Andolana originals

ವಿಲಾಯತಿಗೆ ಹೊರಟವನು ಜಾತಿ ಬಾಹಿರನಾದೆ

ನಮ್ಮ ಜಾತಿಯ ಜನರು ನನ್ನ ವಿದೇಶ ಪ್ರಯಾಣವನ್ನು ಕುರಿತು ಗೊಂದಲವನ್ನು ಎಬ್ಬಿಸಿದರು. ಅಲ್ಲಿಯವರೆಗೆ ಮೋಧ್ ಬನಿಯರ ಪೈಕಿ ಯಾರೂ ವಿಲಾಯತಿಗೆ ಹೋಗಿರಲಿಲ್ಲ. ನಾನು ಈ ಸಾಹಸವನ್ನು ಮಾಡುವುದಾದರೆ ನನಗೆ ತಕ್ಕ ಶಿಕ್ಷೆಯಾದೀತೆಂದು ನುಡಿದರು.

ಜಾತಿಯವರ ಪಂಚಾಯಿತಿ ಸಭೆಯಲ್ಲಿ ನಾನು ಹಾಜರಾಗಬೇಕೆಂದು ನನಗೆ ಅಪ್ಪಣೆ ಬಂತು. ನಾನು ಹಾಜರಾದೆ. ನನಗೆ ಆ ಧೈರ್ಯ ಇದ್ದಕ್ಕಿದ್ದಂತೆ ಹೇಗೆ ಬಂದಿತೆಂಬುದು ಈಶ್ವರನಿಗೇ ಗೊತ್ತು. ಅಲ್ಲಿಗೆ ಹೋಗಲು ನನಗೆ ಅಧೈರ್ಯವೇ ಇರಲಿಲ್ಲ. ಶಂಕೆಯೂ ಆಗಲಿಲ್ಲ. ಜಾತಿಯ ಮುಖಂಡ ನನ್ನ ದೂರದ ಬಂಧುವೂ ಆಗಿದ್ದರು. ನಮ್ಮ ತಂದೆಯವರೊಂದಿಗೆ ಅವರ ಸಂಬಂಧ ಚೆನ್ನಾಗಿದ್ದಿತು. ಅವರು ನನಗೆ ಹೇಳಿದರು: ‘ನೀನು ವಿಲಾಯತಿಗೆ ಹೋಗುವ ವಿಚಾರ ಸರಿಯಾದುದಲ್ಲ ವೆಂದು ಪಂಚಾಯಿತರ ಅಭಿಪ್ರಾಯ, ನಮ್ಮ ಧರ್ಮಪಾಲನೆ ಅಲ್ಲಿ ಸಾಧ್ಯವಿಲ್ಲ. ಅಲ್ಲಿ ಆಂಗ್ಲೆಯರ ಜತೆ ಆಹಾರ ಪಾನೀಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.’

ನಾನು ಹೀಗೆ ಪ್ರತ್ಯುತ್ತರವಿತ್ತೆನು: ‘ವಿಲಾಯತಿಗೆ ಹೋಗುವುದು ಯಾವ ರೀತಿಯಲ್ಲಿಯೂ ಅಧರ್ಮವಲ್ಲವೆಂದು ನಾನು ತಿಳಿದಿದ್ದೇನೆ. ನಾನು ಅಲ್ಲಿಗೆ ಹೋಗುವುದು ಬರಿಯ ವಿದ್ಯಾಧ್ಯಯನಕ್ಕಾಗಿಯೇ, ಯಾವ ವಿಷಯಗಳಲ್ಲಿ ನಿಮಗೆ ಭಯವಿದೆಯೋ ಅವುಗಳಿಂದ ದೂರವಿರುವುದಾಗಿ ತಾಯಿಗೆ ವಚನ ಕೊಟ್ಟಿದ್ದೇನೆ. ನಾನು ಅವುಗಳಿಂದ ದೂರವಿರಬಲ್ಲೆನು.’ ‘ಆದರೆ ನಾವು ನಿನಗೆ ಹೇಳುತ್ತೇವೆ. ಅಲ್ಲಿ ನಮ್ಮ ಧರ್ಮಪಾಲನೆ ಸಾಧ್ಯವಿಲ್ಲ. ನಿಮ್ಮ ತಂದೆಗೂ ನನಗೂ ಎಂತಹ ಸಂಬಂಧವಿದ್ದಿತೆಂದು ನಿನಗೂ ಗೊತ್ತು. ನಾನು ಹೇಳಿದುದನ್ನು ನೀನು ಆದರಿಸಲೇಬೇಕು’ ಎಂದು ಜಾತಿಯ ಮುಖ್ಯಸ್ಥ ಹೇಳಿದರು.

