ಜಿಲ್ಲೆಗಳು

15,16ರಂದು ನಗರದ ಕೆಲ ಭಾಗಗಳಿಗೆ ನೀರು ಸರಬರಾಜು ವ್ಯತ್ಯಯ

ಮೈಸೂರು: ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಹೊಂಗಳ್ಳಿ ೨ ಹಾಗೂ ೩ನೇ ಹಂತದ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೊಳ ೬೬/೧೧ ಕೆ.ವಿ. ಸಬ್‌ಸ್ಟೇಷನ್‌ನಲ್ಲಿ ಕೆಪಿಟಿಸಿಎಲ್ ಇಲಾಖೆಯ ತ್ರೈಮಾಸಿಕ ಕಾರ್ಯನಿರ್ವಹಣೆ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗುವ ಹಿನ್ನೆಲೆಯಲ್ಲಿ ನ.೧೫ ಮತ್ತು ೧೬ರಂದು ನಗರದ ಕೆಲ ಭಾಗಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಾರ್ಡ್ ನಂ.೧ ರಿಂದ ೭, ವಾರ್ಡ್ ನಂ.೨೦, ೨೩, ೩೮ ವಾರ್ಡ್ ನಂ. ೪೨ ರಿಂದ ೪೫, ವಾರ್ಡ್ ನಂ.೪೭ ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳಾದ ಹೆಬ್ಬಾಳ, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕೆ.ಜಿ.ಕೊಪ್ಪಲು, ಮೇಟಗಳ್ಳಿ, ಲೋಕನಾಯಕನಗರ, ಬೃಂದಾವನ ಬಡಾವಣೆ, ಒಂಟಿ ಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಶಾರದಾದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ ೧,೩ನೇ ಹಂತ, ಗೋಕುಲಂ ೧,೨, ೩ನೇ ಹಂತ ಹಾಗೂ ಹೊರ ವಲಯಗಳಾದ ಆರ್‌ಎಂಪಿ, ಬಿಇಎಂಎಲ್, ಯಾದವಗಿರಿ, ಬನ್ನಿಮಂಟಪ, ಎಬಿಸಿ ಬಡಾವಣೆ, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ.

ದೇವರಾಜ ಮೊಹಲ್ಲಾ ಭಾಗಶಃ, ಎನ್.ಆರ್.ಮೊಹಲ್ಲಾ ಭಾಗಶಃ ಪ್ರದೇಶಗಳು, ನಜರ್‌ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ಜನತಾ ನಗರ, ಕೆಎಚ್‌ಬಿ ಕಾಲೋನಿ, ಹೂಟಗಳ್ಳಿ, ವಿಜಯನಗರ ೩ನೇ ಹಂತ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ನೀರನ್ನು ಶೇಖರಿಸಿಕೊಂಡು ನಗರಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಪಶ್ಚಿಮ ವಿಭಾಗದ ಕಾರ್ಯಪಾಲಕ ಇಂಜಿನಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

8 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

8 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

10 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

10 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

1 day ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago