ಐತಿಹಾಸಿಕ ದೇವಾಲಯ ಅಭಿವೃದ್ಧಿಗೆ ಮುಂದಾದ ಬೆಳ್ಳುಮಾಡು ಗ್ರಾಮಸ್ಥರು
-ಕಿಶೋರ್ ಕುವಾರ್ ಶೆಟ್ಟಿ
ವಿರಾಜಪೇಟೆ: ಪುರಾತನ ಕಾಲದಲ್ಲಿ ಸಾಕಷ್ಟು ದೇವಾಲಯಗಳು ನಿರ್ಮಾಣವಾಗಿದೆ. ಅವುಗಳಲ್ಲಿ ಕೆಲವು ದೇವಾಲಯಗಳು ವಿವಿಧ ಕಾರಣಗಳಿಂದ ಕಣ್ಮರೆಯಾಗುವೆ.. ಹೀಗೆ ಕಣ್ಮರೆಯಾಗಿದ್ದ ಪುರಾತನ ದೇವಾಲಯವೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ೨೦೦೯ರಲ್ಲಿ ಪತ್ತೆಯಾಗಿದ್ದು, ೧೩ನೇ ಶತಮಾನದಲ್ಲಿ ನೆಲೆ ಕಂಡಿದ್ದ ಶ್ರೀ ಮಾದೇವರಪ್ಪ ದೇವರ ನೆಲೆಯ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಕಾಕೋಟುಪರಂಬು ಗ್ರಾ.ಪಂ. ವ್ಯಾಪ್ತಿಯ ಬೆಳ್ಳುಮಾಡು ಗ್ರಾಮದ ಸರ್ವೇ ನಂ. ೭೬/೧೦ರಲ್ಲಿ ಬೆಳ್ಳುಮಾಡು ದವಸ ಭಂಡಾರ ಸಹಕಾರ ಸಂಘದ ಕಟ್ಟಡದ ಹಿಂಭಾಗ ದೇವಾಲಯ ಪತ್ತೆಯಾಗಿದೆ.. ದೇಗುಲವು ಕಾಡು ಪಾಲಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆಯಿಂದ ಕೂಡಿದೆ.
ದೇವಾಲಯ ಪತ್ತೆಯಾಗಿದ್ದು ಹೇಗೆ?: ೨೦೦೯ರ ಅಕ್ಟೋಬರ್ ತಿಂಗಳಲ್ಲಿ ಗ್ರಾಮದ ಶ್ರೀ ಅಯ್ಯಪ್ಪ ಶಾಸ್ತ ದೇಗುಲದ ಜೀರ್ಣೋದ್ಧಾರ ಮಾಡುವ ಸಲುವಾಗಿ ದೇವಾಲಯದ ಆವರಣದಲ್ಲಿ ಪ್ರಶ್ನಾರ್ಥ ಕಾರ್ಯ ನಡೆಸಲಾಗಿತ್ತು. ಈ ವೇಳೆ ಪುರಾತನ ದೇವಾಲಯ ಒಂದು ಶಿಥಿಲಾವಸ್ಥೆಯಲ್ಲಿದೆ, ದೇಗುಲವನ್ನು ಪುನರ್ ನಿರ್ಮಾಣ ಮಾಡಿದಲ್ಲಿ ಮಾತ್ರ ಗ್ರಾಮವು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿದು ಬಂದಿತ್ತು. ವಿಮರ್ಶಕರು ನುಡಿದಂತೆ ದೇಗುಲದ ಕುರುಹುಗಳನ್ನು ಹುಡುಕುವ ಸಂದರ್ಭದಲ್ಲಿ ದಟ್ಟ ಕಾಡಿನ ನಡುವೆ ಭಗ್ನಗೊಂಡ ದೇವಾಲಯ ಪತ್ತೆಯಾಯಿತು ಎಂದು ಹೇಳಲಾಗಿದೆ.
ದೇಗುಲವು ಸುಮಾರು ೭೦೦-೮೦೦ ವರ್ಷ ಇತಿಹಾಸ ಹೊಂದಿರಬಹುದು ಎಂದು ಊಹಿಸಬಹುದಾಗಿದೆ. ಗರ್ಭದೊಳಗೆ ಶಿವಲಿಂಗಯನಿಪೀಠ ಮತ್ತು ರುದ್ರ ಭಾಗವು ದೊರೆತಿರುವುದರಿಂದ ಈಶ್ವರ ದೇವಾಲಯವೆಂದು ಗುರುತಿಸಲಾಗಿದೆ. ದೇಗುಲದ ಇನ್ನಷ್ಟು ಅನ್ವೇಷಣೆ ಮಾಡಿದಲ್ಲಿ ಇತಿಹಾಸ ಅರಿಯಲು ಸಾಧ್ಯವಾಗುತ್ತದೆ. ಗ್ರಾಮಸ್ಥರು ಸಹಕಾರ ನೀಡಿದಲ್ಲಿ ಆದಷ್ಟು ಬೇಗ ವರದಿ ಸಿದ್ಧಪಡಿಸಿ ನೀಡಬಹುದು.
–ನಾಯಕಂಡ ಪ್ರಕಾಶ್ ಮುತ್ತಣ್ಣ, ನಿವೃತ್ತ ಅಧಿಕಾರಿ, ಪುರಾತತ್ವ ಇಲಾಖೆ
ಗ್ರಾಮದ ಅಭಿವೃದ್ಧಿಗಾಗಿ ದೇವಾಲಯವನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ದೇವಾಲಯಕ್ಕೆ ತೆರಳಲು ಮಾರ್ಗದ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಕೆಲಸ ತಡವಾಗಿದೆ. ಈಗ ದೇವಾಲಯ ಆವರಣಕ್ಕೆ ತೆರಳಲು ಪ್ರಕಾಶ್ ಎಂಬವರು ತಾತ್ಕಾಲಿಕವಾಗಿ ದಾರಿ ನೀಡಿದ್ದು, ಜೀರ್ಣೋದ್ಧಾರ ಕಾರ್ಯ ಸುಗಮವಾಗಲಿದೆ. ದೇವಾಲಯ ಪುನರ್ ನಿರ್ಮಾಣ ಕಾರ್ಯಕ್ಕೆ ಗ್ರಾಮಸ್ಥರು, ಸಂಘ-ಸಂಸ್ಥೆಗಳು, ದಾನಿಗಳು ಅಗತ್ಯ ಸಹಕಾರ ನೀಡಬೇಕು.
–ಮಾತಂಡ ನಟೇಶ್ ಕಾಳಪ್ಪ, ಗ್ರಾಮಸ್ಥರು
ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…
ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…
ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…
ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…
ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…