡಿಕೇರ್ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಹೇಳಿದೆ. ಇಲ್ಲಿ ಎರಡು ಬಗೆಯ ಅಪಾಯಗಳು. ಒಂದು ದುಷ್ಟರು ದುಷ್ಟ ಉದ್ದೇಶ ಇಟ್ಟುಕೊಂಡು ತಯಾರು ಮಾಡುವ ಏಜೆಂಟುಗಳು. ಇನ್ನೊಂದು ಸಜ್ಜನರು ಸೃಷ್ಟಿಸುವ ಏಜೆಂಟುಗಳೇ ದುಷ್ಟರಾಗುವುದು (rogue). ಎರಡನೆಯದೇ ವಿನಾಶಕಾರಿ ಭೀತಿ ಹುಟ್ಟಿಸಿರುವುದು. ಈ ಏಜೆಂಟುಗಳು ತಾವು ತಾವೇ ಮಾತಾಡಿಕೊಳ್ಳುವ, ಯೋಜನೆ ರೂಪಿಸಿ ಕನ್ನ ಹಾಕುವ ಕ್ಷಮತೆ ತೋರಿಸಿದ್ದಾವೆ. ಒಡೆಯನ ಕಣ್ತಪ್ಪಿಸಿ ಅಪರಾಧವನ್ನು ಎಸಗಿದ್ದಾವೆ. ಇವು ಸ್ವಯಂ ಮರು ಸೃಷ್ಟಿಸಿಕೊಳ್ಳುವ ಸೂಚನೆಯನ್ನೂ ಕೊಡುತ್ತಿವೆ. ಇವು ಒಂದೊಮ್ಮೆ ಹೆಜ್ಜೇನಿನ ಹಿಂಡಿನಂತೆ ಇಂಟರ್ನೆಟ್ ಎಂಬ ಸಾರ್ವಜನಿಕ, ನಾಗರಿಕ ಸಮಾಜದ ಮೇಲೆ ದಾಳಿ ಮಾಡಿದರೆ ಏನುಗತಿ? ಇದು ಭಯ. ನಮ್ಮ ಬ್ಯಾಂಕಿಂಗ್, ಆಸ್ಪತ್ರೆ, ಸರಕಾರಿ ವೆಬ್‌ಸೈಟುಗಳಲ್ಲಿನ ದೋಷ ದೌರ್ಬಲ್ಯ ಗಳನ್ನು ಕಂಡುಹಿಡಿದು ಒಳಗೆ ನುಗ್ಗಿದರೆ? ಆ ಮೂಲಕ ಇವು ನಮ್ಮ ಅರ್ಥಿಕ, ಸಾಮಾಜಿಕ, ಆಡಳಿತ ಇತ್ಯಾದಿ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಹುದು. ಈ ತನಕ ಇದು ಸಿನಿಮಾಗಳಲ್ಲಿ ಬರುವ ಕತೆಯಾಗಿತ್ತು. ಸಮೀಪದ ಭವಿಷ್ಯದಲ್ಲಿ ನಿಜವಾಗುವ ಸಾಧ್ಯತೆ ದಟ್ಟವಾಗಿದೆ.

ಮಧುಸೂದನ ವೈ.ಎನ್., ಯುವ ಲೇಖಕ ಮತ್ತು ಸಾಫ್ಟ್‌ವೇರ್ ತಜ್ಞ 

 

 

ಆಂದೋಲನ ಡೆಸ್ಕ್

Recent Posts

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

4 mins ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

11 mins ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

14 mins ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

18 mins ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

24 mins ago

ಚುನಾವಣಾ ಆಯೋಗದ ಬಿಕ್ಕಟ್ಟು ಬಗೆಹರಿಯುವುದು ಹೇಗೆ?

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌  ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕಾದ ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ, ನಿರಂಕುಶ ಅಧಿಕಾರ ಚಲಾವಣೆ ಇಂದು…

34 mins ago