Andolana originals

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಮಹಾತ್ಮನ ಚಿಂತನೆಯ ಹಾದಿಯಲ್ಲಿ ನಡೆಯಬೇಕಿದೆ

ನಾನು ಕಂಡ ಗಾಂಧಿಜಿಯವರಲ್ಲಿ, ಅವರ ಜೀವನದಲ್ಲಿ ನನ್ನನ್ನು ಅತ್ಯಂತ ಹೆಚ್ಚಾಗಿ ಆಕರ್ಷಿಸಿದ ವಿಷಯ ಎಂದರೆ ಅವರ ಸರಳ ಜೀವನ.

ಅವರ ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯನ್ನು ಓದಿದಾಗ ನನಗೆ ಅರಿವಾದ ಸಂಗತಿ ಎಂದರೆ ಗಾಂಧಿಜಿಯವರು ಹುಟ್ಟುತ್ತಲೇ ಮಹಾತ್ಮರಾಗಿರಲಿಲ್ಲ. ಅವರು ಕೂಡ ನಮ್ಮಂತೆಯೇ ಬಾಲ್ಯದಲ್ಲಿ ತಪ್ಪುಗಳನ್ನು ಮಾಡುತ್ತಿದ್ದ ಸಾಮಾನ್ಯ ಬಾಲಕರಾಗಿದ್ದರು.

ತಪ್ಪು ಮಾಡುವುದು ಸಹಜ ! ಆದರೆ, ಆ ತಪ್ಪನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಂಡು, ತಿದ್ದಿಕೊಂಡು ಸತ್ಯದ ಹಾದಿಯಲ್ಲಿ ನಡೆಯಬೇಕು ಎಂಬುದನ್ನು ಸಾರಿ ಸಾರಿ ಹೇಳುತ್ತೇನೆ. ಏಕೆಂದರೆ, ನಮ್ಮ ಬಾಪೂಜಿಯವರು ಕೂಡ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಅರಿತುಕೊಂಡು, ತಿದ್ದಿಕೊಂಡವರು. ಹಾಗೆಯೇ, ‘ಮಹಾತ್ಮ’ ಎಂಬ ಬಿರುದನ್ನು ಪಡೆದವರು ಈ ಯುಗಪುರುಷ. ಇಂದಿನ ಈ ತಂತ್ರಜ್ಞಾನದ ಜೀವನದಲ್ಲಿ, ಬರೀ ಪುಸ್ತಕದೊಳಗಿನ ಮಸ್ತಕವಾದರೆ ಏನು ಪ್ರಯೋಜನ? ಇಡೀ ಜಗತ್ತನ್ನು ಅರಿಯುವ ಗಾಂಧಿಜಿಯ ತತ್ವಗಳನ್ನು ತಿಳಿಯುವ ವಿದ್ಯಾರ್ಥಿಯಾಗದಿದ್ದರೆ ಶಿಕ್ಷಣಕ್ಕೆ ಬೆಲೆಯಿರುವುದಿಲ್ಲ. ಭಾರತದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಿಗಬೇಕು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ, ಸಮಾನ ನ್ಯಾಯ ಸಲ್ಲಬೇಕು ಎಂಬ ಈ ಮಹಾತ್ಮನ ಚಿಂತನೆಗೆ ನನ್ನ ನಮನ. ನಮ್ಮ ಸ್ವಾತಂತ್ರ್ಯದ ಹೀರೋಗಳಲ್ಲಿ ಒಬ್ಬ ಮಹಾನ್ ಹೋರಾಟಗಾರನಾಗಿ, ಅಹಿಂಸೆ ಮತ್ತು ಸತ್ಯಾಗ್ರಹಗಳ ಮೂಲಕ ಶಾಂತಿ, ಸಹನೆ ಹಾಗೂ ಭಾರತೀಯರನ್ನು ಒಂದುಗೂಡುವಂತೆ ಪ್ರೇರೇಪಿಸಿದ ಈ ಸರಳ ಮತ್ತು ಸರಾಗ ಜೀವಿಗೆ, ‘ಮಹಾತ್ಮ’ರಾದ ಗಾಂಧೀಜಿ ಅವರಿಗೆ ನನ್ನ ಭಾವಪೂರ್ವಕ ನಮನಗಳು.

