Andolana originals

‘ಕೊಲೆ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ’

ಎಚ್.ಎಸ್.ದಿನೇಶ್ ಕುಮಾರ್

ನಿತ್ಯಾನಂದ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪಶ್ಚಾತ್ತಾಪದ ಕಣ್ಣೀರು

ಮೈಸೂರು: ನಗರದ ಕುವೆಂಪುನಗರದಲ್ಲಿ ಪತ್ನಿಯಿಂದಲೇ ಹತ್ಯೆಯಾದ ನಿತ್ಯಾನಂದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿರುವ ನಾಲ್ವರಿಗೆ ಕೊಲೆಯ ಬಗ್ಗೆ ತಿಳಿದೇ ಇರಲಿಲ್ಲವಂತೆ. ಈಗ ಅವರುಗಳು ಪಶ್ಚಾತ್ತಾಪದಿಂದ ಪ್ರತೀದಿನ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.

ಈ ಪ್ರಕರಣದಲ್ಲಿ ನಿತ್ಯಾನಂದನ ಪತ್ನಿ ಸುಶೀಲ ಹಾಗೂ ಆಕೆಯ ತಂಗಿಯ ಪತಿ ಹರೀಶ್ ಎಂಬವರು ಕೊಲೆಯ ರೂವಾರಿಗಳು. ಆದರೆ, ಇದರ ಬಗ್ಗೆ ಏನೂ ಗೊತ್ತಿರದ ಹಾಗೂ ಮರ ಕತ್ತರಿಸುವ

ವೃತ್ತಿಯಲ್ಲಿದ್ದ ರಂಗನಾಥ್(೨೩), ನವೀನ್(೨೪), ಚಂದನ್(೨೩) ಹಾಗೂ ಗಜೇಂದ್ರ(೨೫) ಅವರು ಗಳೂ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿ ದ್ದಾರೆ. ಜೂ.೨೭ರ ಶನಿವಾರ ರಾತ್ರಿ ೧೨ ಗಂಟೆಯವರೆಗೂ ಅವರಿಗೆ ‘ತಾವು ಓರ್ವ ವ್ಯಕ್ತಿಯನ್ನು ಕೊಲೆ ಮಾಡಲು ಬಂದಿದ್ದೇವೆ’ ಎಂಬುದರ ಅರಿವೇ ಇರಲಿಲ್ಲ ಎಂಬುದು ಪೊಲೀಸರ ತನಿಖೆಯ ವೇಳೆ ಗೊತ್ತಾಗಿದೆ. ಸುಶೀಲ ಅವರ ತಂಗಿಯ ಗಂಡ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ನೌಕರ.

ಪ್ರಕರಣವೊಂದರಲ್ಲಿ ಸಿಲುಕಿದ್ದ ಕಾರಣ ಆತ ಆರು ತಿಂಗಳ ಹಿಂದೆ ಅಮಾನತ್ತಿಗೊಳಗಾಗಿದ್ದಾನೆ. ಈ ಹಿಂದೆ ಆತ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮರ ಕತ್ತರಿಸುವ ವೃತ್ತಿಯಲ್ಲಿ ಇದ್ದ ನಾಲ್ವರೂ ಪರಿಚಯವಾಗಿದ್ದರು. ಸುಶೀಲ ಹಾಗೂ ಮೈದುನ ಹರೀಶ್ ಅವರು ನಿತ್ಯಾನಂದನ ಕೊಲೆಗೆ ಒಂದು ವಾರದ ಹಿಂದೆಯೇ ಸಂಚು ರೂಪಿಸಿದ್ದರು. ಆದರೆ, ಆಜಾನುಬಾಹುವಾಗಿದ್ದ ನಿತ್ಯಾನಂದನನ್ನು ಇಬ್ಬರೇ ಸೇರಿ ಕೊಲೆ ಮಾಡುವುದು ಕಷ್ಟ ಎಂಬುದರ ಅರಿವು ಅವರಿಗಿತ್ತು. ಈ ಕಾರಣದಿಂದ ಕೊಲೆಗೆ ಕೆಲವರ ಸಹಾಯ ಪಡೆಯಲು ನಿರ್ಧರಿಸಿದ್ದಾರೆ.

