ಅಂಕಣಗಳು

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ ಮಾಡುವವರು ತಾವು ನಂಬಿದ ದೇವಾಲಯ ಮತ್ತು ಮಠಗಳಿಗೆ ಒಂದು ರೂಪಾಯಿಯಿಂದ ಹಿಡಿದು ಉಳ್ಳವರು ಕೋಟಿ ಗಟ್ಟಲೆ ಹಣ ಮತ್ತು ಆಸ್ತಿಪಾಸ್ತಿಯನ್ನು ನೀಡಿರುವ ಸಾವಿರಾರು ಉದಾಹರಣೆಗಳಿವೆ. ಹೀಗೆ ಹಣ ಮತ್ತು ಆಸ್ತಿ ರೂಪದಲ್ಲಿ ನೀಡಿದ ದಾನ ಬಹುತೇಕ ಆಯಾ ದೇವಾಲಯ ಮತ್ತು ಮಠಗಳ ಅಭಿವೃದ್ಧಿಗೆ ಸದ್ಬಳಕೆ ಆಗಿದ್ದರೆ ಮತ್ತೆ ಕೆಲವು ಕಡೆ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ. ಅನೇಕ ದೇವಾಲಯಗಳಲ್ಲಿ ಚಿನ್ನದ ಆಭರಣ ಕಳುವು ಮಾಡಿದ್ದರೆ ಮತ್ತೆ ಕೆಲವು ಕಡೆ ಭಕ್ತರು ಹಾಕಿದ ಹುಂಡಿಯ ಹಣವು ದುರುಪಯೋಗ ಆಗಿರುವುದು ಹೊಸ ಸಂಗತಿಯೇನಲ್ಲ.

ಇಂತಹ ದುರುಪಯೋಗದಲ್ಲಿ ಅರ್ಚಕರು, ದೇವಾಲಯದ ಟ್ರಸ್ಟಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದರೂ, ಅನೇಕ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಿರುವುದು ಕಡಿಮೆ ಎಂದೇ ಹೇಳಬಹುದು. ದೇವಾಲಯ ಮತ್ತು ಮಠಗಳಲ್ಲಿ ನಡೆಯುವ ಇಂತಹ ಪ್ರಕರಣಗಳಿಂದ ಅರ್ಚಕರು ಮತ್ತು ಮಠಾಧೀಶರು ತಮ್ಮ ಪೀಠಗಳ ಅಽಕಾರವನ್ನು ಕಳೆದುಕೊಂಡಿದ್ದಾರೆ. ಈಗಲೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲವು ಮಠಗಳಲ್ಲಿ ಹಣ ಮತ್ತು ಆಸ್ತಿಯ ದುರುಪಯೋಗದಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿವೆ. ಅನೇಕ ಕಡೆ ಭಕ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದಿವೆ.

ಅಕ್ರಮವಾಗಿ ಕೋಟಿ ಕೋಟಿ ಹಣ ಸಂಪಾದನೆ ಮಾಡಿರುವವರು ತಮ್ಮ ಪಾಪಪ್ರeಯಿಂದ ತಾವು ನಂಬಿದ ದೇವರು ಮತ್ತು ದೇವಾಲಯಗಳಿಗೆ ಲಕ್ಷಗಟ್ಟಲೆ ದೇಣಿಗೆ ನೀಡುವುದು ಮತ್ತು ಮಕ್ಕಳು ಇಲ್ಲದವರು ಮತ್ತೆ ಕೆಲವರು ದಾರಿತಪ್ಪಿದ ಮಕ್ಕಳಿಗೆ ಕೊಡುವ ಬದಲಿಗೆ ತಮ್ಮ ಆಸ್ತಿ ಹಾಗೂ ಮನೆಗಳನ್ನು ದೇವಾಲಯಗಳಿಗೆ ವಿಶೇಷವಾಗಿ ಮಠಗಳಿಗೆ ನೋಂದಣಿ ಮಾಡಿ ಕೈತೊಳೆದುಕೊಂಡವರಿದ್ದಾರೆ. ಆದರೆ ಇಂತಹ ಭಕ್ತರು ನೀಡಿದ ಹಣ ಆಸ್ತಿ ಆಯಾ ದೇವಾಲಯಗಳ ಮತ್ತು ಮಠಗಳ ಅಭಿವೃದ್ಧಿಗೆ ನಿಜವಾಗಿಯೂ ಸಹಾಯವಾಗಿದೆಯೇ ಎಂಬ ಬಗೆಗೆ ಪಾರದರ್ಶಕ ವ್ಯವಹಾರದ ಬಗೆಗೆ ಬೆಳಕು ಚೆಲ್ಲುವ ಪ್ರಕ್ರಿಯೆಗಳು ಈಗಲಾದರೂ ನಡೆಯುವುದು ಅನಿವಾರ್ಯ.