ಹೇಮಶ್ರೀ ಪಿ.ಎಸ್., ೯ನೇ ತರಗತಿ, ಪ್ರಮತಿ ಹಿಲ್ ವ್ಯೂ ಅಕಾಡೆಮಿ, ಕುವೆಂಪುನಗರ, ಮೈಸೂರು

ಗಾಂಧೀಜಿ ಮೇಲೆ ಪಾಶ್ಚಾತ್ಯ ಗ್ರಂಥಗಳ ಪ್ರಭಾವ: 

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಗಾಂಧಿಜಿ ಮಾನವನ ಶೋಷಣೆಯ ವಿರುದ್ಧ ಸಿಡಿದೆದ್ದರು. ಹರಿಜನೋದ್ಧಾರ ಕಾರ್ಯಕ್ರಮ, ವಿಶ್ವದಾದ್ಯಂತ ವಸಾಹತುಗಳ ವಿಮೋಚನೆಗೆ ಕೊಟ್ಟ ಬೆಂಬಲ, ಗುಲಾಮಗಿರಿಯ ವಿರುದ್ಧ ಎಬ್ಬಿಸಿದ ಬಿರುಗಾಳಿ ಮುಂತಾದವುಗಳು ಅವರ ಪ್ರಮುಖ ಹೋರಾಟಗಳು.

ಗಾಂಧೀಜಿ ಅವರ ಸಮಾಜವಾದವು ಸತ್ಯ, ಶಾಂತಿ, ಅಹಿಂಸೆ ಮತ್ತು ಸಹಕಾರಗಳಿಂದ ಕೂಡಿದೆ.ಸರ್ವೋದಯವು ಅಂತ್ಯೋದಯದಿಂದ ಪ್ರಾರಂಭವಾಗುತ್ತದೆ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬುದಾಗಿ ಆಶಿಸುವುದು ಬಹುಕಾಲದಿಂದಲೂ ಬಂದಿರುವ ಹಿಂದೂ ಸಂಪ್ರದಾಯ. ತಾರತಮ್ಯಗಳನ್ನು ಮಾಡಬಾರದು ಎಂದು ಅವರು ತಿಳಿಸಿದರು. ಕಾನೂನು ಭಂಗ ಚಳವಳಿಯು ಅಸಹಕಾರದ ಕೊನೆಯ ಹಾಗೂ ಉಗ್ರವಾದಂತಹ ಅಸವಾಗಿದೆ.

ಗಾಂಧೀಜಿ ಇದನ್ನು ಸಶಸ ಬಂಡಾಯಕ್ಕೆ ಒಂದು ಪರಿಪೂರ್ಣವಾದ, ಪರಿಣಾಮಕಾರಿಯಾದ ಹಾಗೂ ರಕ್ತಪಾತವಿಲ್ಲದ ಪರ್ಯಾಯ ವಿಧಾನ ಎಂದು ಕರೆದರು.

೧.ತ್ವತ್ತ್ವ ರಹಿತ ರಾಜಕೀಯ, ೨.ದುಡಿಮೆ ಇಲ್ಲದ ಸಂಪತ್ತು, ೩.ನೀತಿ ಹೀನ ವಾಣಿಜ್ಯ, ೪.ಶೀಲವಿಲ್ಲದ ಶಿಕ್ಷಣ, ೫.ಆತ್ಮಸಾಕ್ಷಿರಹಿತ ಭೋಗ, ೬.ಮಾನವತೆ ಶೂನ್ಯ ವಿಜ್ಞಾನ, ೭.ತ್ಯಾಗವಿಲ್ಲದ ಪೂಜೆ ಮುಂತಾದ ಏಳು ಸಾಮಾಜಿಕ ಘಾತಕಗಳಿಂದ ದೂರವಿರಬೇಕು ಎಂದು ಜನರಿಗೆ ಉಪದೇಶಿಸುತ್ತಿದ್ದರು.

ಮೇಘನ, ೯ನೇ ತರಗತಿ, ದೊಡ್ಡಹುಂಡಿ ಭೋಗಪ್ಪ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಗುಂಡ್ಲುಪೇಟೆ

ಸಮಾಜ ಸುಧಾರಕ, ಶಾಂತಿಯ ಪ್ರತೀಕ ಗಾಂಧೀಜಿ: 

ಜಗತ್ತಿಗೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ತೋರಿಸಿದ ಮಹಾನ್ ವ್ಯಕ್ತಿ ಗಾಂಧೀಜಿ. ಮಹಾತ್ಮ ಗಾಂಧೀಜಿ ಅವರದು ಭಾರತದ ಇತಿಹಾಸದಲ್ಲಿ ಅಜರಾಮರ ಹೆಸರು. ಅವರು ಕೇವಲ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕ ಮಾತ್ರವಲ್ಲ, ಇಡೀ ಜಗತ್ತಿಗೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ತೋರಿಸಿದ ಮಹಾನ್ ವ್ಯಕ್ತಿ. ನನ್ನ ಕಣ್ಣಲ್ಲಿ ಗಾಂಧೀಜಿಯವರು ಆದರ್ಶ ನಾಯಕ, ಸಮಾಜ ಸುಧಾರಕ ಹಾಗೂ ಶಾಂತಿಯ ಪ್ರತೀಕ. ಗಾಂಧೀಜಿಯವರ ಅತ್ಯಂತ ಶ್ರೇಷ್ಠ ಗುಣವೆಂದರೆ ಅಹಿಂಸೆ. ಅವರು ಯಾವುದೇ ಸಮಸ್ಯೆಯನ್ನು ಹಿಂಸೆಯಿಂದಲ್ಲ, ಶಾಂತಿ ಮತ್ತು ಸತ್ಯದ ಮೂಲಕ ಪರಿಹರಿಸಬೇಕು ಎಂದು ಹೇಳುತ್ತಿದ್ದರು. ಇದು ಜಗತ್ತಿನಾದ್ಯಂತ ಗೌರವಿಸಲ್ಪಡುತ್ತದೆ. ಅವರು ತಮ್ಮ ಜೀವನದಲ್ಲಿ ಹೇಳಿದ್ದನ್ನು ಮೊದಲು ತಾವೇ ಅನುಸರಿಸುತ್ತಿದ್ದರು.

ನನಗೆ ಗೊತ್ತಿರುವ ಗಾಂಧೀಜಿಯವರು ಭಾರತದ ರಾಷ್ಟ್ರಪಿತರು ಮತ್ತು ವಿಶ್ವದ ಮಹಾನ್ ನಾಯಕರಲ್ಲಿ ಒಬ್ಬರು. ಅವರು ತಮ್ಮ ಜೀವನವನ್ನು ದೇಶದ ಸ್ವಾತಂತ್ರ್ಯ, ಸಮಾಜದ ಕಲ್ಯಾಣ ಮತ್ತು ಮಾನವೀಯ ಮೌಲ್ಯಗಳಿಗಾಗಿ ಸಮರ್ಪಿಸಿದರು. ಸತ್ಯ ಮತ್ತು ಅಹಿಂಸೆ ಎಂಬ ಎರಡು ಮಹತ್ವದ ತತ್ವಗಳ ಮೂಲಕ ಅವರು ಜಗತ್ತಿನಾದ್ಯಂತ ಗೌರವವನ್ನು ಗಳಿಸಿದರು. ಗಾಂಧೀಜಿಯವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಬಡವರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸಿದರು. ಅವರ ಜೀವನವು ಸೇವೆ, ತ್ಯಾಗ ಮತ್ತು ಪ್ರಾಮಾಣಿಕತೆಯ ಉತ್ತಮ ಉದಾಹರಣೆಯಾಗಿದೆ. ನನಗೆ ಗೊತ್ತಿರುವ ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ; ಅವರು ಮಾನವೀಯತೆಯ ಪ್ರತೀಕ, ಶಾಂತಿಯ ದೂತ ಮತ್ತು ಆದರ್ಶ ವ್ಯಕ್ತಿ. ಅವರ ಜೀವನದಿಂದ ನಾವು ಸತ್ಯ, ಅಹಿಂಸೆ, ಪ್ರೀತಿ ಮತ್ತು ಸೇವೆಯ ಮೌಲ್ಯಗಳನ್ನು ಕಲಿಯಬೇಕು. ಅವರ ಆದರ್ಶಗಳನ್ನು ಅನುಸರಿಸುವುದರಿಂದ ಉತ್ತಮ ಸಮಾಜವನ್ನು ನಿರ್ಮಿಸಬಹುದು.

ಸುರಭಿ ಶಾಸಿ, ೯ನೇ ತರಗತಿ, ಜ್ಞಾನಗಂಗಾ ವಿದ್ಯಾಪೀಠ, ಕುವೆಂಪುನಗರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

17 mins ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

25 mins ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

5 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

5 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

5 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

5 hours ago