ಮೈಸೂರು: ನಗರದ ಹೊರ ವಲಯದ ಸರ್ಕಾರಿ, ಖಾಸಗಿ ಬಡಾವಣೆಗಳು ಸೇರಿ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಕುಡಿಯುವ ನೀರು ಒದಗಿಸುವ ಹಳೆ ಉಂಡುವಾಡಿ ಯೋಜನೆಗೆ ಮುಡಾದಿಂದ ಕೊಡಬೇಕಿರುವ ಪಾಲಿನ ಅನುದಾನವನ್ನು (ವಂತಿಕೆ) ಹಂತ ಹಂತವಾಗಿ ಬಿಡುಗಡೆ ಮಾಡಲು ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮುಡಾ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಇದಲ್ಲದೆ, ಚಾಮರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ಕುದುರೆ ಮಾಳದಲ್ಲಿ ರಾಜಕಾಲುವೆಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ಹತ್ತಿರದಲ್ಲೇ ಇರುವ ೧.೧೫ ಎಕರೆ ಜಾಗದಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಕೊಳಗೇರಿ ನಿರ್ಮೂಲನಾ ಮಂಡಳಿಗೆ ಭೂಮಿಯನ್ನು ಹಸ್ತಾಂತರಿಸಲು ತೀರ್ಮಾನಿಸಲಾಯಿತು.
ಏಕ ನಿವೇಶನ, ಬಡಾವಣೆ ರಚನೆಗಳ ಪ್ಲಾನ್‌ಗಳಿಗೆ ಸಲ್ಲಿಸಿದ್ದ ಕಡತಗಳ ಕುರಿತು ವಿಸ್ತೃತ ಚರ್ಚೆ ನಡೆದು ಕೆಲವೊಂದಕ್ಕೆ ಒಪ್ಪಿಗೆ ನೀಡಲಾಯಿತು. ತಾಂತ್ರಿಕ, ನಿವೇಶನ ಶಾಖೆ, ತುಂಡುಭೂಮಿ ವಿಷಯಗಳಿಗೆ ಒಪ್ಪಿಗೆ ನೀಡಿದರೆ, ಕೆಲವು ವಿಷಯಗಳನ್ನು ಕಾರಣಾಂತರದಿಂದ ಮುಂದೂಡಲಾಯಿತು. ಮುಡಾಕ್ಕೆ ಆದಾಯ ಬರುವಂತೆ ಮಾಡಲು ನಿವೇಶನ ಬಿಡುಗಡೆ, ಭೂ ಉಪಯೋಗಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…
ಮೈಸೂರು: ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…
ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…
ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…
ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು " ನಾನು…
ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…