ಸರ್ಕಾರದ ನಿಯಂತ್ರಣದಲ್ಲಿರುವ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅನೇಕ ದೇವಾಲಯಗಳಲ್ಲಿಯೂ ಅರ್ಚಕರಿಂದ ಹಿಡಿದು ಆಡಳಿತಾಽಕಾರಿಗಳವರೆಗೂ ಹಣ ಆಸ್ತಿ ದುರುಪಯೋಗಳು ಕೇಳಿ ಬರುತ್ತಲೇ ಇವೆ. ಈ ಎಲ್ಲ ದುರುಪಯೋಗಗಳ ಬಗೆಗೆ ಸರ್ಕಾರ ಮತ್ತು ಆಯಾ ದೇವಾಲಯಗಳ ಭಕ್ತರ ಒತ್ತಡದಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕೆನ್ನುವ ಕೂಗು ಮುಂದುವರಿದೇ ಇದೆ.

ದೇಶದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಎರಡು ವರ್ಷಗಳ ಹಿಂದೆ ಪುನರ್ ನಿರ್ಮಾಣಗೊಂಡ ಶ್ರೀ ರಾಮಮಂದಿರ ಈಗ ಮತ್ತೆ ಸುದ್ದಿಯಲ್ಲಿದೆ. ಹಲವಾರು ವರ್ಷಗಳ ಹೋರಾಟದಿಂದ ಕೊನೆಗೆ ಸುಪ್ರೀಂ ಕೋರ್ಟ್ ೨೦೧೯ರಲ್ಲಿ ನೀಡಿದ ತೀರ್ಪಿನಿಂದ ಈಗ ಬಹುತೇಕ ಹಿಂದುಗಳ ಕನಸಿನ ಮತ್ತು ಶ್ರದ್ಧಾ ಕೇಂದ್ರವಾಗಿ ಶ್ರೀ ರಾಮಮಂದಿರ ತಲೆ ಎತ್ತಿದೆ. ಈ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮದಿಂದ ಶ್ರೀರಾಮ ಭಕ್ತರ ಕನಸು ನನಸಾಗಿದೆ.

ಈ ಕನಸಿನ ಹಿಂದೆ ಲಕ್ಷಾಂತರ ಭಕ್ತರ ಕಾಣಿಕೆ ಇದೆ. ಬಡ ಭಕ್ತನಿಂದ ಹಿಡಿದು ಉಳ್ಳವರ ಕೊಡುಗೆ ಇದೆ. ನಿತ್ಯವೂ ಲಕ್ಷಾಂತರ ರೂಪಾಯಿ ಆದಾಯವಿದೆ. ಆದರೆ ಭಕ್ತರು ಭಕ್ತಿಯಿಂದ ಸಲ್ಲಿಸುವ ಕಾಣಿಕೆ ಈಗ ದುರುಪಯೋಗ ಆಗುತ್ತಿರುವ ವರದಿ ಭಕ್ತರ ಜಂಘಾಬಲವನ್ನೇ ಅಲುಗಾಡಿಸಿದೆ. ಮಂದಿರ ನಿರ್ಮಾಣಕ್ಕೆ ನೀಡಿದ ಕೋಟ್ಯಂತರ ರೂಪಾಯಿಗೆ ಲೆಕ್ಕವಿಲ್ಲ ಎಂಬ ಆರೋಪದಿಂದಾಗಿ ಈಗ ಧಾರ್ಮಿಕ ಕ್ಷೇತ್ರಗಳ ನಿರ್ವಹಣೆ ಬಗೆಗೆ ಭಕ್ತರು ಮಾತ್ರವಲ್ಲ ಇಡೀ ಜನಸಮುದಾಯದಲ್ಲಿ ಹಲವಾರು ಶಂಕೆಗಳು ಎದ್ದಿವೆ.

