ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಗೆ ಗುರುವಾರ ಮಹಾರುದ್ರಾಭಿಷೇಕ ಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು.
ಶ್ರೀ ಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರತಿ ಗುರುವಾರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಲಾಗುತ್ತದೆ. ಅದರಂತೆ ಬೇಡಗಂಪಣ ಸಮುದಾಯದ ಅರ್ಚಕರು ಭಕ್ತಿ ಶ್ರದ್ಧೆಯಿಂದ ಪೂಜೆ ನೆರವೇರಿಸಿದರು.
ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆವರೆಗಿನ ಕಾಲಾವಕಾಶದಲ್ಲಿ 101 ತೆಂಗಿನ ಕಾಯಿ 101 ಅಕ್ಕಿ ತಂಬಿಟ್ಟು, 101 ಎಳ್ಳಿನ ಉಂಡೆ, ನೆನೆ ಹಾಕಿದ ಹಸಿ ಕಡಲೆ ಅಕ್ಕಿಯನ್ನು ಪಡಿತರವನ್ನಾಗಿ ಬೇಡಗಂಪಣ ಅರ್ಚಕರು ಬಳಕೆ ಮಾಡಿ ಪೂಜೆ ಸಲ್ಲಿಸಿದರು.
ಶ್ರೀ ವೀರಭದ್ರೇಶ್ವರ, ಬಸವೇಶ್ವರ ಉತ್ಸವ ಮೂರ್ತಿಗಳಿಗೆ ಜಲ ಅಭಿಷೇಕ, ವಿಭೂತಿ ಧಾರಣೆ, ಬಿಲ್ವದಳ, ಪಂಚಾಮೃತ ಅಭಿಷೇಕವನ್ನು 101 ಬಾರಿ ನೆರವೇರಿಸಲಾಗುತ್ತದೆ. ಮೊದಲ ಹಾಗೂ ಕೊನೆಯ ಪೂಜೆಯನ್ನು ದೇವಾಲಯದ ಹೊರಗಿನ ಗಣಪತಿ, ಆಲಂಬಾಡಿ, ಬಸವೇಶ್ವರ, ಗಾಳಿ ಬಸವೇಶ್ವರ ಕಟ್ಟೆ ಬಸವೇಶ್ವರ, ಇಷ್ಟಾರ್ಥ ಸಿದ್ಧಿಪೀಠ ದ್ವಜಸ್ತಂಭ, ಬೇಡರ ಕಣ್ಣಪ್ಪ, ಶ್ರೀ ಕಾಳಹಸ್ತಿಶ್ವರ, ಹುಲಿವಾಹನ, ಬಸವ ವಾಹನ ರುದ್ರಾಕ್ಷಿ ಮಂಟಪಗಳಿಗೂ ಪೂಜೆ ನೆರವೇರಿಸಲಾಗುತ್ತದೆ.
ಪಂಚಾಮೃತ ಅಭಿಷೇಕದ ಮೇಲೆ ಕಿರೀಟಧಾರಣೆ ಅಲಂಕಾರ ಮಾಡಿ ಸೇವಾರ್ಥದಾರರಿಗೆ ದರ್ಶನ ನೀಡಲಾಗುತ್ತದೆ. ಅಭಿಷೇಕವನ್ನು ತೆರವುಗೊಳಿಸಿ, ವಿಶೇಷ ಹೂವಿನ ಅಲಂಕಾರ ಮಾಡಿ ದೀಪ ದೂಪದಾರತಿಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಿದ್ದಾರೆ.
ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…
ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…
‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…
ನಾನು ಎ.ಐ. ಅಥವಾ ಕೃತಕ ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…
ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…
೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…