ಆಗ ಹರೀಶ್ ನೆನಪಿಗೆ ಬಂದವರು ಈ ನಾಲ್ವರು ಅಮಾಯಕರು. ಅವರುಗಳನ್ನು ಸಂಪರ್ಕಿಸಿದ ಹರೀಶ್, ಮೈಸೂರಿನಲ್ಲಿ ಮರ ಕತ್ತರಿಸುವ ಕೆಲಸವಿದೆ. ದಿನಕ್ಕೆ ಒಂದು ಸಾವಿರ ರೂ. ಕೂಲಿ ಕೊಡಿಸುತ್ತೇನೆ ಎಂದು ಹೇಳಿ ಕರೆಸಿಕೊಂಡಿದ್ದಾನೆ. ಅದರಂತೆ ಅವರುಗಳು ಜೂ.೨೭ರ ಶನಿವಾರ ಸಂಜೆಯೇ ಮೈಸೂರಿಗೆ ಬಂದಿದ್ದಾರೆ. ಅವರುಗಳನ್ನು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹವೊಂದರಲ್ಲಿ ಇರಿಸಿದ್ದಾನೆ. ರಾತ್ರಿ ಎಲ್ಲರಿಗೂ ಮದ್ಯದ ಪಾರ್ಟಿ ಮಾಡಿಸಿದ್ದಾನೆ.

ನಂತರ ರಾತ್ರಿ ೧೨ ಗಂಟೆ ವೇಳೆಗೆ ನಿತ್ಯಾನಂದ ಅವರ ಮನೆಗೆ ಈ ನಾಲ್ವರು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದಾನೆ. ಅಲ್ಲಿಗೆ ಬಂದ ನಂತರವೇ ಅವರಿಗೆ ‘ತಾವು ಬಂದಿರುವುದು ಓರ್ವ ವ್ಯಕ್ತಿಯನ್ನು ಕೊಲೆ ಮಾಡಲು’ ಎಂಬ ವಿಚಾರ ಗೊತ್ತಾಗಿದೆ. ಆರಂಭದಲ್ಲಿ ಅವರುಗಳು ‘ನಾವು ಕೊಲೆ ಮಾಡುವುದಿಲ್ಲ’ ಎಂದು ಹಿಂದೇಟು ಹಾಕಿದ್ದಾರೆ. ಆದರೆ, ಮದ್ಯದ ನಶೆಯಲ್ಲಿ ಇದ್ದ ಅವರುಗಳನ್ನು ಹರೀಶ್ ಬಲವಂತವಾಗಿ ಒಪ್ಪಿಸಿದ್ದಾನೆ. ನಂತರ ನಿದ್ರೆಯಲ್ಲಿ ಇದ್ದ ನಿತ್ಯಾನಂದನನ್ನು ಎಲ್ಲರೂ ಸೇರಿ ಸುತ್ತುವರಿದಿದ್ದಾರೆ.

ಅಷ್ಟರಲ್ಲಿ ಎಚ್ಚರಗೊಂಡ ನಿತ್ಯಾನಂದ ಬಚಾವಾಗಲು ಎಲ್ಲರೊಡನೆ ಹೋರಾಟ ನಡೆಸಿದ್ದಾರೆ. ಆದರೂ ಅಂತಿಮವಾಗಿ ಆರು ಮಂದಿ ಸೇರಿ ಅವರ ಮೇಲೆ ಮುಗಿಬಿದ್ದಿದ್ದಾರೆ. ನಾಲ್ವರು ಸೇರಿ ಆತನ ಕೈ ಕಾಲು ಹಿಡಿದಿದ್ದಾರೆ. ನಂತರ ಅಲ್ಲಿಯೇ ಇದ್ದ ಬೆಡ್‌ಶೀಟ್ ಮೂಲಕ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಮುಗಿಸಿದ್ದಾರೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಮುಂಜಾನೆ ಮೂರು ಗಂಟೆ ಆಗಿದೆ. ನಂತರ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದೀಗ ಎಲ್ಲರನ್ನೂ ವಶಕ್ಕೆ ಪಡೆದಿರುವ ಪೊಲೀಸರ ತಂಡ ಅವರುಗಳು ತಂಗಿದ್ದ ವಸತಿಗೃಹ, ಕುವೆಂಪುನಗರದ ಮನೆ ಹಾಗೂ ಇನ್ನಿತರ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

56 mins ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

2 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

2 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

2 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

2 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

7 hours ago