ಈ ಹಣ ಮತ್ತು ಆಸ್ತಿಯ ದುರುಪಯೋಗದ ಪ್ರಕರಣ ಬೆಳಕಿಗೆ ಬಂದ ಮೇಲೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಪ್ರಾಥಮಿಕ ವರದಿಯ ಆಧಾರದ ಮೇಲೆ ಈಗ ರಾಮಮಂದಿರ ಟ್ರಸ್ಟ್ ಮುಖ್ಯಸ್ಥ ಸೇರಿ ಎಂಟು ಮಂದಿಯನ್ನು ಬಂಽಸಿ ಜೈಲಿಗಟ್ಟಲಾಗಿದೆ. ಇವರಿಂದ ಈಗ ಸುಮಾರು ೮೦ ಲಕ್ಷ ರೂಪಾಯಿಯನ್ನೂ ವಸೂಲಿ ಮಾಡಲಾಗಿದೆ. ರಾಮಮಂದಿರದ ಒಳಗೇ ಅದರ ಅಭಿವೃದ್ಧಿಗೆಂದು ಇರುವ ಹಲವು ಟ್ರಸ್ಟಿಗಳು ಮತ್ತು ಇತರರು ಇತ್ತೀಚೆಗೆ ಹೊಂದಿರುವ ಐಷಾರಾಮಿ ಕಾರುಗಳು, ಆಸ್ತಿಪಾಸ್ತಿಯನ್ನು ಹೊಂದಿರುವ ಪ್ರಕರಣಗಳನ್ನು ಮಂದಿರದಲ್ಲಿ ಕೆಲಸ ಮಾಡುವ ಕಿರಿಯ ನೌಕರರು ಮತ್ತು ಟ್ರಸ್ಟ್ ಜೊಗೆ ನಂಟಿರುವ ಕೆಲವರು ಹೊರಹಾಕಿದ ಮಾಹಿತಿಯಿಂದ ಭಾರೀ ಪ್ರಮಾಣದ ಹಗರಣ ಬೆಳಕಿಗೆ ಬಂದಿದೆ.ಈ ಹಗರಣವೀಗ ಶ್ರೀರಾಮನ ಭಕ್ತರಲ್ಲಿ ಆತಂಕ ಮತ್ತು ಕಳವಳ ಉಂಟು ಮಾಡಿದೆ.

ಎರಡು ವರ್ಷಗಳ ಹಿಂದೆ ರಾಮಮಂದಿರ ನಿರ್ಮಾಣವಾದ ನಂತರ ಅಲ್ಲಿನ ಆಸುಪಾಸಿನ ಆಸ್ತಿಗೆ ಸಿಕ್ಕಾಬಟ್ಟೆ ಬೆಲೆ ಬಂದಿದೆ. ಈ ಬಗೆಗೆ ೨೦೨೧ರಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರು ಪತ್ರಿಕಾಗೋಷ್ಠಿ ಮಾಡಿ ಕೆಲವು ಆಸ್ತಿಪಾಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಽಸಿದ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಅಲ್ಲಿ ಹೇಗ ಸುಲಭವಾಗಿ ಹಣ ಮಾಡಲಾಗುತ್ತಿದೆ ಎಂಬ ಸತ್ಯಸಂಗತಿ ಬೆಳಕಿಗೆ ಬಂದಿತು.
ಉದಾಹರಣಗೆ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರು ಅಲ್ಲಿನ ಭೂಮಾಲೀಕರಿಂದ ಎರಡು ಕೋಟಿ ರೂಪಾಯಿಗೆ ಭೂಮಿಯನ್ನು ಖರೀದಿಸುತ್ತಾರೆ. ಕೆಲವೇ ಗಂಟಗಳಲ್ಲಿ ಅದೇ ಭೂಮಿಯನ್ನು ರಾಮಮಂದಿರ ಟ್ರಸ್ಟ್ ಗೆ ೧೮.೫ ಕೋಟಿಗೆ ಮಾರಾಟ ಮಾಡುತ್ತಾರೆ . ಈ ವ್ಯವಹಾರದಲ್ಲಿ ರಿಯಲ್ ಎಸ್ಟೇಟ್ ಏಜೆಂಟರು ಮತ್ತು ರಾಮಮಂದಿರ ಟ್ರಸ್ಟ್ ನ ಕೆಲವು ಟ್ರಸ್ಟಿಗಳು ಮತ್ತು ಅಧಿಕಾರಿಗಳ ಕೈವಾಡವಿರುವ ಬಲವಾದ ಶಂಕೆ ಏಳುತ್ತದೆ.ಈ ಪ್ರಕರಣದಿಂದ ರಾಮಮಂದಿರದಲ್ಲಿ ಹಣಕಾಸು ಮತ್ತು ಆಸ್ತಿಪಾಸ್ತಿಗೆ ಸಂಬಂಽಸಿದ ವ್ಯವಹಾರದಲ್ಲಿ ಭಾರೀ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬಂದು ಅದೀಗ ದೇಶ- ವಿದೇಶದ ರಾಮಭಕ್ತರಲ್ಲಿ ಮತ್ತು ಕೇಂದ್ರ ಹಾಗು ಉತ್ತರ ಪ್ರದೇಶದ ಸರ್ಕಾರದ ಉಸ್ತುವಾರಿ ಬಗೆಗೆ ನಂಬಿಕೆ ದ್ರೋಹದ ಆರೋಪಗಳು ಕೇಳಿ ಬರುತ್ತಿರುವುದು ವಿಶೇಷ.