‘ಹೌದು, ನಿಮ್ಮ ಮತ್ತು ನಮ್ಮ ತಂದೆಯ ಸಂಬಂಧ ನನಗೆ ಜ್ಞಾಪಕವಿದೆ. ನೀವು ನಮ್ಮ ತಂದೆಯ ಸಮಾನರು. ಆದರೆ ಈ ವಿಷಯದಲ್ಲಿ ನಾನು ನಿರುಪಾಯ. ವಿಲಾಯತಿಗೆ ಹೋಗುವ ನನ್ನ ನಿಶ್ಚಯವನ್ನು ನಾನು ಬದಲಾಯಿಸಲಾರೆನು. ನಮ್ಮ ತಂದೆಯ ಮಿತ್ರರೂ ಸಲಹೆಗಾರರೂ ಆದ ವಿದ್ವಾಂಸ ಬ್ರಾಹ್ಮಣರೊಬ್ಬರು, ನಾನು ವಿಲಾಯತಿಗೆ ಹೋಗುವುದು ತಪ್ಪಲ್ಲವೆಂದು ಭಾವಿಸಿದ್ದಾರೆ. ತಾಯಿಯೂ, ಅಣ್ಣನೂ ನನಗೆ ಅನುಮತಿ ಕೊಟ್ಟಿದ್ದಾರೆ? ಎಂದು ನಾನು ಉತ್ತರವಿತ್ತೆನು.

‘ಹಾಗಾದರೆ ನೀನು ಪಂಚಾಯಿತಿಯ ಅಪ್ಪಣೆಯನ್ನು ನಡೆಸುವುದಿಲ್ಲವೆ?’‘ನಾನು ನಿರುಪಾಯ. ಈ ವಿಷಯದಲ್ಲಿ ಪಂಚಾಯಿತಿಯವರು ಪ್ರವೇಶಿಸುವುದು ಅವಶ್ಯವಿಲ್ಲವೆಂದು ನಾನು ಭಾವಿಸುತ್ತೇನೆ.’ ನನ್ನ ಈ ಪ್ರತ್ಯುತ್ತರದಿಂದ ಆ ಮುಖಂಡರಿಗೆ ಕೋಪ ಬಂತು. ನನ್ನನ್ನು ಕುರಿತು ನಾಲ್ಕಾರು ಕೆಟ್ಟ ಮಾತುಗಳನ್ನು ಆಡಿದರು. ನಾನು ಸುಮ್ಮನೆ ಕುಳಿತೆ. ಸೇಠರು ತಮ್ಮ ತೀರ್ಮಾನವನ್ನು ಹೇಳಿದರು: ‘ಇಂದಿನಿಂದ ಈ ಹುಡುಗನನ್ನು ಜಾತಿಬಾಹಿರನೆಂದು ಪರಿಗಣಿಸಿ. ಇವನಿಗೆ ಸಹಾಯ ಮಾಡುವವರು, ಇವನನ್ನು ಕಳುಹಿಸಲು ಬಂದರಿಗೆ ಹೋಗಿ ಬರುವವರು, ಜಾತಿಗೆ ಅಪರಾಧಿಗಳು. ಅಂತಹವರಿಗೆ ಒಂದೂಕಾಲು ರೂಪಾಯಿ ಜುಲ್ಮಾನೆ ವಿಧಿಸಲ್ಪಡುತ್ತದೆ.’

ಈ ಘಟನೆಯಿಂದ ನನ್ನ ಮೇಲೆ ಏನೂ ಪರಿಣಾಮವಾಗಲಿಲ್ಲ. ನಾನು ಸೇಠರ ಅಪ್ಪಣೆ ಪಡೆದು ಹಿಂದಿರುಗಿದೆನು. ಈ ನಿರ್ಣಯದ ಪರಿಣಾಮ ನಮ್ಮಣ್ಣನ ಮೇಲೆ ಏನಾಗುವುದೋ ಎಂದು ನಾನು ಚಿಂತಿಸಿದೆ. ಅವರಿಗೇನಾದರೂ ಭಯವಾಗುವುದೋ ಎಂದು ಯೋಚಿಸಿದೆ. ಭಾಗ್ಯವರದಿಂದ ಅವರು ವಿಚಲಿತರಾಗಲಿಲ್ಲ. ‘ಜಾತಿಯವರ ತೀರ್ಮಾನ ಹೀಗಿದ್ದರೂ ನೀನು ವಿಲಾಯತಿಗೆ ಹೋಗುವುದನ್ನು ನಾನು ತಡೆಯುವುದಿಲ್ಲ’ ಎಂದು ಬರೆದರು. ಹೀಗೆ ಸೆಪ್ಟೆಂಬರ್ ನಾಲ್ಕರಂದು (೧೮೮೮) ನಾನು ಬೊಂಬಾಯಿ ಬಂದರನ್ನು ಬಿಟ್ಟು ವಿಲಾಯತಿಗೆ ಹೊರಟೆನು.

ಆಂದೋಲನ ಡೆಸ್ಕ್

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

5 hours ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

6 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

6 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

7 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

12 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

12 hours ago