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಿಂದಿನ ಚುನಾವಣೆಯಲ್ಲಿ ಮಂದಿರ ನಿರ್ಮಾಣದ ವಿಷಯ ಬಿಜೆಪಿಗೆ ಜಯದ ಮಾಲೆ ಹಾಕಿತು. ಆದರೆ ಮುಂದಿನ ಚುನಾವಣೆಯಲ್ಲಿ ಈಗ ಎದ್ದಿರುವ ಅಕ್ರಮ ದಂದೆ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಊಹಿಸಲು ಕಷ್ಟ. ಈಗಿನ ಪ್ರಕರಣದ ಬಗೆಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಹಲವು ಬಿಜೆಪಿ ನಾಯಕರು ಸೇರಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಆಗ್ರಹಪಡಿಸುತ್ತಿದ್ದಾರೆ. ಕಳೆದ ವಾರವಷ್ಟೇ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್, ಈ ಪ್ರಕರಣದಲ್ಲಿ ಹಲವು ದೊಡ್ಡ ನಾಯಕರೇ ಇದ್ದಾರೆ. ಸತ್ಯ ಹೇಳಿದರೆ ನನಗೆ ಅವರಿಂದ ತೊಂದರೆ ಆಗುವುದು ನಿಶ್ಚಿತ ಎಂದು ಹೇಳುವ ಮೂಲಕ ಹಗರಣದ ಬಗೆಗೆ ಹೆಚ್ಚು ಕುತೂಹಲ ಉಂಟು ಮಾಡಿದ್ದರು.

ಬಾಬ್ರಿ ಮಸೀದಿ ಕೆಡವುದರಲ್ಲಿ ಆರೋಪಿಯಾಗಿದ್ದ ಅಯೋಧ್ಯೆ ಕ್ಷೇತ್ರದ ಮಾಜಿ ಸಂಸದ ವಿನಯ್ ಕಟಿಯಾರ್‌ಯಿಂದ ಹಿಡಿದು ಕೆಲವು ಸ್ವಾಮೀಜಿಗಳು ಈ ಅಕ್ರಮಗಳ ಬಗೆಗೆ ನಿಷ್ಪಕ್ಷಪಾತ ತನಿಖೆ ಮಾಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಪಡಿಸಿzರೆ. ನಿಷ್ಪಕ್ಷಪಾತ ತನಿಖೆ ನಡೆದು ಯಾರ್ಯಾರ ತಲೆದಂಡವಾಗಲಿದೆಯೋ ಈಗಲೇ ಹೇಳಲಾಗದು. ಆದರೆ ಈ ಹಗರಣದಿಂದ ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯ ಮಂಕಾಗಲಿದೆಯೇ ಎನ್ನುವ ಪ್ರಶ್ನೆಗಳು ಈಗಲೇ ಚರ್ಚೆಯನ್ನು ಹುಟ್ಟುಹಾಕಿವೆ.

ರಾಮಮಂದಿರ ಇರುವ ಅಯೋಧ್ಯೆಯ -ಜಬಾದ್ ಲೋಕಸಭೆ ಕ್ಷೇತ್ರದಲ್ಲಿಯೇ ಕಳೆದ ಬಾರಿ ಬಿಜೆಪಿ ಜಯಗಳಿಸಲಾಗಲಿಲ್ಲ. ಆ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದಿರುವ ವಾಸ್ತವ ಸ್ಥಿತಿಯನ್ನು ಗಮನಿಸಿದರೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯ ಏನಾಗಲಿದೆ ಎಂದು ಹೀಗಲೇ ಹೇಳುವುದು ಕಷ್ಟ. ಆದರೆ ಈಗ ಬೆಳಕಿಗೆ ಬಂದಿರುವ ಹಗರಣದ ತನಿಖೆ ನಿಷ್ಟಪಕ್ಷಪಾತವಾಗಿ ನಡೆದು ತಪ್ಪಿತಸ್ತರ ವಿರುದ್ಧ ಯಾವ ಕಾನೂನು ಕ್ರಮ ಆಗಲಿದೆ ಎನ್ನುವುದರತ್ತ ಈಗ ಎಲ್ಲರ ಚಿತ್ತ.

 

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

2 hours ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

2 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

3 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

19 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

21 hours ago

ಗಾಂಧೀ ಅಭಿಯಾನ ಅರಿವಿನ ಯಾನ | ಗಾಂಧೀಜಿ ಅಹಿಂಸಾ ಮಾರ್ಗಕ್ಕೆ ಮೈಲಾರ ಮಹಾದೇವ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…

22 hours ago